ಸಿಎಂ ಲೋಕಾಯುಕ್ತ ವಿಚಾರಣೆ ಎದುರಿಸಲೇಬೇಕು: ಜಾರಕಿಹೊಳಿ

KannadaprabhaNewsNetwork |  
Published : Nov 06, 2024, 12:53 AM IST
56464 | Kannada Prabha

ಸಾರಾಂಶ

ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್ ಬಂದಾಗ ಯಾರೇ ಆದರೂ ಹಾಜರಾಗಲೇಬೇಕು. ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು. ನೋಟಿಸ್‌ನಲ್ಲಿ ಖುದ್ದು ಹಾಜರಾಗಿ ಎಂದು ಹೇಳುವುದು ಸಹಜ. ಮುಖ್ಯಮಂತ್ರಿಗಳು ಖುದ್ದು ಹಾಜರಾಗಬಹುದು ಅಥವಾ ತಮ್ಮ ಪರವಾಗಿ ವಕೀಲರನ್ನು ಕಳಿಸಬಹುದು.

ಹುಬ್ಬಳ್ಳಿ:

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದ್ದು, ಅವರು ಹಾಜರಾಗಲೇಬೇಕು, ಖಂಡಿತವಾಗಿ ಅವರು ಹಾಜರಾಗುತ್ತಾರೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆಯಿಂದ ನೋಟಿಸ್ ಬಂದಾಗ ಯಾರೇ ಆದರೂ ಹಾಜರಾಗಲೇಬೇಕು. ಲೋಕಾಯುಕ್ತ ಎಲ್ಲದಕ್ಕಿಂತಲೂ ದೊಡ್ಡದು. ನೋಟಿಸ್‌ನಲ್ಲಿ ಖುದ್ದು ಹಾಜರಾಗಿ ಎಂದು ಹೇಳುವುದು ಸಹಜ. ಮುಖ್ಯಮಂತ್ರಿಗಳು ಖುದ್ದು ಹಾಜರಾಗಬಹುದು ಅಥವಾ ತಮ್ಮ ಪರವಾಗಿ ವಕೀಲರನ್ನು ಕಳಿಸಬಹುದು. ಇಲ್ಲವೇ ಸಮಯಾಕಾಶ ತೆಗೆದುಕೊಳ್ಳಬಹುದು ಎಂದರು.

ಯಾವುದೇ ಸಭೆ ನಡೆಸಿಲ್ಲ:

ಶಿಗ್ಗಾಂವಿ ವಿಧಾನಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಜಾರಕಿಹೊಳಿ, ಮಂಗಳವಾರ ಹುಬ್ಬಳ್ಳಿಯಲ್ಲಿ ಯಾವುದೇ ಸಭೆ ನಡೆಸಿಲ್ಲ, ಎಲ್ಲರಿಗೂ ಅವರವರ ಜವಾಬ್ದಾರಿ ಬಗ್ಗೆ ತಿಳಿಸಿದ್ದೇವೆ. ಚುನಾವಣೆ ಪೂರ್ಣಗೊಳ್ಳುವ ವರೆಗೆ ಸಚಿವರು, ಶಾಸಕರು, ಮುಖಂಡರು ಶಿಗ್ಗಾಂವಿಯಲ್ಲಿಯೇ ಇರಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಇಂದಿನಿಂದ ಎಲ್ಲ ಸಚಿವರು, ನಾಯಕರು ಚುನಾವಣಾ ಕಣಕ್ಕೆ ಧುಮುಕಲಿದ್ದಾರೆ. ಪ್ರಚಾರ ಕಾರ್ಯ ಮತ್ತಷ್ಟು ಚುರುಕುಗೊಳ್ಳಲಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1ನೇ ಕ್ಲಾಸ್‌ಗೆ ವಯೋಮಿತಿ 5.5 ವರ್ಷಕ್ಕಿಳಿಸಲು ಪೋಷಕರ ಹೋರಾಟ
ಆಟೋ ಎಲ್‌ಪಿಜಿ ಕೊರತೆ ಇಲ್ಲ : ಗ್ರಾಹಕರ ವ್ಯವಹಾರ ಇಲಾಖೆ