ಗಣಿಗಾರಿಕೆಗೆ ವಿರುದ್ಧ ಕ್ರಮ ಕೈಗೊಳ್ಳದ ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Jan 23, 2026, 01:30 AM IST
ಚಿತ್ರಗಳು | Kannada Prabha

ಸಾರಾಂಶ

ಜಾಗೃತಿ ಜಾಥಾ ಉದ್ಘಾಟಿಸಿ ಚಿತ್ರನಟ, ಹೋರಾಟಗಾರ ಅಹಿಂಸಾ ಚೇತನ್‌ ಹೇಳಿಕೆ

ಕನ್ನಡಪ್ರಭ ವಾರ್ತೆ ಸಿರಿಗೆರೆ

ಬಳ್ಳಾರಿ ಗಣಿಗಾರಿಕೆ ವಿರುದ್ಧ ಪಾದಯಾತ್ರೆ ನಡೆಸಿ ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರು ಗಣಿ ಕಂಪನಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಜನರು ಬದುಕು ನಾಶವಾಗುತ್ತಿದೆ ಎಂದು ಹೋರಾಟಗಾರ, ಚಿತ್ರನಟ ಅಹಿಂಸಾ ಚೇತನ್ ಹೇಳಿದರು.

ಭೀಮಸಮುದ್ರದ ತರಳುಬಾಳು ಕಲ್ಯಾಣ ಮಂಟಪದಲ್ಲಿ ರೈತ ಸಂಘಟನೆ ಗಣಿ ಬಾಧಿತ ಪ್ರದೇಶಗಳ ಹೋರಾಟ ಸಮಿತಿ ಪರಿಸರ ಮತ್ತು ವನ್ಯಜೀವಿ ಸುರಕ್ಷಣಾ ಹೋರಾಟ ಸಮಿತಿ ಮಹಿಳಾ ಹಕ್ಕು ಹೋರಾಟ ಸಮಿತಿ ವತಿಯಿಂದ ಏರ್ಪಡಿಸಿದ್ದ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು.

ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆಗಳ ಹಲವು ತಾಲೂಕುಗಳ ಜನರು ಗಣಿಗಾರಿಕೆಯಿಂದ ರೋಸಿ ಹೋಗಿದ್ದಾರೆ. ಜನರು ಬದುಕು ವಿನಾಶದತ್ತ ಸಾಗುತ್ತಿದೆ. ಹೀಗಿದ್ದರೂ ಗಣಿಗಾರಿಕೆಯನ್ನು ಸುಲಭಗೊಳಿಸಲು ಆ ಕಂಪನಿಗಳಿಗೆ ಲೈಸೆನ್ಸ್‌ ನೀಡಲು ಸಿಂಗಲ್‌ ವಿಂಡೋ ಪದ್ಧತಿಯನ್ನು ಮುಖ್ಯಂತ್ರಿಗಳು ಜಾರಿಗೆ ತಂದಿದ್ದಾರೆ.

2010ರಲ್ಲಿ ಹೀಗಿರುವ ಮುಖ್ಯಮಂತ್ರಿಗಳು ರಿಪಬ್ಲಿಕ್ ಬಳ್ಳಾರಿ ಎಂದು ಪಾದಯಾತ್ರೆ ಮಾಡಿದರು ದೊಡ್ಡ ಪ್ರಮಾಣದಲ್ಲಿ ಹೋರಾಟ ಮಾಡಿದ್ದರು ಆದರೆ ಈಗ ನೋಡಿದರೆ ಮೈನಿಂಗ್ ಮಾಫಿಯಾಗಳು ಜೊತೆ ಕೈಜೋಡಿಸಿದ್ದಾರೆ ಎಂಬ ನಂಬಿಕೆ ಬರುತ್ತದೆ, ಆದರೆ ಸರ್ಕಾರ ಹಾಗೂ ಅಧಿಕಾರಿಗಳು ಪರಿಸರವನ್ನು ಉಳಿಸುವ ಕಾರ್ಯ ಮಾಡಲಿ ಭೀಮಸಮುದ್ರದಲ್ಲಿ ಲಾರಿಗಳ ಗ್ರಾಮದ ಒಳಗಡೆ ಓಡಾಡುವುದರಿಂದ ಬಹಳಷ್ಟು ಆರೋಗ್ಯ ಸಮಸ್ಯೆ ಕಂಡು ಬಂದಿದೆ ಎಂದು ತಿಳಿದಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನದಾಗಿ ಹೋರಾಟ ಮಾಡಲು ನಮ್ಮ ಬೆಂಬಲ ಇದೆ ಎಂದು ಹೇಳಿದರು.

ಗ್ರಾಮದ ಈಶ್ವರ ದೇವಸ್ಥಾನದಿಂದ ರೈತರು ಗ್ರಾಮಸ್ಥರು ಹಾಗೂ ಎಲ್ಲಾ ಸಂಘಟನೆಯ ಸದಸ್ಯರು ಕಾಲು ನಡಿಗೆಯ ಮೂಲಕ ಗಣಿ ಕಂಪನಿಗಳ ವಿರುದ್ಧ ಘೋಷಣೆ ಕೂಗುತ್ತಾ ಜಾಥ ನಡೆಸಿದರು.

ಇತಿಹಾಸ ಶೋಧಕರಾದ ರಾಧಾಕೃಷ್ಣ ಪಲ್ಲಕ್ಕಿ ಮಾತನಾಡಿ ಗಣಿ ಕಂಪನಿಗಳಿಂದ ಶಬ್ದ ಮಾಲಿನ್ಯ ಹಾಗೂ ಪರಿಸರ ಮಾಲಿನ್ಯ ಆಗುತ್ತಿದೆ ಪ್ರಾಣಿ ಪಕ್ಷಿಗಳು ಜಾಗ ಹುಡುಕುವ ಪರಿಸ್ಥಿತಿ ಬಂದಿದೆ ಇತ್ತೀಚಿಗೆ ಹಿಂದೂ ಸಂಪ್ರದಾಯದ ಪ್ರಕಾರ ಪಿಂಡ ಇಡುವ ಪದ್ಧತಿ ಇದೆ ಆದರೆ ಅದನ್ನು ತಿನ್ನುವುದಕ್ಕೆ ಕಾಗೆಗಳಿಲ್ಲ ಚಿಕ್ಕ ಚಿಕ್ಕ ಪಕ್ಷಿಗಳು ಕೂಡ ಕಾಣೆಯಾಗಿವೆ. ಮನುಷ್ಯ ಸಂಗ ಜೀವಿ ಅವನು ಎಲ್ಲೂ ಕೂಡ ಹೋಗಲಾರ ಒಂದೆಡೆ ನೆಲೆಸಿದರೆ ಅವನಿಗೆ ಬೇಕಾದ ಮನೆ ಕಟ್ಟಿಕೊಂಡು ವಾಸ ಮಾಡುತ್ತಾನೆ ಆದರೆ ಇಲ್ಲಿ ನೋಡಿದರೆ ಲಾರಿ ಧೂಳಿನಿಂದ ಬೇರೆ ಕಡೆ ಹೋಗುವ ಪರಿಸ್ಥಿತಿ ಬಂದಿದೆ ಗ್ರಾಮದಲ್ಲಿ ರೈತರು ಮಹಿಳೆಯರು ಹಾಗೂ ಯುವಕರು ಈ ಸಭೆಗೆ ಬಂದಿರುವುದು ಬಹಳ ಸಂತೋಷಕರ ವಿಚಾರ ಪರಿಸರವನ್ನು ಉಳಿಸಬೇಕಾದರೆ ಇಂತಹ ಸಭೆಗಳು ನಡೆಯಬೇಕು ಎಂದು ತಿಳಿಸಿದರು.

ಚಿತ್ರದುರ್ಗ ಘಟಕದ ಆಫ್ ಜಿಲ್ಲಾಧ್ಯಕ್ಷ ಬಿ.ಇ.ಜಗದೀಶ್ ಮಾತನಾಡಿ, ಗ್ರಾಮದಲ್ಲಿ ಲಾರಿಗಳು ಓಡಾಡುವುದರಿಂದ ಆರೋಗ್ಯದ ಸಮಸ್ಯೆ ಕಾಣುತ್ತಿದೆ, ಜಿಲ್ಲಾಧಿಕಾರಿಗಳು ಓಡಾಡಲು ಪರವಾನಿಗೆ ನೀಡಿದ್ದಾರೆ ಎಂದು ಲಾರಿಗಳು ಬಂದು ನಿಂತಿವೆ ಆದರೆ ಇಲ್ಲಿರುವ ಪರಿಸ್ಥಿತಿ ಅಧಿಕಾರಿಗಳಿಗೆ ಅರ್ಥವಾಗುತ್ತಿಲ್ಲ ದಯಮಾಡಿ ಲಾರಿಗಳನ್ನು ಗ್ರಾಮದ ಒಳಗಡೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಹಾಗೇನಾದರೂ ಲಾರಿಗಳು ಗ್ರಾಮದಲ್ಲಿ ಓಡಾಡಿದರೆ ನಾವು ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಹಂಪಯ್ಯನ ಮಳಿಗೆ, ಗೌರವಾಧ್ಯಕ್ಷ ತಿಪ್ಪೇಸ್ವಾಮಿ ಮಲ್ಲಾಪುರ, ಸಂಘಟನಾ ಕಾರ್ಯದರ್ಶಿ ಚಿಕ್ಕಪ್ಪನಳ್ಳಿ ರುದ್ರಸ್ವಾಮಿ, ಸಹೋದಯ ಪಕ್ಷದ ಅಧ್ಯಕ್ಷ ಯಾದವ್ ರೆಡ್ಡಿ, ಕರ್ನಾಟಕ ಗಣಿವಾದಿತ ಹೋರಾಟ ಸಮಿತಿಯ ಸಮಸ್ತಾಪಕ ಅಧ್ಯಕ್ಷ ಬಿದುರ್ಗ ರಮೇಶ್, ಭೀಮಸಮುದ್ರ ಗ್ರಾಮದ ರೈತ ಸಂಘಟನೆ ಅಧ್ಯಕ್ಷ ಶಂಕರ ಮೂರ್ತಿ, ಉಪಾಧ್ಯಕ್ಷ ಪೂರಿಯ ನಾಯಕ್, ಸದಸ್ಯರಾದ ಕುಮಾರ್ ಶಿವಕುಮಾರ್, ಮಹೇಶ್ವರಪ್ಪ, ನಿರಂಜನ್, ನಾಗರಾಜ್, ನಾಯಕ ಹಾಗೂ ಗ್ರಾಮಸ್ಥರು ಮಹಿಳೆಯರು ಯುವಕರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಾರ್ಥ ತೊರೆದು ತ್ಯಾಗ ಗುಣಗಳ ಹೊಂದಬೇಕು
ಟಾಟಾ ಸುಮೋ ಎರಿಟಿಗಾ ಕಾರು ಮುಖಾಮುಖಿ ಡಿಕ್ಕಿ: 7 ಮಂದಿಗೆ ಗಾಯ