ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದು ಮೂರು ವರ್ಷದ ಮಗುವಿನ ತುಂಟಾಟಿಕೆ, ಅಧಿಕಾರ ಅಂದಂಗೆ ಆಗಿದೆ ಎಂದು ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಗ್ಯಾರಂಟಿಗಳ ಹಿನ್ನೆಲೆ ಎಲ್ಲ ದರ ಏರಿಕೆ ಮಾಡಿದ್ದಾರೆ. ಶಾಲಾ ಮಕ್ಕಳಿಗೆ ಶೂ ನೀಡಿಲ್ಲ. ಅಂಗನವಾಡಿ, ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ಮೂರು ವರ್ಷದಲ್ಲಿ ಖಜಾನೆ ಖಾಲಿ ಮಾಡಿಕೊಂಡು ಕುಳಿತಿದ್ದಾರೆ. ಮೂರು ವರ್ಷದ ಮಗುವಿನ ತುಂಟಾಟಿಕೆ ಆಡಳಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದಾಗಿದೆ ಎಂದರು.
ಸಿಎಂ ಬದಲಾವಣೆ ಚರ್ಚೆಯೇ ಕಾಂಗ್ರೆಸ್ ಅಭಿವೃದ್ಧಿ ಆಗಿದೆ. ಸಿದ್ದರಾಮಯ್ಯ ನಿಂತಿರುವ ನಾಲ್ಕು ಕಾಲುಗಳಲ್ಲಿ ಒಂದನ್ನು ಡಿ.ಕೆ. ಶಿವಕುಮಾರ ಕಿತ್ತಿಕೊಂಡಿದ್ದಾರೆ. ಈ ಖುರ್ಚಿಗಾಗಿ ಕಿತ್ತಾಟ ನಡೆದಿದೆ ಎಂದು ಆರೋಪಿಸಿದರು.ಪ್ರಧಾನಿ ಮೋದಿಯಿಂದ ಮಿತವ್ಯಯ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಮಿತವ್ಯಯ ಬಳಕೆ ಮಾಡಿದ್ದಾರೆ. ಮೋದಿ ಹೇಳಿದಂತೆ ಅವರು ಭದ್ರತಾ ವಾಹನ ಕಡಿಮೆ ಮಾಡಿದ್ದಾರೆ. ಈಗ ರಾಜ್ಯದ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸಹ ತಮ್ಮ ಬೆಂಗಾವಲು ಪಡೆ ಕಡಿಮೆ ಮಾಡಬೇಕು. ರಾಹುಲ್ ಗಾಂಧಿ, ಸಿದ್ದರಾಮಯ್ಯ ದೇಶ ಮುಖ್ಯ ಎನ್ನುತ್ತಿಲ್ಲ, ಅವರು ಕುಟುಂಬ ಮುಖ್ಯ ಎನ್ನುತ್ತಾರೆ. ಮೋದಿ ಅವರಿಗೆ ಬೆದರಿಕೆಗಳಿದ್ದರೂ ಬೆಂಗಾವಲು ಪಡೆ ಕಡಿಮೆ ಮಾಡಿದ್ದಾರೆ. ಈಗ ಕಾಂಗ್ರೆಸ್‌ನವರು ಬೆಂಗಾವಲು ಪಡೆ ಕಡಿಮೆ ಮಾಡಬೇಕು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ದೇಶ ಆಳ್ವಿಕೆ ಮಾಡಿದ್ದಾರೆ. ಇಂದಿರಾ ಗಾಂಧಿ ಹಾಗೂ ಚಿದಂಬರ ಸಹ ಹಿಂದೆ ಚಿನ್ನ ಖರೀದಿಸಬಾರದು ಎಂದಿದ್ದರು.