ಲ್ಯಾಂಡ್ ಜಿಹಾದ್‌ಗೆ ಸಿಎಂ, ಸಿದ್ದರಾಮಯ್ಯ, ಸಚಿವ ಜಮೀರ್ ಕಾರಣ: ಶಿವಕುಮಾರ್ ಆರೋಪ

KannadaprabhaNewsNetwork |  
Published : Nov 04, 2024, 12:22 AM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ಬಿಜೆಪಿ ಪಕ್ಷದ ಸಹಕಾರ ವಿಭಾಗದ ರಾಜ್ಯ ಪ್ರಕೋಷ್ಠಕ ಅಧ್ಯಕ್ಷ ತಾಲೂಕು ಬಿಜೆಪಿ ಮುಖಂಡ ಹೆಚ್.ಎಸ್.ಶಿವಕುಮಾರ್ | Kannada Prabha

ಸಾರಾಂಶ

ರೈತರ ಭೂಮಿಗೆ ಸಂಬಂಧಪಟ್ಟಂತೆ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ, ಸಮಸ್ಯೆ ಉಂಟುಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಹುನ್ನಾರಗಳೇ ಕಾರಣವಾಗಿವೆ. ಈ ಅಕ್ರಮ ವಿರುದ್ಧ ನ.4ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಸಹಕಾರ ವಿಭಾಗದ ರಾಜ್ಯ ಪ್ರಕೋಷ್ಠಕ ಅಧ್ಯಕ್ಷ, ತಾಲೂಕು ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

ಚನ್ನಗಿರಿ: ರೈತರ ಭೂಮಿಗೆ ಸಂಬಂಧಪಟ್ಟಂತೆ ಪಹಣಿಯಲ್ಲಿ ವಕ್ಫ್ ಭೂಮಿ ಎಂದು ನಮೂದಿಸಿ, ಸಮಸ್ಯೆ ಉಂಟುಮಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಹುನ್ನಾರಗಳೇ ಕಾರಣವಾಗಿವೆ. ಈ ಅಕ್ರಮ ವಿರುದ್ಧ ನ.4ರಿಂದ ನಿರಂತರ ಹೋರಾಟ ನಡೆಸಲಾಗುವುದು ಎಂದು ಬಿಜೆಪಿ ಸಹಕಾರ ವಿಭಾಗದ ರಾಜ್ಯ ಪ್ರಕೋಷ್ಠಕ ಅಧ್ಯಕ್ಷ, ತಾಲೂಕು ಬಿಜೆಪಿ ಮುಖಂಡ ಎಚ್.ಎಸ್. ಶಿವಕುಮಾರ್ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಲ್ಯಾಂಡ್ ಜಿಹಾದ್‌ನಂತಿದೆ. ಇದರ ವಿರುದ್ಧ ರೈತರು ಶೀಘ್ರವೇ ಪಹಣಿ ಪರಿಶೀಲನಾ ಅಭಿಯಾನ ಹಮ್ಮಿಕೊಳ್ಳುವರು. ಸರ್ಕಾರದ ಈ ನಿರ್ಲಕ್ಷ್ಯ ತುಘಲಕ್ ಮಾದರಿ ಆಡಳಿತದಂತಿದೆ ಎಂದು ಟೀಕಿಸಿದರು.

ವಿಜಯಪುರ, ಬೀದರ್, ದೆಹಲಿ, ಕಲಬುರಗಿ ಜಿಲ್ಲೆಗಳಲ್ಲಿ ಲಕ್ಷಾಂತರ ಹೆಕ್ಟರ್ ಜಾಗವನ್ನು ವಕ್ಫ್ ಆಸ್ತಿ ಎನ್ನುತ್ತಾರೆ. ಇದು ಕೇವಲ ಬಿಜೆಪಿ ಹೋರಾಟವಲ್ಲ, ಸಂತ್ರಸ್ತ ರೈತರು, ಎಲ್ಲ ವರ್ಗಗಳ ಜನರ ಹೋರಾಟ ಇದಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಗಿರೀಶ್ ನಾಯ್ಕ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಕೆ.ಎಂ,ಪ್ರಕಾಶ್ ಉಪಸ್ಥಿತರಿದ್ದರು.

- - - -3ಕೆಸಿಎನ್‌ಜಿ2:

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಮುಖಂಡ ಎಚ್.ಎಸ್.ಶಿವಕುಮಾರ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!