ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ: ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

KannadaprabhaNewsNetwork |  
Published : Mar 07, 2026, 01:00 AM IST
ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಉಜ್ಜಿನಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿದ್ದರಿಂದ ಉಜ್ಜಯಿನಿ ಸದ್ಧರ್ಮ ಪೀಠದಲ್ಲಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಿದ ನಂತರ ಕೇಕ್ ಕಟ್ ಮಾಡಿ ಸಿದ್ಧರಾಮಯ್ಯ ಅವರ ಅಭಿಮಾನಿಗಳು ಸಂಭ್ರಮಿಸಿದರು.  | Kannada Prabha

ಸಾರಾಂಶ

ಕರ್ನಾಟಕದಲ್ಲಿ ಈ ಬಾರಿ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ.

ಕೂಡ್ಲಿಗಿ: ಕರ್ನಾಟಕದಲ್ಲಿ ಈ ಬಾರಿ ದಾಖಲೆಯ 17ನೇ ಬಜೆಟ್ ಮಂಡನೆ ಮಾಡಿ ದಾಖಲೆ ಮಾಡಿದ ರಾಜ್ಯದ ಏಕೈಕ ಮುಖ್ಯಮಂತ್ರಿ ಸಿದ್ದರಾಮಯ್ಯ. ಅವರ ಸಮಬಾಳು, ಸಮಪಾಲು ಎನ್ನುವ ತತ್ವದಡಿ ಜೀವನವನ್ನು ಸಮಾಜಕ್ಕೆ ಮುಡಿಪಾಗಿಟ್ಟವರು. ಇಂತಹ ಧೀಮಂತ ಮುಖ್ಯಮಂತ್ರಿ ನಮ್ಮ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದೇ ರಾಜ್ಯದ ಶ್ರೀಸಾಮಾನ್ಯನಿಗೆ ಹೆಮ್ಮೆ ಇದೆ ಎಂದು ಹಾಲುಮತ ಸಮಾಜದ ಹಿರಿಯ ಮುಖಂಡ ಎಂ.ಮಲ್ಲಿಕಾರ್ಜುನ ಹೇಳಿದರು.

ತಾಲೂಕಿನ ಉಜ್ಜಿನಿ ಗ್ರಾಮದಲ್ಲಿ ಶುಕ್ರವಾರ ಅವರು, ಸಿದ್ದರಾಮಯ್ಯ ಸುದೀರ್ಘ ಬಜೆಟ್ ಮಂಡಿಸಿದ ಹಿನ್ನೆಲೆಯಲ್ಲಿ ಉಜ್ಜಿನಿ ಸದ್ಧರ್ಮ ಪೀಠದ ಮರುಳಿಸಿದ್ದೇಶ್ವರ ಸ್ವಾಮಿಗೆ ಶುಕ್ರವಾರ ರುದ್ರಾಭಿಷೇಕ ಮಾಡಿ, ಕೇಕ್ ಕತ್ತರಿಸಿ ಬಜೆಟ್ ಸಂಭ್ರಮಾಚರಣೆ ಮಾಡಿ ನಂತರ ಮಾತನಾಡಿದರು.

ರಾಜ್ಯದಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿ ಇರುವುದರಿಂದ ಎಲ್ಲ ಅತೀ ಹಿಂದುಳಿದ ಸಮುದಾಯಗಳಿಗೂ ಈ ಬಾರಿಯ ಬಜೆಟ್ ನಲ್ಲಿ ನ್ಯಾಯ ದೊರಕಿದೆ. ಸಿದ್ದರಾಮಯ್ಯ ತುಳಿತಕ್ಕೊಳಗಾದ ಸಮುದಾಯಗಳ ಬಗ್ಗೆ ಕಾಳಜಿ ಇಟ್ಟುಕೊಂಡು ಆಡಳಿತ ನಡೆಸುವ ಮೂಲಕ ಸಮಾನತೆ ಎತ್ತಿ ಹಿಡಿಯುವ ಮೂಲಕ ಮೌಲ್ಯಾಧಾರಿತ ಜನಮರೆಯದ ನಾಯಕರಾಗಿದ್ದಾರೆ ಎಂದರು.

ಸಿದ್ದರಾಮಯ್ಯ ರಾಜ್ಯದ ಬಡವರು, ದೀನ ದಲಿತರು ಮತ್ತು ಎಲ್ಲ ವರ್ಗದ ಬಡಜನರ ಸರ್ವತೋಮುಖ ಅಭಿವೃದ್ಧಿಗಾಗಿ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದರ ಮೂಲಕ ರಾಜ್ಯದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಒನಕೇರಿ ಮಂಜುನಾಥಸ, ಸೋವೇನಹಳ್ಳಿ ಪ್ರಕಾಶ, ಜಂಡೆಪ್ಪರ ನಾಗರಾಜ್, ಕೊಟ್ಟೂರು ಹೋಬಳಿ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದ ಅಧ್ಯಕ್ಷ ಉಜ್ಜಿನಿ ರುದ್ರಪ್ಪ ಗ್ರಾಪಂ ಮಾಜಿ ಅಧ್ಯಕ್ಷ ಚೌಡಪ್ಪ, ಎಪಿಎಂಸಿ ನಿರ್ದೇಶಕ ಎಸ್.ಕೊಡದಪ್ಪ, ಕಾಂಗ್ರೆಸ್ ಮುಖಂಡರಾದ ಬಣವಿಕಲ್ಲು ಯರ್ರಿಸ್ವಾಮಿ, ಕನಕ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಲೋಕಪ್ಪ, ವಕೀಲ ಮರುಳಸಿದ್ದಪ್ಪ, ಸಣ್ಣರಂಗಪ್ಪ, ಒಬಿಸಿ ಬ್ಲಾಕ್ ಅಧ್ಯಕ್ಷ ಬಿಂಗಿ ವೆಂಕಟೇಶ, ಓಬಳೇಶ, ಸಲಾಂಸಾಹೇಬ್, ಶಾಹೀರಸಾಹೇಬ್, ಬಂಗಾರಿ ಶಿವಣ್ಣ, ಇಸ್ಮಾಯಿಲ್, ಕಮ್ಮಾರ ರುದ್ರಪ್ಪ, ಸೋವೇನಹಳ್ಳಿ ರಾಮಣ್ಣ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಿಂದ ರೋಶನಿ ನಿಲಯದಲ್ಲಿ ಅಂ.ರಾ. ‘ಫೋರೆನ್ಸಿಕ್‌ ಫ್ಯೂಷನ್’
ಆಯುರ್ವೇದ ಸಂಶೋಧನೆಗಳು ವ್ಯಾಪಾರ ಅವಕಾಶಗಳಾಗಿ ರೂಪುಗೊಳ್ಳಲಿ: ಡಾ.ಲಕ್ಷ್ಮೀ ನಾರಾಯಣ ಶೆಣೈ