ಬಲ್ಡೋಟ ಕಾರ್ಖಾನೆ ಆಗಲು ಸಿಎಂ ಸಿದ್ದರಾಮಯ್ಯ ಬಿಡಬಾರದು: ವಿಶ್ವನಾಥ

KannadaprabhaNewsNetwork |  
Published : Apr 16, 2026, 02:15 AM IST
೧೫ಕೆಪಿಎಲ್‌೧೩ ಕೊಪ್ಪಳ ನಗರದ ನಗರಸಭೆ ಬಳಿ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಬಲ್ಡೋಟಾ ಹಠಾವೋ ಅನಿರ್ದಿಷ್ಠಾವಧಿ ಧರಣಿಯಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ ಬುಧವಾರ ಪಾಲ್ಗೊಂಡು ಮಾತನಾಡಿದರು | Kannada Prabha

ಸಾರಾಂಶ

ಸರ್ವೋಚ್ಚ ನ್ಯಾಯಾಲಯದ ಆದೇಶ ಒಂದಿದೆ. ಜಿಲ್ಲಾಧಿಕಾರಿ ಕೆರೆ ಸಂರಕ್ಷಣೆ ಮಾಡಲು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ

ಕೊಪ್ಪಳ: ಬಲ್ಡೋಟ ಕಾರ್ಖಾನೆ ಆಗಲು ಸಿಎಂ ಸಿದ್ದರಾಮಯ್ಯ ಬಿಡಬಾರದು. ಅವರಿಗೆ ಜನರ ಸೇವೆಗಿಂತ ದೊಡ್ಡ ಕೆಲಸ ಇನ್ನೇನಿದೆ. ಬಿಟ್ಟರೆ ಸ್ಮಶಾನ ಆಗುತ್ತದೆ, ಮತ್ತೆ ಜನಪ್ರತಿನಿಧಿಗಳು ಬಾಂಬೆ ಸೇರಬೇಕಾಗುತ್ತದೆ ಎಂದು ಎಂಎಲ್ಸಿ ಎಚ್. ವಿಶ್ವನಾಥ ಆತಂಕ ವ್ಯಕ್ತಪಡಿಸಿದರು.

ನಗರದ ನಗರಸಭೆ ಬಳಿ ಜಿಲ್ಲಾ ಬಚಾವೋ ಆಂದೋಲನ ಸಮಿತಿಯ ಜಂಟಿ ಕ್ರಿಯಾ ವೇದಿಕೆಯಿಂದ ನಡೆಯುತ್ತಿರುವ ಬಲ್ಡೋಟಾ ಹಠಾವೋ ಅನಿರ್ದಿಷ್ಠಾವಧಿ ಧರಣಿಯಲ್ಲಿ ಬುಧವಾರ ಪಾಲ್ಗೊಂಡು ಮಾತನಾಡಿದ ಅವರು, 167 ನೇ ದಿನ ನಿರಂತರ ಹೋರಾಟ ಮಾಡೋದು ಅಂದರೆ ಸಾಮಾನ್ಯ ವಿಷಯ ಅಲ್ಲ.ಸಚಿವ ಶಿವರಾಜ ತಂಗಡಗಿ, ಶಾಸಕರು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಸರ್ವೋಚ್ಚ ನ್ಯಾಯಾಲಯದ ಆದೇಶ ಒಂದಿದೆ. ಜಿಲ್ಲಾಧಿಕಾರಿ ಕೆರೆ ಸಂರಕ್ಷಣೆ ಮಾಡಲು ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಇಲ್ಲಿ ಅವರೇ ಅದನ್ನು ಮಾರಿದ್ದಾರೆ. ಕೂಡಲೇ ಕೇಸ್ ಹಾಕಿ ಕಾನೂನು ಹೋರಾಟ ಮಾಡಬೇಕು. ವಿರೋಧ ಪಕ್ಷ ಏನು ಮಾಡ್ತಿವೆ? ಅಶೋಕ ಅವರು ಏನು ಮಾಡ್ತಾ ಇದ್ದಾರೆ? ಇದಕ್ಕಿಂತ ದೊಡ್ಡ ವಿಷಯ ಬೇಕಾ? ಈ ಹೋರಾಟಕ್ಕೆ ನನ್ನ ಬೆಂಬಲ ಇದೆ ಎಂದರು.

ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ ಮಾತನಾಡಿ ಶಾಸಕ,ಸಂಸದ, ಸಚಿವರು ಇತ್ತ ಗಮನ ಕೊಡ್ತಿಲ್ಲ. ಗವಿಶ್ರೀಗಳು ಹೇಳಿದ ಹಾಗೆ ಸರ್ಕಾರ ಅನುಮತಿ ಕೊಟ್ಟಿದೆ. ಅವರೇ ಅದನ್ನು ಸರಿಪಡಿಸಿ ಎಂದರೂ ಕೇರ್ ಮಾಡ್ತಿಲ್ಲ. ಕೂಡಲೇ ಸರ್ವ ಪಕ್ಷ ನಿಯೋಗ ತೆಗೆದುಕೊಂಡು ಹೋಗಬೇಕು ಎಂದರು.

ಧರಣಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಸಂಚಾಲಕ ಮಲ್ಲಿಕಾರ್ಜುನ ಬಿ.ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಹಾದಿಮನಿ, ಮಹಿಳಾ ನಾಯಕಿಯರಾದ ಸರೋಜಾ ಬಾಕಳೆ, ಕಾವ್ಯಾ ಗಡಾದ, ವಕೀಲ ಬಿ.ಬಿ.ಪಾಟೀಲ್, ಎಚ್.ವೈ ಕಮ್ಮಾರ, ಎನ್.ವಿ. ಹಾಳಕೇರಿ, ನಿವೃತ್ತ ಕಾರ್ಮಿಕ ನಿರೀಕ್ಷಕ ಶಾಂತಯ್ಯ ಅಂಗಡಿ, ರಾಜಶೇಖರ ಏಳುಭಾವಿ, ರವಿ ಕಾಂತನವರ, ಬಸವರಾಜ ನರೇಗಲ್, ಎಸ್.ಎಂ ಕಂಬಾಳಿಮಠ, ಶರಣು ಪಾಟೀಲ್, ಶರಣು ಶೆಟ್ಟರ್, ಮಹಾದೇವಪ್ಪ ಮಾವಿನಮಡು, ನರೇಂದ್ರ ಪಾಟೀಲ್, ಯಮನೂರಪ್ಪ ಹಾಲಳ್ಳಿ ಬಸಾಪುರ, ಗುರುರಾಜ ಬಸಾಪುರ, ಹನುಮಂತ ಬಸಾಪುರ, ಬಸವರಾಜಪ್ಪ ಶೆಟ್ಟರ್, ಬಸಪ್ಪ ಕಲಕೇರಿ, ನಾಗರಾಜ ಕುಷ್ಟಗಿ, ಶಿವಪ್ಪ ಹಲಗೇರಿ, ಗುರಪ್ಪ ಕಲಕೇರಿ, ಪತ್ರಕರ್ತ ರುದ್ರಪ್ಪ ಭಂಡಾರಿ, ಮೂಕಪ್ಪ ಮೇಸ್ತ್ರಿ ಬಸಾಪುರ, ಸಂಜೀವದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ, ಚನ್ನಮ್ಮ ಕಲಕೇರಿ, ವಿಜಯಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಧರ್ಮವೇ ಪ್ರಪಂಚಕ್ಕೆ ಆಧಾರ ನಮ್ಮದು ಮಾತ್ರ ಧರ್ಮ ಉಳಿದವು ಮತಗಳು: ವಿಧುಶೇಖರ ಶ್ರೀಗಳು
ಲ್ಯಾಂಡ್ ಜಿಹಾದ್: ಪ್ರಮೋದ್ ಮುತಾಲಿಕ್ ಆಕ್ರೋಶ