ಕೊಪ್ಪಳ: ಹಳ್ಳಿಯಲ್ಲಿ ಸುಗ್ಗಿ ಮಾಡುವಾಗ,ಜೋಳ ಕೊಯ್ಯುವಾಗ, ಹತ್ತಿ ಬಿಡಿಸುವಾಗ ಪದ ಕಟ್ಟಿ ಹಾಡುಗಳನ್ನು ನಮ್ಮ ತಾಯಂದಿರು ಹಾಡ್ತಾ ಇದ್ದರು. ಆದರೆ, ಇಂದು ಸಿನಿಮಾ,ಮೊಬೈಲ್ ಪ್ರಭಾವದಿಂದ ನಮ್ಮ ಜಾನಪದ ಮರೆತು ಬಿಟ್ಟಿದ್ದಾರೆ ಎಂದು ಜಾನಪದ ಅಕಾಡೆಮಿ ಸದಸ್ಯ,ಜಾನಪದ ಕಲಾವಿದ ಡಾ.ಜೀವನಸಾಬ ಬಿನ್ನಾಳ ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ ಮಾರುತಿ ಎಂ.ಎಚ್., ನಮ್ಮ ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಕಲೆ ಸಂಸ್ಕೃತಿ ಉಳಿದಿರುವುದು ರಂಗಭೂಮಿಯಿಂದ. ಅನೇಕ ಕಲಾವಿದರು ನಮ್ಮ ಸುತ್ತಮುತ್ತ ಇದ್ದಾರೆ. ಅಂತಹ ಕಲೆ ಗುರುತಿಸಿ ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಂದಿನ ಯುವಕರು ಅತಿ ಹೆಚ್ಚು ಮೊಬೈಲ್ ಬಳಸುವುದರಿಂದ ಕಲೆ ಅಂದರೆ ಏನು ಜಾನಪದ ಅಂದರೆ ಏನು ಯಾವುದು ಗೊತ್ತಾಗುವುದಿಲ್ಲ. ಇಂತಹ ಕಾರ್ಯಕ್ರಮಗಳು ಆಗಾಗ ಗ್ರಾಮೀಣ ಪ್ರದೇಶದಲ್ಲಿ ನಡೆದಾಗ ಸಂಗೀತದ ಬಗ್ಗೆ ಆಸಕ್ತಿ ಬರುತ್ತದೆ ಎಂದರು.
ಸಂಗೀತ ಶರಣಪ್ಪ ಗಂಗಾವತಿ ಅವರಿದ ಜಾನಪದ ಸಂಗೀತ, ಮೆಹಬೂಬ್ ಕಿಲ್ಲೆದಾರ್ ಅವರಿಂದ ತತ್ವಪದ, ಅಲ್ಲಾಭಕ್ಷಿ ಎ.ಎಂ. ವಾಲಿಕಾರ್ ಅವರಿಂದ ಶಾಸ್ತ್ರೀಯ ಸಂಗೀತ, ನಾಗರಾಜ್ ಶ್ಯಾವಿ ಭಾಗ್ಯನಗರ ಅವರಿಂದ ಬಾನ್ಸುರಿ ವಾದನ, ಅಪರ್ಣ ಹೆಗಡೆ ಭಾಗ್ಯನಗರ ಅವರಿಂದ ಭರತನಾಟ್ಯ ಪ್ರದರ್ಶನಗೊಂಡವು. ರಾಮಚಂದ್ರಪ್ಪ ಉಪ್ಪಾರ್ ಭಾಗ್ಯನಗರ, ಮಾರುತಿ ಬಿನ್ನಾಳ, ಸಂಜನ ಬೆಲ್ಲದ ವಾದ್ಯಗಳ ಸಾಥ್ ನೀಡಿದರು.ಶರಣ ಸಾಹಿತ್ಯ ಪರಿಷತ್ ಕುಷ್ಟಗಿ ತಾಲೂಕಾಧ್ಯಕ್ಷ ನಟರಾಜ್ ಸೋನಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ್, ಸಂಸ್ಕೃತಿ ಸ್ವರ ಸಂಗೀತ ಕಲಾ ಶಿಕ್ಷಣ ಸಂಸ್ಥೆ ಚಾಮಲಾಪುರ್ ಅಧ್ಯಕ್ಷ ಮರಿಯಪ್ಪ ಚಾಮಲಾಪುರ, ಕರಿಬಸವ ಮಹಾಸ್ವಾಮಿಗಳು, ರಾಮನಗೌಡ ದಳಪತಿ, ದ್ಯಾಮಣ್ಣ ಪೂಜಾರಿ, ಹುಲಗಪ್ಪ, ರಾಂಪುರ್ ರಮೇಶ ಯಾದವ್, ಶ್ರೀಶೈಲ ಮೇಟಿ, ವೆಂಕನಗೌಡ ಮೇಟಿ, ಹನುಮಂತ ಗುಡದಳ್ಳಿ, ಮಂಜುನಾಥ ಲದ್ದಿ, ಮರೇಗೌಡ ಬಗನಾಳ, ಹೊಟ್ಟೆ ಹನುಮಪ್ಪ, ಶ್ರೀನಿವಾಸಾಚಾರ್ ಜೋಶಿ, ಗೋಪಾಲ್ ರಾವ್ ಕುಲಕರ್ಣಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. ಬಾಲಾಜಿ ವೈ.ಗದುಗಿನ ಕಾರ್ಯಕ್ರಮ ನಿರೂಪಿಸಿದರು.