ಕನ್ನಡಪ್ರಭ ವಾರ್ತೆ ಕಲಬುರಗಿ
ಕೆಕೆಆರ್‌ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಅವರು ಬೆಂಗಳೂರಿನಿಂದಲೇ ವಿಡಿಯೋ ಸಂವಾದದಲ್ಲಿ ಮಾಧ್ಯಮವದವರಿಗೆ ಈ ಮಾಹಿತಿ ನೀಡಿದ್ದಾರೆ.
ಜೂ. 14 ರ ಶುಕ್ರವಾರ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ರಾಜ್ಯಸಭೆ ವಿಪಕ್ಷ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ್, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪೂರ, ಈಶ್ವರ ಖಂಡ್ರೆ, ಸುಧಾಕರ್ ಸೇರಿದಂತೆ ಅನೇಕರು ಯಾದಗಿರಿ ಆರೋಗ್ಯ ಅವಿಷ್ಕಾರ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಾರೆಂದರು.ಕಲಬುರಗಿಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಆರೋಗ್ಯ ರಂಗಕ್ಕೆ 800 ಕೋಟಿ ರು. ವೆಚ್ಚ ಮಾಡುವ ನಿರ್ಧಾರವಾಗಿತ್ತು. ಈ ಪೈಕಿ ಮೊದಲ ಹಂತದಲ್ಲಿ 440. 63 ಕೋಟಿ ರು. ಹಣವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ವೆಚ್ಚ ಮಾಡಲಾಗುತ್ತಿದೆ. ಈ ಹಣದಲ್ಲಿ 220 ಕೋಟಿಗೂ ಹೆಚ್ಚು ಕೆಕೆಆರ್‌ಡಿಬಿ ಪಾಲಿದೆ ಎಂದು ಡಾ. ಅಜಯ್ ಸಿಂಗ್ ಮಾಹಿತಿ ನೀಡಿದರು.
1) 1200 ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ
3) 1 ನಗರ ಆರೋಗ್ಯ ಕೇಂದ್ರಕ್ಕೂ ಚಾಲನೆ
5) 3 ಸಿಎಚ್‌ಸಿಗಳನ್ನು 100 ರಿಂದ 1500 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು
7) 2 ಪಿಎಚ್‌ಸಿಗಳನ್ನು 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವುದು
ಕಲ್ಯಾಣ ನಾಡಿನ 7 ಜಿಲ್ಲೆಗಳಲ್ಲಿ ಕೆಕೆಆರ್‌ಡಿಬಿಯಿಂದಲೇ ಜಯದೇವ, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಹಲವು ಆರೋಗ್ಯ ಮೂಲ ಸವಲತ್ತು ಸೃಷ್ಟಿಗೆ 1, 500 ರಿಂದ 1800 ಕೋಟಿ ರು. ವೆಚ್ಚದಲ್ಲಿ ಕೆಲಸಗಳಾಗುತ್ತಿವೆ. 2 ವರ್ಷದಲ್ಲಿ ಇವೆಲ್ಲವೂ ಪೂರ್ಣಗೊಂಡು ಜನರಿಗೆ ಉಪಯೋಗಕ್ಕೆ ಅಣಿಯಾಗಲಿವೆ ಎಂದರು.
----------------
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ನುಡಿದಂತೆ ನಡೆಯುತ್ತಿದ್ದೇವೆ. ಕಲ್ಯಾಣ ಭಾಗದಲ್ಲಂತೂ ಕೆಕೆಆರ್‌ಡಿಬಿ ಜನಾರೋಗ್ಯಕ್ಕಾಗಿ ಹೆಚ್ಚಿನ ಕಾಳಜಿ ತೋರಿ ಯೋಜನೆ ರೂಪಿಸುತ್ತಿದೆ. ಕ್ಯಾಬಿನೆಟ್ ನಿರ್ಣಯದ 800 ಕೋಟಿ ರು. ಪೈಕಿ ಮಂಡಳಿಯೇ ಮೊದಲ ಹಂತದಲ್ಲಿ 440 ಕೋಟಿ ರು. ಯೋಜನೆಗೆ ಚಾಲನೆ ನೀಡುತ್ತಿರೋದು ಐತಿಹಾಸಿಕ ಸಂಗತಿ. ಅಕ್ಷರ ಆವಿಷ್ಕಾರ, ಅರಣ್ಯ ಆವಿಷ್ಕಾರ, ಕೌಶಲ್ಯ ಆವಿಷ್ಕಾರದಡಿಯಲ್ಲಿ ಮಂಡಳಿ ಅದಾಗಲೇ ಹೆಚ್ಚಿನ ಕೆಲಸಗಳನ್ನು ಮಾಡುತ್ತಿದೆ.ಡಾ. ಅಜಯ್ ಧರ್ಮಸಿಂಗ್, ಅಧ್ಯಕ್ಷರು, ಕೆಕೆಆರ್‌ಡಿಬಿ, ಕಲಬುರಗಿ