ಗ್ಯಾರಂಟಿಗಳು ಚುನಾವಣೆ ಗೆಲುವಿಗೆ ಸಹಕಾರಿ ಎಂದ ಪ್ರಕಾಶ್

KannadaprabhaNewsNetwork |  
Published : Jun 13, 2025, 02:26 AM IST
10ಎಚ್ಎಸ್ಎನ್12 :  | Kannada Prabha

ಸಾರಾಂಶ

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ಅತೀ ಹೆಚ್ಚು ಅಂದರೆ ೮೧,೧೧೧ ಜನ ನೋಂದಣಿಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಸರ್ಕಾರದಿಂದ ಫಲಾನುಭವಿಗಳಿಗೆ ೧೫,೮೨,೪೨,೦೦೦ ರು. ಹಣ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಒಟ್ಟು ೮೨,೪೩೩ ಜನ ಫಲಾನುಭವಿಗಳು ಸದರಿಯೋಜನೆಯನ್ನು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಶಕ್ತಿ ಯೋಜನೆ ಅಡಿ ಒಂದು ತಿಂಗಳಿಗೆ ೮,೨೫,೬೫೮ ಜನ ಪ್ರಯಾಣ ಮಾಡಿದ್ದು ಇದರಿಂದ ಸರ್ಕಾರ ೩,೭೧,೦೬,೪೭೨ ವ್ಯಯ ಮಾಡುತ್ತಿದೆ ಎಂದು ಪ್ರಕಾಶ್‌ ಗೌಡ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ತಾಲೂಕು ಗ್ಯಾರಂಟಿ ಅನುಷ್ಠಾನದ ವತಿಯಿಂದ ಸುಮಾರು ಶೇ.೯೮% ರಷ್ಟು ಯೋಜನೆಯನ್ನು ಜನರಿಗೆ ತಲುಪಿಸುವಲ್ಲಿ ಸಮಿತಿಯು ಯಶಸ್ವಿಯಾಗಿದೆ ಎಂದು ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಹಾಗೂ ಹಿರಿಯ ವಕೀಲರಾದ ಎಲ್. ಪಿ. ಪ್ರಕಾಶ್‌ ಗೌಡ ತಿಳಿಸಿದರು.

ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಮಾತನಾಡಿ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲೇ ಚನ್ನರಾಯಪಟ್ಟಣ ತಾಲೂಕು ಅತೀ ಹೆಚ್ಚು ಅಂದರೆ ೮೧,೧೧೧ ಜನ ನೋಂದಣಿಯಾಗಿದ್ದು, ಏಪ್ರಿಲ್ ಅಂತ್ಯಕ್ಕೆ ಸರ್ಕಾರದಿಂದ ಫಲಾನುಭವಿಗಳಿಗೆ ೧೫,೮೨,೪೨,೦೦೦ ರು. ಹಣ ಸಂದಾಯವಾಗಿದೆ. ಅನ್ನಭಾಗ್ಯ ಯೋಜನೆ ಅಡಿ ಒಟ್ಟು ೮೨,೪೩೩ ಜನ ಫಲಾನುಭವಿಗಳು ಸದರಿಯೋಜನೆಯನ್ನು ಉಪಯೋಗವನ್ನು ಪಡೆದುಕೊಳ್ಳುತ್ತಿದ್ದು ಶಕ್ತಿ ಯೋಜನೆ ಅಡಿ ಒಂದು ತಿಂಗಳಿಗೆ ೮,೨೫,೬೫೮ ಜನ ಪ್ರಯಾಣ ಮಾಡಿದ್ದು ಇದರಿಂದ ಸರ್ಕಾರ ೩,೭೧,೦೬,೪೭೨ ವ್ಯಯ ಮಾಡುತ್ತಿದೆ. ಗೃಹ ಜ್ಯೋತಿ ಯೋಜನೆ ಅಡಿ ತಾಲೂಕಿನಲ್ಲಿ ಒಟ್ಟು ೮೩,೨೫೦ ಜನ ನೋಂದಣಿಯಾಗಿದ್ದು ಸರ್ಕಾರ ೨೦೨೫ರ ತಿಂಗಳಲ್ಲಿ ತಿಂಗಳಿಗೆ ೨.೮೫ ಕೋಟಿ ರು. ವೆಚ್ಚ ಮಾಡುತ್ತಿದ್ದು ಯುವನಿಧಿ ಯೋಜನೆ ಅಡಿಯಲ್ಲಿ ೯೫೮ ಜನ ಪದವೀಧರರು ನೋಂದಣಿಯಾಗಿದ್ದು ಸರ್ಕಾರದ ಯೋಜನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಈಎಲ್ಲಾ ೫ ಯೋಜನೆಗಳಿಂದ ತಾಲೂಕಿಗೆ ತಿಂಗಳಿಗೆ ೨೬,೭೮,೬೮,೬೪೨ ರು. ಗಳನ್ನು ಸರ್ಕಾರ ಅನುದಾನದ ರೂಪದಲ್ಲಿ ನೀಡುತ್ತಿದೆ ಎಂದು ತಿಳಿಸಿದರು.ಜೂ.೨೪ರಂದು ತಾಲೂಕಿನ ಶ್ರವಣಬೆಳಗೊಳ ಗ್ರಾಮಪಂಚಾಯಿತಿ ಆವರಣದಲ್ಲಿ ೫ ಯೋಜನೆಗಳ ಫಲಾನುಭವಿಗಳ ಕುಂದುಕೊರತೆ ಸಭೆಯನ್ನು ಕರೆಯಲಾಗಿದ್ದು, ಈ ಯೋಜನೆಯಿಂದ ವಂಚಿತರಾಗಿರುವ ಹೋಬಳಿಯ ಫಲಾನುಭವಿಗಳು ಸದರಿ ಸಭೆಯಲ್ಲಿ ತಮ್ಮ ಅಹವಾಲನ್ನು ಸಲ್ಲಿಸಿ ಚರ್ಚಿಸಬಹುದಾಗಿದೆ. ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ೫ ಯೋಜನೆಗಳ ಫಲಾನುಭವಿಗಳನ್ನು ಭೇಟಿ ಮಾಡಿ ಸಾಧಕ ಬಾಧಕಗಳನ್ನು ಚರ್ಚಿಸಿ ರಾಜ್ಯ ಸಮಿತಿಗೆ ವರದಿ ನೀಡಲಾಗುತ್ತಿದ್ದು ಫಲಾನುಭವಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.ರಾಜ್ಯದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ. ಕೆ. ಶಿವಕುಮಾರ್‌ ನೇತೃತ್ವದಲ್ಲಿ ಸರ್ಕಾರ ಉತ್ತಮ ಕೆಲಸ ಮಾಡುತ್ತಿದ್ದು ತಾಲೂಕಿನಲ್ಲಿ ಮಾಜಿ ಶಾಸಕರಾದ ಸಿ. ಎಸ್. ಪುಟ್ಟೇಗೌಡರ ಮಾರ್ಗದರ್ಶನದಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಎಂ. ಎ. ಗೋಪಾಲಸ್ವಾಮಿರವರ ನೇತೃತ್ವದಲ್ಲಿ ತಾಲೂಕಿನಾದ್ಯಂತ ಪ್ರವಾಸ ಮಾಡುತ್ತಾ ಜನ ನಡುವೆ ಇದ್ದು ಕೆಲಸ ಮಾಡುಕೊಂಡು ತಾಲೂಕಿನಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡುತ್ತಿದ್ದು ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ೫ ಯೋಜನೆಗಳು ಗೆಲುವಿಗೆ ಸಹಕಾರಿಯಾಗಲಿದ್ದು ಎಲ್ಲಾ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಹರೀಶ್, ಆಡಳಿತಾಧಿಕಾರಿ ಗಿರೀಶ್, ಸಮಿತಿ ಸದಸ್ಯರಾದ ರಂಗಸ್ವಾಮಿ, ಕೆ. ನಾಗೇಶ್, ಕೆಂಪೇಗೌಡ, ನವೀನ್‌ಕುಮಾರ್, ಗಣೇಶ್, ಆನೇಕೆರೆ ರಂಗಸ್ವಾಮಿ, ಜನಾರ್ದನ್, ಸುರೇಶ್, ನಿಶ್ಚಲ್, ಇತರೆ ಅಧಿಕಾರಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತೋಟಗಾರಿಕೆ ವಿವಿಯಲ್ಲಿ ರೈತ ಸಂಪರ್ಕ ಕೇಂದ್ರ ಸ್ಥಾಪಿಸಿ
ದೈವಾರಾಧನೆ ಬಗ್ಗೆ ಮಾತಿನಲ್ಲಿ ಎಚ್ಚರ ಇರಲಿ: ಸುರೇಶ್‌ ನಾವೂರು