ಸಿಎಂ ಸಿದ್ದರಾಮಯ್ಯರಿಂದ ಜನಪರ ಬಜೆಟ್ ಮಂಡನೆ :ಸಚಿವ ರಾಮಲಿಂಗಾರೆಡ್ಡಿ

KannadaprabhaNewsNetwork | Published : Mar 9, 2025 1:45 AM

ಸಾರಾಂಶ

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೆ ಅನುದಾನ ನೀಡಿ ಜನಪರ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೆಜಿಎಫ್

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲಾ ವರ್ಗಗಳಿಗೆ ಅನುದಾನ ನೀಡಿ ಜನಪರ ಬಜೆಟ್ ಮಂಡಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ವಿವಿಧ ಯೋಜನೆಗಳಿಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.

ನಗರದ ರೆಡ್ಡಿ ಸಮುದಾಯದ ೯೦ನೇ ವರ್ಷದ ಶಿಬಿಕವಾಹನೋತ್ಸವ ಕಾರ‍್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಕರ್ನಾಟಕ ರಾಜ್ಯದ ಎಲ್ಲಾ ೩೧ ಜಿಲ್ಲೆಗಳಿಗೂ ೩೦೦ ರಿಂದ ೪೦೦ ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಘೊಷಿಸಿದ್ದಾರೆ. ಯಾವುದೇ ಜಿಲ್ಲೆಗೂ ತಾರತಾಮ್ಯ ಮಾಡಿಲ್ಲ. ಇದು ಜನಪರ ಬಜೆಟ್ ಆಗಿದ್ದು, ಸಾರಿಗೆ ಇಲಾಖೆಗೆ ಪ್ರತಿ ವರ್ಷ ನಿಗದಿಯಾಗಿರುವಂತೆ ಅನುದಾನ ಬಿಡುಗಡೆಯಾಗಲಿದ್ದು, ಇಲಾಖೆಯ ನಿರ್ವಹಣೆಗೆ ಯಾವುದೇ ತೊಂದರೆ ಇಲ್ಲ, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿದರು.

ಜಿಲ್ಲೆಗೆ ಮೆಡಿಕಲ್ ಕಾಲೇಜು:

ಸರಕಾರ ಜಿಲ್ಲೆಗೆ ಮೆಡಿಕಲ್ ಕಾಲೇಜು ಘೋಷಣೆ ಮಾಡಿದ್ದು, ಎಲ್ಲಿ ಪ್ರಾರಂಭಿಸಬೇಕೆಂಬುದನ್ನು ಸರಕಾರ ನಿರ್ಧರಿಸಲಿದೆ. ಶಾಸಕಿ ರೂಪಕಲಾ ಶಶಿಧರ್ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರೆ ಕೋಲಾರಕ್ಕೆ ಘೊಷಣೆಯಾಗಿರುವ ಮೆಡಿಕಲ್ ಕಾಲೇಜು ಕೆಜಿಎಫ್ ನಗರಕ್ಕೆ ಬರಬಹುದು, ಕೆಜಿಎಫ್ ನಗರದಲ್ಲಿ ಅಗತ್ಯವಿರುವ ಭೂಮಿಯೂ ಲಭ್ಯವಿರುವುದರಿಂದ ಅವಕಾಶಗಳು ಇರುವುದಾಗಿ ತಿಳಿಸಿದರು.

ಖಾಸಗಿಯವರ ಸಹಭಾಗಿತ್ವದಲ್ಲಿ ಎಪಿಎಂಸಿ ಯಾರ್ಡ್:

ಶಾಸಕಿ ರೂಪಕಲಾ ಶಶಿಧರ್ ಮಾತನಾಡಿ, ಎಪಿಎಂಸಿ ಯಾರ್ಡ್ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಎಪಿಎಂಸಿ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಆದ್ದರಿಂದ ಸರ್ಕಾರದಿಂದ ಪ್ರಥಮ ಬಾರಿ ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ಎಪಿಎಂಸಿ ಯಾರ್ಡ್ ಪ್ರಾರಂಭಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ, ಈಗ ಪ್ರಾರಂಭವಾಗಿರುವ ಎಪಿಎಂಸಿ ಮಾರುಕಟ್ಟೆ ಮೂರು ರಾಜ್ಯಗಳ ಗಡಿಭಾಗದಲ್ಲಿದ್ದು, ಸರಕಾರ, ಖಾಸಗಿಯವರ ಸಹಭಾಗಿತ್ವದಲ್ಲಿ ಮಾರುಕಟ್ಟೆ ಅಭಿವೃದ್ಧಿಯಾಗಲಿದೆ ಎಂದರು.

ಶ್ರೀ ಪ್ರಸನ್ನ ಲಕ್ಷ್ಮೀವೆಂಕಟರಮಣಸ್ವಾಮಿಯನ್ನು ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ ೬ ಗಂಟೆಗೆ ಪ್ರಾರಂಭವಾದ ಪೂಜಾ ಕೈಂಕರ್ಯಗಳು ನಿರಂತರ ನಡೆದವು. ಮಧ್ಯಾಹ್ನ ೧೨ ಗಂಟೆಗೆ ಮಹಾಮಂಗಳಾರತಿ ನಡೆಯಿತು, ಪಾರಂಡಹಳ್ಳಿಯ ಗಂಗಮ್ಮವಾರಿ ಕುಟುಂಬದವರು ವೆಂಕಟೇಶ್ವರ ದೇವಾಲಯ ಹಾಗೂ ವಿಗ್ರಹಕ್ಕೆ ವಿಶೇಷ ಪುಷ್ಪಾಲಂಕಾರ ಮಾಡಿಸಿದ್ದರು.

ದೇವಾಲಯದ ಪ್ರಧಾನ ಅರ್ಚಕರಾದ ರಂಚಿತ್ ಅವರು ಸಚಿವರಿಗೆ ಪೂರ್ಣ ಕಂಭ ಸ್ವಾಗತ ಕೋರಿದರು, ಎಪಿಎಂಸಿ ಅಧ್ಯಕ್ಷ ವಿಜಯರಾಘವರೆಡ್ಡಿ , ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಶೇಖರ್ ರೆಡ್ಡಿ ,ವಕೀಲ ಪದ್ಮನಾಭರೆಡ್ಡಿ ,ರಾಮಕೃಷ್ಣರೆಡ್ಡಿ, ,ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ವೆಂಕಟಕೃಷ್ಣರೆಡ್ಡಿ ,ರೆಡ್ಡಿ ಜನಸಂಘದ ನಿರ್ದೇಶಕ ಅಯ್ಯಪ್ಪ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಸುಬ್ಬಾರೆಡ್ಡಿ, ವೆಂಕಟಕೃಷ್ಣರೆಡ್ಡಿ, ಅಪ್ಪಿರೆಡ್ಡಿ, ಸಮುದಾಯದ ಸಂಘದ ಅಧ್ಯಕ್ಷ ಪ್ರಸನ್ನರೆಡ್ಡಿ, ರಾಧಾಕೃಷ್ಣರೆಡ್ಡಿ, ತಹಸೀಲ್ದಾರ್ ನಾಗವೇಣಿ, ಇಒ ಸೇಲ್ವಮಣಿ, ಪೇಷ್ಕರ್ ಶ್ರೀನಿವಾಸ್‌ರೆಡ್ಡಿ ಉಪಸ್ಥಿತರಿದ್ದರು.

Share this article