ಕನ್ನಡಪ್ರಭ ವಾರ್ತೆ ಬೆಂಗಳೂರು:
ಜಪಾನ್ ಪ್ರವಾಸದಲ್ಲಿರುವ ಶಿವಕುಮಾರ್ ಅವರು ರೈಲು ಪ್ರಯಾಣದ ನಡುವೆಯೇ ಆಶಾ ಕಾರ್ಯಕರ್ತೆಯರ ಮುಖಂಡರಿಗೆ ಮಂಗಳವಾರ ವಿಡಿಯೋ ಕರೆ ಮಾಡಿ, ನಿಮ್ಮ ಬಗ್ಗೆ ನನಗೆ ವಿಶೇಷ ಕಾಳಜಿ ಇದೆ. ನಿಮ್ಮ ಸಮಸ್ಯೆಗೆ ಖಂಡಿತವಾಗಿಯೂ ಪರಿಹಾರ ನೀಡುತ್ತೇವೆ. ನಿಮ್ಮ ಬೇಡಿಕೆಗಳಿಗೆ ಸ್ಪಂದಿಸುತ್ತೇವೆ. ನನ್ನ ಮೇಲೆ ವಿಶ್ವಾಸವಿಡಿ ಎಂದು ಭರವಸೆ ನೀಡಿದರು.
ಕೋಪ ಬಿಡಿ. ನನ್ನ ಮನವಿ ಒಪ್ಪದೇ ನಿರಶನ ಮುಂದುವರಿಸುತ್ತಿದ್ದೀರಿ. ಇದರಿಂದ ಆಶಾ ಕಾರ್ಯಕರ್ತೆಯರಿಗೆ ತೊಂದರೆ ಆಗುತ್ತಿದೆ. ಅತ್ತ ಅಂಗನವಾಡಿ ಕಾರ್ಯಕರ್ತೆಯರೂ ದೆಹಲಿಗೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ಅಧಿವೇಶನದ ಸಂದರ್ಭದಲ್ಲಿ ನಿಮ್ಮ ಬೇಡಿಕೆ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸುತ್ತೇನೆ. ಪ್ರತಿಭಟನೆ ಹಿಂಪಡೆಯಿರಿ ಎಂದು ಮನವಿ ಮಾಡಿದರು.ಅಧಿವೇಶನವರೆಗೆ ಸಮಯ ಕೊಡಿ:
ಬೆಲೆ ಏರಿಕೆ ಸಂದರ್ಭದಲ್ಲಿ ನಿಮ್ಮ ನೋವು, ಸಮಸ್ಯೆ ಏನೆಂದು ನಮಗೆ ಅರ್ಥವಾಗುತ್ತದೆ. ಇದೇ ಕಾರಣಕ್ಕೆ ಗ್ಯಾರಂಟಿ ನೀಡಲು ಮುಂದಾಗಿದ್ದೇವೆ. ಆರಂಭದಲ್ಲಿ ಆಶಾ ಕಾರ್ಯಕರ್ತೆಯರಿಗೆ ಗೃಹಲಕ್ಷ್ಮಿ ಯೋಜನೆ ನೀಡಬಾರದು ಎಂಬ ಚರ್ಚೆಯಾಗಿತ್ತು. ಆದರೆ ನಿಮ್ಮ ಶ್ರಮ ಪರಿಗಣಿಸಿ ನಾವು ಯೋಜನೆ ನೀಡಿದೆವು. ನಾನು ಜಪಾನ್ ಪ್ರವಾಸದಿಂದ ಮರಳಿದ ಬಳಿಕ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕೋಟ್
ಆಶಾ ಕಾರ್ಯಕರ್ತೆಯರು ಬಿಸಿಲು, ಮಳೆ, ಚಳಿ ಎನ್ನದೇ ಹೋರಾಟ ನಡೆಸುತ್ತಿರುವುದರಿಂದ ಬಹಳ ಬೇಜಾರಾಗುತ್ತಿದೆ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿವೆ.