ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳ ಮಾರಾಟ: ಅಧಿಕಾರಿಗಳ ದಾಳಿ

KannadaprabhaNewsNetwork |  
Published : Nov 25, 2026, 01:45 AM IST
24ಬಿಜಿಪಿ-1 | Kannada Prabha

ಸಾರಾಂಶ

ವೈದ್ಯರ ಚೀಟಿ ಇಲ್ಲದೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಗರ್ಭಪಾತ ಮಾತ್ರೆಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಮೆಡಿಕಲ್ ಸ್ಟೋರ್‍ಗಳ ಪರವಾನಗಿ ರದ್ದುಪಡಿಸಿರುವುದಾಗಿ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಸವಿತಾ ತಿಳಿಸಿದರು.

ಕನ್ನಡಪ್ರಭವಾರ್ತೆ ಬಾಗೇಪಲ್ಲಿ

ವೈದ್ಯರ ಚೀಟಿ ಇಲ್ಲದೆ ನಿಗದಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಗರ್ಭಪಾತ ಮಾತ್ರೆಗಳನ್ನು ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಔಷಧಿ ನಿಯಂತ್ರಣ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಎರಡು ಮೆಡಿಕಲ್ ಸ್ಟೋರ್‍ಗಳ ಪರವಾನಗಿ ರದ್ದುಪಡಿಸಿರುವುದಾಗಿ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಸವಿತಾ ತಿಳಿಸಿದರು.

ಪಟ್ಟಣ ಸೇರಿದಂತೆ ತಾಲೂಕಿನ ಮೆಡಿಕಲ್ ಸ್ಟೋರ್‍ಗಳಲ್ಲಿ ಸರ್ಕಾರಿ ವೈದ್ಯರ ಚೀಟಿ ಇಲ್ಲದೆ 80 ರು. ಬೆಲೆಯುಳ್ಳ ಗರ್ಭಪಾತ ಮಾತ್ರೆಗಳನ್ನ 800 ರು.ಗಳಿಂದ ಸುಮಾರು 2500 ರು.ಗಳ ವರೆವಿಗೂ ಆಕ್ರಮವಾಗಿ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ್ಯಾದ್ಯಂತ ಜಿಲ್ಲಾ ಸಹಾಯಕ ಔಷಧಿ ನಿಯಂತ್ರಣಾಧಿಕಾರಿ ಸವಿತಾ ಮತ್ತು ಟಿಎಚ್‍ಓ ಡಾ. ಸತ್ಯನಾರಾಯಣರೆಡ್ಡಿ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಅಂಗಡಿ ಮಾಲೀಕರು ಗ್ರಾಹಕರಿಗೆ ಬಿಲ್ ನೀಡದೆ ವಂಚನೆ ಮಾಡಿರುವುದು ತನಿಖೆಯಲ್ಲಿ ತಿಳಿದುಬಂದಿದೆ. ಅಲ್ಲದೆ ಇದೇ ವೇಳೆ ಔಷಧಿ ಅಂಗಡಿಗಳಲ್ಲಿ ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರಗಳನ್ನು ಆಕ್ರಮವಾಗಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡಬಂದ ಹಿನ್ನಲೆಯಲ್ಲಿ ತಾಲೂಕಿನ ಗೂಳೂರು ಗ್ರಾಮದ ಶ್ರೀಕೃಷ್ಣ ಮೆಡಿಕಲ್ಸ್ ಆ್ಯಂಡ್ ಜನರಲ್ ಸ್ಟೋರ್ಸ್ ಮತ್ತು ಪರಗೋಡು ಗ್ರಾಮದ ಸಂಜೀವಿನಿ ಮೆಡಿಕಲ್ಸ್ ಆ್ಯಂಡ್ ಜನರಲ್ ಸ್ಟೋರ್ಸ್ ಪರವಾನಗಿ ರದ್ದುಪಡಿಸಿ, ಈ ಔಷಧಿ ಅಂಗಡಿಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದರು.

ವೈದ್ಯರ ಚೀಟಿ ಇಲ್ಲದೆ ಕಾನೂನು ಬಾಹಿರವಾಗಿ ಹೆಚ್ಚಿನ ಬೆಲೆಗೆ ಗರ್ಭಪಾತ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಔಷಧಿ ಅಂಗಡಿಗಳ ಮಾಲೀಕರ ಹಾಗೂ ನಕಲಿ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ತಾಲೂಕು ಮಕ್ಕಳ ರಕ್ಷಣಾ ಸಮಿತಿ ಸದಸ್ಯ ಹಾಗೂ ಹಿರಿಯ ವಕೀಲರಾದ ಎ.ಜಿ.ಸುಧಾಕರ್ ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಪಾನಿಂದಲೇ ಆಶಾ ಮನವೊಲಿಕೆಗೆ ಸಿಎಂ ಯತ್ನ
ಮತ್ತೆ ಭುಗಿಲೆದ್ದ ವಾಟದಹೊಸಳ್ಳಿ ಅಚ್ಚುಕಟ್ಟುದಾರರ ಆಕ್ರೋಶ