ಭೂದೇಶ್ವರ ದೇಗುಲದಲ್ಲಿ ಸಿಎಂ ಚಂಡಿಯಾಗಕ್ಕೆ ಸಂಕಲ್ಪ

KannadaprabhaNewsNetwork |  
Published : Sep 06, 2026, 02:45 AM IST
ಗಂಗಾವತಿ ಸಮೀಪದ ಬೂದಗುಂಪಾ ಗ್ರಾಮದ ಭೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶನಿವಾರ ಭೇಟಿ ನೀಡಿ ಚಂಡಿಯಾಗಕ್ಕೆ ಸಂಕಲ್ಪ ನೆರವೇರಿಸಿದರು, | Kannada Prabha

ಸಾರಾಂಶ

ಬೂದಗುಂಪಾ ಗ್ರಾಮದ ಭೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶನಿವಾರ ಭೇಟಿ ನೀಡಿ ಚಂಡಿ ಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಗಂಗಾವತಿ:

ಸಮೀಪದ ಬೂದಗುಂಪಾ ಗ್ರಾಮದ ಭೂದೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಶನಿವಾರ ಭೇಟಿ ನೀಡಿ ಚಂಡಿ ಯಾಗಕ್ಕೆ ಸಂಕಲ್ಪ ನೆರವೇರಿಸಿ ವಿಶೇಷ ಪೂಜೆ ಸಲ್ಲಿಸಿದರು.

ಭೂದೇಶ್ವರ ದೇವಸ್ಥಾನದಲ್ಲಿ ಮಾಜಿ ಸಂಸದರಾದ ಎಚ್.ಜಿ. ರಾಮುಲು ಅವರು ಸಿಎಂ ಡಿಕೆಶಿ ಅವರ ಹೆಸರಿನಲ್ಲಿ ಸೆ. 6ರ ಭಾನುವಾರ ಚಂಡಿಕಾಯಾಗ, ಸಂಕಲ್ಪ ಹೋಮ‌ ಹಾಗೂ ಅಷ್ಟೋತ್ತರ ಹೋಮಗಳನ್ನು ಹಮ್ಮಿಕೊಂಡಿದ್ದರು. ಯಾಗದಲ್ಲಿ ಸಿಎಂ ಅವರು ಕಾರಣಾಂತರಗಳಿಂದ ಭಾಗಿಯಾಗದೆ ಇರುವ ಕಾರಣಕ್ಕೆ ಒಂದು ದಿನ ಮುಂಚಿತವಾಗಿ ಶನಿವಾರ ಭೂದೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ನಂತರ ಭೂದೇಶ್ವರ ದೇವರ ಮೂತಿ೯ಗೆ ಪಂಚಾಮೃತ ಅಭಿಷೇಕ, ವಿಶೇಷ ಹೂವಿನ ಅಲಂಕಾರ ಸೇರಿದಂತೆ ಧಾಮಿ೯ಕ ಪೂಜಾ ಕಾಯ೯ಗಳು ಜರುಗಿದವು. ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಮಾಜಿ ಸಂಸದ ಎಚ್.ಜಿ. ರಾಮುಲು ಅವರು ನಮ್ಮ ಪಕ್ಷದ ಹಿರಿಯರು ಸುಮಾರು 40 ವಷ೯ಗಳಿಂದ ಪರಿಚಯಸ್ಥರು. ನನ್ನ ಅವರದು ತಂದೆ ಮಗನ ಸಂಬಂಧವಾಗಿದೆ. ಅವರ ಆಶೀವಾ೯ದ ತೆಗೆದುಕೊಳ್ಳಬೇಕು ಎನ್ನುವ ಉದ್ದೇಶದಿಂದ ಬಂದಿರುವೆ. ಅವರೂ ಸುಮಾರು ವಷ೯ಗಳಿಂದ ಭೂದೇಶ್ವರ ದೇವಸ್ಥಾನಕ್ಕೆ ಬನ್ನಿ ಎನ್ನುತ್ತಿದ್ದರು. ಸಮಯ ಕೂಡಿ ಬಂದಿರಲಿಲ್ಲ. ಸದ್ಯ ಕಾಲ ಕೂಡಿ ಬಂದಿರುವ ಕಾರಣ ದೇವಸ್ಥಾನಕ್ಕೆ ಬಂದಿರುವೆ ಎಂದರು. ನಾಳೆ ಚಂಡಿಯಾಗ ಇರುವ ಕಾರಣಕ್ಕೆ ಸಂಕಲ್ಪ ಮಾಡಲು ಬಂದಿರುವೆ. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗಲಿ, ಜಲಾಶಯಗಳು ಭತಿ೯ಯಾಗಲಿ ಎಂದು ಸಂಕಲ್ಪ ಮಾಡಿರುವೆ. ಬಿಜೆಪಿಯವರು ಪಾದಯಾತ್ರೆ ಮಾಡುತ್ತಿದ್ದಾರೆ, ಮಾಡಲಿ ನಾನು ಭಕ್ತಿಯಿಂದ ದೇವಸ್ಥಾನಕ್ಕೆ ಬಂದಿರುವೆ ರಾಜಕೀಯ ಮಾತನಾಡುವುದಿಲ್ಲ ಎಂದರು. ಇದಕ್ಕಿಂತ ಪೂರ್ವದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಎಚ್.ಜಿ. ರಾಮುಲು ಅವರನ್ನು ಭೇಟಿಯಾಗಿ ಪಾದಗಳಿಗೆ ನಮಸ್ಕರಿಸಿದರು.

ಈ ವೇಳೆ ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಹೊಸಪೇಟೆ ಶಾಸಕ ಗವಿಯಪ್ಪ, ಮಾಜಿ ಸಂಸದ ಕರಡಿ ಸಂಗಣ್ಣ, ಮಾಜಿ ಶಾಸಕ ಬಸವರಾಜ್ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಎಚ್.ಆರ್. ಭರತ್ ಇದ್ದರು.

ಕಂಭದೊಂದಿಗೆ ಸ್ವಾಗತ

ಭುದೇಶ್ವರ ದೇಗುಲಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಪೂರೋಹಿತರು ಪೂರ್ಣಕುಂಭ ಮತ್ತು ವೇಧಘೋಷದೊಂದಿಗೆ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ. 22ರ ವರೆಗೆ ಮತದಾರ ಚೀಟಿ ತಿದ್ದುಪಡಿಗೆ ಅವಕಾಶ
ಬಸ್ ನಿಲ್ಲದಿದ್ದರೆ ಹೆದ್ದಾರಿ ಬಂದ್: ಗ್ರಾಮಸ್ಥರ ಎಚ್ಚರಿಕೆ