- ತರೀಕೆರೆಯಲ್ಲಿ ಶಿವ ಸಹಕಾರಿ ಬ್ಯಾಂಕ್ ನಿ.ರಜತ ಮಹೋತ್ಸವ ಸಮಾರಂಭಕನ್ನಡಪ್ರಭ ವಾರ್ತೆ, ತರೀಕೆರೆ
ಶನಿವಾರ, ಶ್ರೀ ಗುರು ರೇವಣಸಿದ್ದೇಶ್ವರ ಮಾಂಗಲ್ಯ ಮಂದಿರದಲ್ಲಿ ಏರ್ಪಡಿಸಿದ್ದ ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವದಲ್ಲಿ ಮಾತನಾಡಿ, ಸಹಕಾರಿ ಬಂಧುಗಳನ್ನು ಸನ್ಮಾನಿಸಿದ್ದೀರಿ ಇದು ಅತ್ಯಂತ ಮಹತ್ವದ ಕಾರ್ಯಕ್ರಮ, ಸಹಕಾರಿ ಸಂಸ್ಥೆ ಗಳ ರಜತ, ಸ್ವರ್ಣ ಮತ್ತು ವಜ್ರ ಮಹೋತ್ಸವಗಳು ಬ್ಯಾಂಕ್‌ಗಳ ದೊಡ್ಡ ಬೆಳವಣಿಗೆಯ ನಿದರ್ಶನ ಎಂದು ವ್ಯಾಖ್ಯಾನಿಸಿದರು.
ಇಂತಹ ಕಾರ್ಯಕ್ರಮಗಳು ಸಿಂಹಾವಲೋಕನಕ್ಕೆ ಪ್ರೇರಣೆ ನೀಡುತ್ತದೆ. ಶಿವ ಸಹಕಾರಿ ಬ್ಯಾಂಕ್ 9 ಲಕ್ಷ ರು. ಷೇರು ಬಂಡವಾಳದಿಂದ 103 ಕೋಟಿ ರು.ದುಡಿಯುವ ಬಂಡವಾಳ ಸೃಷ್ಠಿಸಿದೆ. ಜೀರೋ ಲೆವಲ್ ನಿಂದ ಸಂಸ್ಥೆಯನ್ನು ಬೆಳೆಸಿದ್ದೀರಿ ಸಾಲ ಮರುಪಾವತಿ ಬ್ಯಾಂಕ್ ನ ಗುಣಮಟ್ಟವನ್ನು ಅಳೆಯುತ್ತದೆ. ಶಿವ ಸಹಕಾರಿ ಬ್ಯಾಂಕ್ ಪ್ರಗತಿ ಸಾಧಿಸಿದೆ ಎಂದು ಹೇಳಿದರು.ಸಣ್ಣ ನಗರಗಳ ಸಹಕಾರಿ ಬ್ಯಾಂಕುಗಳಲ್ಲಿ ಹೆಚ್ಚು ಸೌಹಾರ್ದತೆ ಇರುತ್ತದೆ. ಅದರಂತೆ ಶಿವ ಸಹಕಾರಿ ಬ್ಯಾಂಕ್ ಸಹಕಾರಿ ತಂಡ ಸಾಧನೆ ಮಾಡಿದೆ. ಅಡಚಣೆ ಇಲ್ಲದೆ ಸಂಸ್ಥೆ ಮುಂದುರೆದಿರುವುದು ತುಂಬ ಸಂತೋಷ, ಮುಂದಿನ ಐದು ಹತ್ತು ವರ್ಷಗಳಲ್ಲಿ ಸಂಸ್ಥೆಯ ದುಡಿಯುವ ಬಂಡವಾಳವನ್ನು ದುಪ್ಪಟ್ಟು ಮಾಡಬೇಕು. ಬ್ಯಾಂಕ್ ನ ವ್ಯವಸ್ಥಾಪಕರು ಕೇಳಿದರೆ ಖಂಡಿತಾ ಹೆಚ್ಚು ಡೆಪಾಸಿಟ್ ಹರಿದು ಬರುತ್ತದೆ ಎಂದು ಅಭಿಪ್ರಾಯ ಪಟ್ಟರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ ಪಟ್ಟಣದ ಶಿವ ಸಹಕಾರಿ ಬ್ಯಾಂಕ್ ಗೆ 25 ವರ್ಷ ತುಂಬಿದೆ. ಶಿವ ಸಹಕಾರಿ ಬ್ಯಾಂಕ್ ರಜತ ಮಹೋತ್ಸವ ಆಚರಿಸಿಕೊಳ್ಳುತ್ತಿರುವುದು ಸಂತೋಷ ತಂದಿದೆ. ಬ್ಯಾಂಕು ಅತ್ಯುತ್ತಮವಾದ ಪ್ರಗತಿ ಸಾಧಿಸಿದೆ. ಬ್ಯಾಂಕ್ ದೊಡ್ಡದಾಗಿ ಬೆಳೆದಿದೆ, ಬ್ಯಾಂಕ್ ನ ಪದಾದಿಕಾರಿಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಶಿವ ಸಹಕಾರಿ ಬ್ಯಾಂಕ್ ಇನ್ನು ಹೆಚ್ಚು ಪ್ರಗತಿ ಸಾಧಿಸಲಿ ಎಂದು ಶುಭ ಕೋರಿದರು.
ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, ಸಹಕಾರಿ ಬ್ಯಾಂಕ್ ಇಷ್ಟೊಂದು ಪ್ರಗತಿ ಸಾಧಿಸಲು ಸಂಘಟನೆಯಿಂದ ಮಾತ್ರ ಸಾಧ್ಯ ಎಂದು ಹೇಳಿದರು.
ಶಿವ ಸಹಕಾರಿ ಬ್ಯಾಂಕ್ ಅಧ್ಯಕ್ಷ ಕೆ.ಆರ್.ಗಂಗಾಧರಪ್ಪ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾದ ಬಸವರಾಜಪ್ಪ ಮಾತನಾಡಿದರು. ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಚ್.ಸುರೇಶ್, ಬ್ಯಾಂಕ್ ನಿರ್ದೇಶಕ ಎಚ್.ಒ.ದಯಾನಂದ, ಶಾಂತ ಆನಂದ್, ನಿರ್ದೇಶಕ ಮಂಡಳಿ, ಸಿಬ್ಬಂದಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.27ಕೆಟಿಆರ್.ಕೆ.1ಃ