ಸಹಕಾರಿ ಸಂಘಗಳು ರೈತರ ಪಾಲಿನ ಆಧಾರಸ್ತಂಭ: ವೀರಣ್ಣ ಹುಬ್ಬಳ್ಳಿ

KannadaprabhaNewsNetwork |  
Published : Sep 13, 2024, 01:32 AM IST
೧೨ವೈಎಲ್‌ಬಿ೧:ಯಲಬುರ್ಗಾ ಪಟ್ಟಣದ ಪಿಕೆಪಿಎಸ್ಸೆಸ್ಸ್ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ೪೮ನೇ ವಾರ್ಷಿಕ ಮಹಾಸಭೆ ಕಾರ್ಯಕ್ರಮ ಜರುಗಿತು. | Kannada Prabha

ಸಾರಾಂಶ

ಸಹಕಾರಿ ಸಂಘಗಳು ರೈತರ ಪಾಲಿಗೆ ಆಧಾರಸ್ತಂಭಗಳಾಗಿವೆ. ರೈತರು ಅವುಗಳ ಲಾಭ ಪಡೆಯಬೇಕು.

ಯಲಬುರ್ಗಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಸಹಕಾರಿ ಸಂಘಗಳು ರೈತರ ಪಾಲಿಗೆ ಆಧಾರಸ್ತಂಭಗಳಾಗಿವೆ. ರೈತರು ಅವುಗಳ ಲಾಭ ಪಡೆಯಬೇಕು ಎಂದು ಮುಖಂಡ ವೀರಣ್ಣ ಹುಬ್ಬಳ್ಳಿ ಹೇಳಿದರು.

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ೨೦೨೩-೨೪ನೇ ಸಾಲಿನ ೪೮ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ರೈತರು ಸಂಘದ ಸದುಪಯೋಗ ಪಡೆದಾಗ ಸಹಕಾರಿ ಸಂಘಗಳು ಹೆಚ್ಚು ಅಭಿವೃದ್ಧಿಗೊಳ್ಳಲು ಸಾಧ್ಯ ಎಂದರು.

ವರ್ಷದಿಂದ ವರ್ಷಕ್ಕೆ ಸದಸ್ಯರ ಸಂಖ್ಯೆ ದ್ವಿಗುಣಗೊಳ್ಳುವ ಮೂಲಕ ಶೇರು ಬಂಡವಾಳ ಹೆಚ್ಚಿದೆ. ಸಾಲ ಸೌಲಭ್ಯ, ಗೊಬ್ಬರ, ಯಶಸ್ವಿನಿ, ಬೆಳೆವಿಮೆ ಯೋಜನೆಗಳು ರೈತರಿಗಾಗಿ ಅನುಷ್ಠಾನಗೊಂಡಿವೆ. ಸಹಕಾರಿ ಸಂಘಗಳು ರೈತರ ಪಾಲಿಗೆ ಆಶಾಕಿರಣಗಳಾಗಿವೆ ಎಂದು ಹೇಳಿದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಷಣ್ಮಖಪ್ಪ ರಾಂಪುರ ಹಾಗೂ ಅಂದಾನಗೌಡ ಉಳ್ಳಾಗಡ್ಡಿ ಮಾತನಾಡಿ, ಪ್ರಸ್ತುತ ಸಹಕಾರಿ ಸಂಘಗಳಲ್ಲಿ ರೈತರ ಹಿತ ಕಾಪಾಡುವ ದೃಷ್ಟಿಯಿಂದ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಬೀಜ, ಗೊಬ್ಬರ ಹಾಗೂ ಕಡಿಮೆ ಬಡ್ಡಿ ದರದಲ್ಲಿ ಸಾಲ, ಸೌಲಭ್ಯಗಳನ್ನು ನೀಡುವ ಮೂಲಕ ರೈತರ ಸರ್ವಾಂಗೀಣ ಏಳ್ಗೆಗೆ, ಆಡಳಿತ ಮಂಡಳಿಯವರು ಶ್ರಮಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ ಸಂಘ ₹೮ ಲಕ್ಷಕ್ಕೂ ಅಧಿಕ ನಿವ್ವಳ ಲಾಭ ಗಳಿಸಿದೆ ಎಂದರು.

ಪಪಂ ಅಧ್ಯಕ್ಷ ಅಂದಯ್ಯ ಕಳ್ಳಿಮಠ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಘದ ನಿರ್ದೇಶಕ ಮಲ್ಲಿಕಾರ್ಜುನ ಉಳ್ಳಾಗಡ್ಡಿ ಅಧ್ಯಕ್ಷತೆ ವಹಿಸಿದ್ದರು. ಶರಣಪ್ಪ ಅರಕೇರಿ, ಸಂಗಣ್ಣ ಟೆಂಗಿನಕಾಯಿ, ನಿವೃತ್ತ ಯೋಧ ಮಂಜುನಾಥ ಬಡಿಗೇರ, ಬಿ.ಎಂ. ಶಿರೂರ, ಶಿವನಗೌಡ ಬನ್ನಪ್ಪಗೌಡ್ರ, ಪ್ರಭುರಾಜ ಕಲಬುರ್ಗಿ, ಕಲ್ಲನಗೌಡ ಪಾಟೀಲ, ಎಂ.ಎನ್. ಜನಾದ್ರಿ, ಅಖ್ತರಸಾಬ ಖಾಜಿ, ಸಂಘ ಉಪಾಧ್ಯಕ್ಷ ಅಶ್ರಫ್‌ಅಲಿ ಗಡಾದ, ನಿರ್ದೇಶಕರಾದ ಸಿದ್ದಪ್ಪ ಕಟ್ಟಿಮನಿ, ಬಸವರಾಜ ಅಧಿಕಾರಿ, ಕಳಕಪ್ಪ ತಳವಾರ, ಶರಣಪ್ಪ ಗೊಲ್ಲರ್, ದೊಡ್ಡಯ್ಯ ಗುರುವಿನ್, ನೀಲವ್ವ ಮುಧೋಳ, ರೇಣುಕಾ ಉಪ್ಪಾರ, ಜಗದೀಶ ನರೆಗಲ್, ರೇಣುಕಾ ಉಪ್ಪಾರ, ವ್ಯವಸ್ಥಾಪಕ ವೀರೇಶ ಪಗಡದಿನ್ನಿ, ದೇವೇಂದ್ರಪ್ಪ ಬನ್ನಪ್ಪನವರ್, ಕಾರ್ಯನಿರ್ವಾಹಣಾಧಿಕಾರಿ ಬಸವರಾಜ ಪೊಲೀಸ್ ಪಾಟೀಲ ಮತ್ತಿತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ