ಸೂಲಿಬೆಲೆ: ಸಹಕಾರ ಸಂಘ ಸಂಸ್ಥೆಗಳು ರೈತರ ಶ್ರೇಯೊಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇಕು ಎಂದು ಮಾಜಿ ಸಂಸದ ಬಿ.ಎನ್. ಬಚ್ಚೇಗೌಡ ಹೇಳಿದರು.
ನಬಾರ್ಡ್‌ನಿಂದ ಅಪೆಕ್ಸ್ ಬ್ಯಾಂಕ್, ಅಪೆಕ್ಸ್ ಬ್ಯಾಂಕ್‌ನಿಂದ ಜಿಲ್ಲಾ ಬ್ಯಾಂಕ್‌ಗಳಿಗೆ ಅನುದಾನಗಳು ಬರುತ್ತವೆ. ಇದನ್ನು ಸ್ಥಳಿಯ ಸಹಕಾರ ಸಂಘಗಳು ಷೇರುದಾರರಿಗೆ ಅನುಕೂಲವಾಗುವ ರೀತಿಯಲ್ಲಿ ಸವಲತ್ತು ನೀಡಬೇಕು. ರೈತಾಪಿ ವರ್ಗದ ಅಭಿವೃದ್ಧಿಗೆ ಹೆಚ್ಚಿನ ಕೃಷಿ ಸಾಲಗಳನ್ನು ನೀಡಬೇಕು ಎಂದು ಹೇಳಿದರು.
ಸಹಕಾರ ಬ್ಯಾಂಕಿನ ಅಧ್ಯಕ್ಷ ಬಿ.ವಿ. ಸತೀಶಗೌಡ ಮಾತನಾಡಿ, ಸಹಕಾರ ಬ್ಯಾಂಕ್ ಪ್ರಸ್ತುತ ೪೦೩೭ ಷೇರುದಾರರನ್ನು ಹೊಂದಿದ್ದು ೧೨೭.೪೮ ಲಕ್ಷ ರು. ಷೇರು ಬಂಡವಾಳವನ್ನು ಹೊಂದಿದೆ, ೨೦೨೩-೨೪ನೇ ಸಾಲಿನಲ್ಲಿ ೭ ಕೋಟಿ ೬೩ ಲಕ್ಷ ರು. ಕೆಸಿಸಿ ಸಾಲ ನೀಡಲಾಗಿದೆ, ೫ ಕೋಟಿ ೧೫ ಲಕ್ಷ ರು. ಆಭರಣ ಸಾಲ ನೀಡಿದ್ದೇವೆ, ೩ ಕೋಟಿ ೮೯ ಲಕ್ಷ ರು. ವ್ಯಾಪಾರ ಸಾಲ, ೧೫ ಲಕ್ಷ ರು. ವೇತನ ಅಧಾರ ಸಾಲ ಹಾಗೂ ೩ ಕೋಟಿ ೭೧ ಲಕ್ಷ ರು. ಠೇವಣಿ ಅಧಾರದ ಸಾಲ ನೀಡಲಾಗಿದೆ, ಬ್ಯಾಂಕ್‌ನ ಸರ್ವತೋಮುಖ ಅಭಿವೃದ್ಧಿಗೆ ಎಲ್ಲ ಸದಸ್ಯರ ಶ್ರಮಿಸುತ್ತಿದ್ದಾರೆ. ಪ್ರಸ್ತುತ ೧ ಕೋಟಿ ೮೯ ರು. ಸಾವಿರ ನಿವ್ವಳ ಲಾಭ ಗಳಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಲ ನೀಡಲು ಸಹಕಾರಿಯಾಗಿದೆ ಎಂದರು.ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯದೇವ್ ಮಾತನಾಡಿ, ಸೂಲಿಬೆಲೆ ಸಹಕಾರ ಸಂಘವು ಅಧ್ಯಕ್ಷರಾದ ಬಿ.ವಿ. ಸತೀಶಗೌಡ ನೇತೃತ್ವದಲ್ಲಿ ಪ್ರಸಕ್ತ ಸಾಲಿನಲ್ಲಿ ೧ ಕೋಟಿ ೮೯ ಸಾವಿರ ರು. ನಿವ್ವಳ ಲಾಭ ಗಳಿಸಿರುವುದು ಹೆಮ್ಮೆಯ ವಿಚಾರ. ಅಧ್ಯಕ್ಷರು ಮತ್ತು ನಿರ್ದೇಶಕರ ಆಡಳಿತ ಮಂಡಳಿ ಸಿಬ್ಬಂದಿ ವರ್ಗದ ಸಾಧನೆ ಶ್ಲಾಘನೀಯ ಎಂದರು.
ಸಹಕಾರ ಸಂಘದ ವ್ಯಾಪ್ತಿಯ ಪ್ರಗತಿ ಪರ ರೈತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಷೇರುದಾರ ಮಕ್ಕಳಿಗೆ ಗೌರವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.