ಕೊಪ್ಪಳ: ಅ. ೨ ಗಾಂಧಿ ಜಯಂತಿ ನಿಮಿತ್ತ ಶಿಕ್ಷಕರ ಕಲಾ ಸಂಘ, ಕೊಪ್ಪಳದ ಗಾಂಧಿ ಬಳಗ ಹಾಗೂ ಇತರ ಸೇವಾ ಸಂಘಗಳ ಸಹಕಾರದೊಂದಿಗೆ ಕೊಪ್ಪಳದ ಅಶೋಕ ವೃತ್ತದಿಂದ ಕಾಮನೂರ ಗ್ರಾಮಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಗಾಂಧಿ ಬಳಗದ ಬಸವರಾಜ ಸವಡಿ ತಿಳಿಸಿದ್ದಾರೆ.
ಕಾಮನೂರ ಗ್ರಾಮದ ವಿಶೇಷತೆ: ಕೊಪ್ಪಳ ತಾಲೂಕಿನ ಕಾಮನೂರು ಗ್ರಾಮ ಕೆಲವು ಆದರ್ಶ ಮೌಲ್ಯಗಳನ್ನು ಉಳಿಸಿಕೊಂಡು ಬಂದಿದೆ. ಈ ಊರಲ್ಲಿ ಹೋಟೆಲ್‌ಗಳು ಇಲ್ಲ. ತಂಬಾಕು ಮತ್ತು ಮದ್ಯಪಾನ ಮಾರಾಟ ನಿಷೇಧವಿದೆ. ಸಾವಿರಾರು ಜಾನುವಾರಗಳು, ನೂರಾರು ಕುರಿ ಹಟ್ಟಿಗಳು ಇವೆ. ಸಾವಯವ ಕೃಷಿ, ಜೇನುಕೃಷಿ, ಹೈನುಗಾರಿಕೆ, ಮೀನುಗಾರಿಕೆಯ ವ್ಯವಸಾಯಗಾರರು ಇದ್ದಾರೆ. ಜಲ ಸಂರಕ್ಷಣೆಗಾಗಿ ಚಂದದೊಂದು ಕೆರೆಯಿದೆ. ಅದರಲ್ಲಿ ಜಲ ಸಂಗ್ರಹವೂ ಇದೆ. ಹೀಗಾಗಿ ಇದೆಲ್ಲವನ್ನು ಪರಿಗಣಿಸಿ ಕಾಮನೂರ ಗ್ರಾಮಕ್ಕೆ ಕೊಪ್ಪಳದ ಗಾಂಧಿ ಬಳಗ ಮತ್ತು ಇತರ ಹಲವಾರು ಸೇವಾ ಸಂಘಗಳ ಸಹಯೋಗದೊಂದಿಗೆ ಕೊಪ್ಪಳದ ಅಶೋಕ ವೃತ್ತದಿಂದ ಪಾದಯಾತ್ರೆ ಮೂಲಕ ತೆರಳಲಾಗುತ್ತದೆ ಎಂದರು.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವವರು ಶ್ವೇತವಸ್ತ್ರಧಾರಿಗಳಾಗಿರಬೇಕು. ಪಾದಯಾತ್ರೆಗೆ ಹೆಸರು ನೋಂದಾಯಿಸಲು ಬಸವರಾಜ ಸವಡಿ ೯೪೮೧೯೩೮೩೦೪, ರಾಮಣ್ಣ ಶ್ಯಾವಿ ೯೫೩೮೮೦೧೭೦೭, ಡಾ. ಸಿದ್ಧಲಿಂಗಪ್ಪ ಕೊಟ್ನೇಕಲ್ ೯೪೪೮೫೭೦೩೪೦, ಮಹಾಂತೇಶ ಚಳ್ಳಮರದ ೯೫೩೫೪೮೮೧೮೫, ಪ್ರಕಾಶಗೌಡ ೯೯೮೦೯೧೦೫೩೩, ಹನುಮಂತ ಕುರಿ ೯೮೮೦೭೫೯೭೧೨, ಪ್ರಾಣೇಶ ಪೂಜಾರ ೯೯೦೨೮೯೩೬೭೧, ನಾಗರಾಜ ನಾಯಕ ಡಿ. ಡೊಳ್ಳಿನ ೯೯೦೧೧೩೫೮೭೪ ಸಂಪರ್ಕಿಸಲು ಕೋರಿದೆ.ಗಾಂಧಿ ಬೆಳಕು: ಅ. 2ರಂದು ಸಂಜೆ ಗಾಂಧಿ ಬೆಳಕು ಉಪನ್ಯಾಸ ಹಾಗೂ ಸಂಗೀತ ಕಾರ್ಯಕ್ರಮ ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಜರುಗಲಿದೆ ಎಂದು ಶಿಕ್ಷಕರ ಕಲಾ ಸಂಘದ ಪ್ರಾಣೇಶ ಪೂಜಾರ ತಿಳಿಸಿದರು.
ಕಾರ್ಯಕ್ರಮದ ಸಾನ್ನಿಧ್ಯವನ್ನು ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಅಧ್ಯಕ್ಷತೆ ಸಂಗಣ್ಣ ಕರಡಿ, ಉದ್ಘಾಟಕರಾಗಿ ಸಂಸದರಾದ ರಾಜಶೇಖರ ಹಿಟ್ನಾಳ, ಜ್ಯೋತಿ ಬೆಳಗಿಸುವವರು ಶಾಸಕರಾದ ರಾಘವೇಂದ್ರ ಹಿಟ್ನಾಳ, ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ವಿಧಾನ ಪರಿಸತ್ ಸದಸ್ಯರಾದ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದಪಟೇಲ್, ಉಪನ್ಯಾಸ ಡಾ. ಪ್ರಭುರಾಜ ನಾಯಕ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.ಶಿವಪ್ಪ ಜೋಗಿ, ಸಿದ್ಲಿಂಗಪ್ಪ ಕೊಟ್ನೆಕಲ್, ನಾಗರಾಜ ಡೊಳ್ಳಿನ ಮೊದಲಾದವರು ಇದ್ದರು.