ಕನ್ನಡಪ್ರಭ ವಾರ್ತೆ ಮೂಲ್ಕಿ
ಕಿನ್ನಿಗೋಳಿ ಬೆತ್ಲೇಮ್ ಸ್ಟಾರ್ ಕಾಂಪ್ಲೆಕ್ಸ್‌ನಲ್ಲಿ ನೂತನವಾಗಿ ಆರಂಭಗೊಂಡ ಹಳೆಯಂಗಡಿಯ ಪ್ರಿಯದರ್ಶಿನಿ ಕೋ- ಆಪರೇಟಿವ್ ಸೊಸೈಟಿಯ ಮೂರನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.
ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿಯು ಅಧ್ಯಕ್ಷ ವಂಸಂತ್ ಬೆರ್ನಾಡ್ ಅವರ ನೇತೃತ್ವದಲ್ಲಿ ಪ್ರಥಮ ವರ್ಷದಲ್ಲೇ ಲಾಭ ಪಡೆದುಕೊಂಡು ಇದೀಗ ಮೂರನೇ ಶಾಖೆ ಆರಂಭಿಸಿರುವುದ ದೊಡ್ಡ ಸಾಧನೆಯಾಗಿದೆ. ಸಹಕಾರ ಚಳವಳಿಗೆ ಸದಾ ತನ್ನ ಬೆಂಬಲವಿದ್ದು, ಪ್ರಿಯದರ್ಶಿನಿ ಸೊಸೈಟಿಗೆ ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ೫ ಲಕ್ಷ ರು. ನೀಡುವುದಾಗಿ ಘೋಷಿಸಿದರು.ಮೂಲ್ಕಿ ಸೀಮೆ ಅರಸ ಎಂ. ದುಗ್ಗಣ್ಣ ಸಾವಂತರು ಸೊಸೈಟಿಯ ಭದ್ರಾತಾ ಕೊಠಡಿ ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸವಲತ್ತುಗಳು ದೊರೆಯಲು ಸೊಸೈಟಿಯು ನಡೆಸುತ್ತಿರುವ ಪ್ರಾಮಾಣಿಕ ಪ್ರಯತ್ನ ಯಶಸ್ವಿಯಾಗಲೆಂದು ಹೇಳಿದರು.
ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ. ರೈ ಚಾಲನೆ ನೀಡಿದರು. ಅಮೃತ ನಗದು ಪತ್ರ ಠೇವಣಿಯನ್ನು ಕೊಸೆಸಾಂವ್ ಅಮ್ಮ ಚರ್ಚ್ ಕಿನ್ನಿಗೋಳಿಯ ಧರ್ಮಗುರು ಫಾವುಸ್ತಿನ್ ಲುಕಾಸ್ ಲೋಬೋ ಬಿಡುಗಡೆಗೊಳಿಸಿದರು. ಠೇವಣಿ ಪತ್ರವನ್ನು ದುರ್ಗಾದಯ ಕಿನ್ನಿಗೋಳಿಯ ಮಾಲಕ ಸೀತಾರಾಮ ಶೆಟ್ಟಿ ಬಿಡುಗಡೆಗೊಳಿಸಿದರು. ಉಳಿತಾಯ ಖಾತೆಯ ಪಾಸ್‌ಬುಕ್ಕನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿರ್ದೇಶಕ ಡಾ.ಐಕಳಬಾವ ದೇವಿ ಪ್ರಸಾದ್ ಶೆಟ್ಟಿ ವಿತರಿಸಿದರು. ಮಾಸಿಕ ಠೇವಣಿ ಪತ್ರವನ್ನು ಸಿ.ಎಸ್.ಐ ಅಮ್ಮನ್ ಮೆಮೊರಿಯಲ್ ಚರ್ಚ್ ಹಳೆಯಂಗಡಿ ಸಭಾಪಾಲಕ ಅಮೃತ್ ರಾಜ್ ಖೋಡೆ ಬಿಡುಗಡೆಗೊಳಿಸಿದರು. ಪ್ರಥಮ ವಾಹನ ಸಾಲವನ್ನು ಪಾವಂಜೆಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿ. ಸೂರ್ಯ ಕುಮಾರ್ ವಿತರಿಸಿದರು. ನಿತ್ಯನಿಧಿ ಪಾಸ್‌ಬುಕ್ಕನ್ನು ಲಯನ್ ಜಿಲ್ಲಾ ಗವರ್ನರ್ ಡಾ.ಮೆಲ್ವಿನ್ ಡಿಸೋಜ ವಿತರಿಸಿದರು.
ಪ್ರಿಯದರ್ಶಿನಿ ಸೊಸೈಟಿಯ ಅಧ್ಯಕ್ಷ ವಸಂತ ಬೆರ್ನಾಡ್ ಪ್ರಸ್ತಾವಿಸಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವದಿಕಾರಿ ಸುದರ್ಶನ್ ವಂದಿಸಿದರು. ಪ್ರಕಾಶ್ ಆಚಾರ್ ಹಾಗೂ ಅಕ್ಷತಾ ಶೆಟ್ಟಿ ನಿರೂಪಿಸಿದರು.