ಜೆಡಿಎಸ್ ಮುಖಂಡ ಭರವಸೆ ಕನ್ನಡಪ್ರಭ ವಾರ್ತೆ ಅರಸೀಕೆರೆ
ನಾಫೆಡ್ ಮೂಲಕ ಎಪಿಎಂಸಿ ಕೇಂದ್ರಗಳಲ್ಲಿ ಕೊಬ್ಬರಿ ಮಾರಾಟ ನೋಂದಣಿ ವಿಳಂಬ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಿದ್ದೇನೆ ಎಂದು ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಎಚ್.ಡಿ. ರೇವಣ್ಣ ಹೇಳಿದರು.ನಗರದ ರೈಲ್ವೆ ನಿಲ್ದಾಣದಿಂದ ಸಂಸದರು ಮತ್ತು ಜೆಡಿಎಸ್ ಶಾಸಕರ ನಿಯೋಗದೊಂದಿಗೆ ಮಂಗಳವಾರ ಹುಬ್ಬಳ್ಳಿಗೆ ತೆರಳುವ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದರು. ಲಭ್ಯವಿರುವ ಮಾಹಿತಿ ಅನುಸಾರ ಜ.೨೦ರಿಂದ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ ಅಧಿಕಾರಿಗಳು ಯಾವ ಕಾರಣದಿಂದ ಫೆ.೧ಕ್ಕೆ ಮುಂದೂಡಿದ್ದಾರೆ ಎಂಬುದು ತಿಳಿದಿಲ್ಲ. ಈ ಸಂಬಂಧ ಶೀಘ್ರವೇ ನೋಂದಣಿ ಆರಂಭಿಸಲು ಚರ್ಚಿಸಲಾಗುವುದು. ತೆಂಗು ಬೆಳೆಗಾರರು ಯಾವುದೇ ಕಾರಣಕ್ಕೂ ಅತಂಕಕ್ಕೆ ಒಳಗಾಗುವುದು ಬೇಡ ಎಂದರು.
‘ನನ್ನನ್ನೂ ಒಳಗೊಂಡಂತೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು, ಮಾಜಿ ಸಿಎಂ ಎಚ್ಡಿಕೆ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರ ನಿಯೋಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ಸಂಬಂಧಿಸಿದ ಇಲಾಖೆಯ ಸಚಿವರನ್ನು ಭೇಟಿ ಮಾಡಿದ್ದರ ಫಲವಾಗಿ ತೆಂಗು ಬೆಳೆಗಾರರಿಗೆ ಅನುಕೂಲವಾಗಿದೆ. ನಮ್ಮ ಹೋರಾಟವನ್ನು ಮರೆಮಾಚುವ ನಾಟಕ ಆರಂಭಿಸಿದ್ದಾರೆ’ ಎಂದು ವ್ಯಂಗ್ಯವಾಡಿದರು.ಶಾಸಕ ಸ್ವರೂಪ್ ಪ್ರಕಾಶ್, ಮುಖಂಡರಾದ ಶೇಖರನಾಯ್ಕ್, ಬಸವಲಿಂಗಪ್ಪ, ಸಿ.ಗಿರೀಶ್, ಜೆಡಿಎಸ್ ಮುಖಂಡರಾದ ಹೊಸೂರು ಗಂಗಾಧರ್, ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಸಿಕಂದರ್, ರಮೇಶ್ ನಾಯ್ಡು, ಪುಟ್ಟಸ್ವಾಮಿ, ಯೋಗೀಶ್, ಗಣೇಶ್, ಬಿ.ಜಿ.ನಿರಂಜನ್, ಕುಮಾರ್, ರಮೇಶ್, ಪವನ್, ಸುಮಿತ್ ಇದ್ದರು.
ಹುಬ್ಬಳ್ಳಿಗೆ ತೆರಳುವ ಮುನ್ನ ಶಾಸಕ ಎಚ್.ಡಿ.ರೇವಣ್ಣ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಇದ್ದರು. ಶಾಸಕ ಸ್ವರೂಪ್ ಪ್ರಕಾಶ್, ಸಿ.ಗಿರೀಶ್, ಸಿಕಂದರ್, ರಮೇಶ್ ನಾಯ್ಡು, ಪುಟ್ಟಸ್ವಾಮಿ, ಯೋಗೀಶ್ ಇದ್ದಾರೆ.