ನಾಪೋಕ್ಲು: ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ

KannadaprabhaNewsNetwork | Published : Oct 10, 2024 2:20 AM

ಸಾರಾಂಶ

ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಜರುಗಿತು. ಬೆಳ್ಯನ ಚಂದ್ರಪ್ರಕಾಶ್‌ ಕಾರ್ಯಕ್ರಮ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಗೋಪಾಲಕೃಷ್ಣ ಯುವ ಸಂಘದ ವತಿಯಿಂದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಭಾನುವಾರ ಅವಂದೂರು ಗ್ರಾಮದ ಕಾಳೇರಮ್ಮನ ಅನಂತ ಹೋಂ ಸ್ಟೇ ಬಳಿ ಜರುಗಿತು.

ಅವಂದೂರು ದವಸ ಬಂಡಾರದ ಅಧ್ಯಕ್ಷರಾದ ಬೆಳ್ಯನ ಚಂದ್ರಪ್ರಕಾಶ್ ರವರು ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಬಳಿಕ ವಿವಿಧ ಕಡೆಯಿಂದ ಆಗಮಿಸಿದ ಸ್ಪರ್ಧಾಳುಗಳಿಂದ ಗುಂಡು ಹೊಡೆಯುವ ಸ್ಪರ್ಧೆ ಜರುಗಿತು.

ಸಮಾರೋಪ ಸಮಾರಂಭ ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ದೇವಾಯಿರ ಕೀರ್ತನ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಮುಖ್ಯೋಪಾಧ್ಯಾಯ ಕೆದಂಬಾಡಿ ಎಸ್ ಪುಟ್ಟಯ್ಯ, ನಿವೃತ್ತ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಚೊಕ್ಕಾಡಿ ಎನ್. ಅಪ್ಪಯ್ಯ ಅವಂದೂರು, ಪಂಚಾಯಿತಿ ಸದಸ್ಯರಾದ ಊರೊಳನ ತೇಜಕುಮಾರ್, ದೇವಾಯಿರ ಮೋಹಿನಿ ರಾಘವಯ್ಯ, ಕಾಳೇರಮ್ಮನ ಅನಂತ ಕುಮಾರ್ ಮತ್ತು ದಾನಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘಟಕ ಬಗ್ಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿ ಶುಭ ಹಾರೈಸಿದರು. ಪಟ್ಟಡ ಶಿವಕುಮಾರ್ ಸ್ವಾಗತಿಸಿ, ನಿರೂಪಿಸಿ , ವಂದಿಸಿದರು.

ಸ್ಪರ್ಧೆಯಲ್ಲಿ ವಿಜೇತರಾದವರು:

ಸ್ಪರ್ಧೆಯಲ್ಲಿ .22 ರೈಫಲ್, ತೋಟದ ಕೋವಿ, ಏರ್ ಗನ್ ಇಂದ ಮೊಟ್ಟೆ ಒಡೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು. .22 ರೈಫಲ್ ನ ಮೊದಲ ಬಹುಮಾನವನ್ನು ಪುತ್ತರೀರ ನಂಜಪ್ಪ, ದ್ವಿತೀಯ ಬಹುಮಾನವನ್ನು ಮೂಲೆಮಜಲು ಬಾಲಕೃಷ್ಣ, ಮೂರನೇ ಬಹುಮಾನ ವನ್ನು ಶ್ಲೋಕ್ ಸುಬ್ಬಯ್ಯ ಪಡೆದುಕೊಂಡರು.

ತೋಟದ ಕೋವಿಯ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಭಜನ್ ಅಪ್ಪುಮಣಿಯಂಡ, ದ್ವಿತೀಯ ಬಹುಮಾನವನ್ನು ಬ್ರಿಜೇಶ್, ಮೂರನೇ ಬಹುಮಾನವನ್ನು ಮುದ್ದಂಡ ರಾಯ್ ಪಡೆದುಕೊಂಡರು.

ಏರ್ ಗನ್ ವಿಭಾಗದಲ್ಲಿ ಮೊದಲ ಬಹುಮಾನವನ್ನು ಸಿಜು, ಎರಡನೇ ಬಹುಮಾನವನ್ನು ಕನ್ನಿಕಂಡ ಶ್ಯಾಮ್, ಮೂರನೇ ಬಹುಮಾನವನ್ನು ಕೊಣಿಯಂಡ ಚಿನ್ನಪ್ಪ ಅವರು ಪಡೆದುಕೊಂಡರು.

Share this article