ಕನ್ನಡಪ್ರಭ ವಾರ್ತೆ ಹುಲಸೂರ
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಕನ್ನಡ ಜ್ಯೋತಿ ಹೊತ್ತ ರಥಯಾತ್ರೆ ಹುಲಸೂರ ತಾಲೂಕಿನ ಬೇಲೂರು ಗ್ರಾಮಕ್ಕೆ ಅ.12ರಂದು ಮಧ್ಯಾಹ್ನ 2 ಗಂಟೆಗೆ ಬರಲಿದ್ದು ರಥವನ್ನು ಸ್ವಾಗತ ಕಾರ್ಯಕ್ರಮ ಹಾಗೂ ವಾಲ್ಮಿಕಿ ಜಯಂತಿ ಅದ್ಧೂರಿಯಾಗಿ ಆಚರಿಸಬೇಕೆಂದು ಉಪ ತಹಸೀಲ್ದಾರ್ ಸಂಜೀವಕುಮಾರ ಭೈರೆ ತಿಳಿಸಿದರು.ಕನ್ನಡ ಜ್ಯೋತಿ ರಥಯಾತ್ರೆಗೆ ಅದ್ಧೂರಿ ಸ್ವಾಗತ ಹಾಗೂ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಅಂಗವಾಗಿ ಮಂಗಳವಾರ ತಹಸೀಲ್ದಾರ್ ಕಚೇರಿಯಲ್ಲಿ ಪೂರ್ವ ಭಾವಿಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಪರ ಸಂಘಟನೆಗಳು, ಸರ್ಕಾರಿ ನೌಕರರು, ವಿವಿಧ ಸಂಘಟನೆಗಳಿಂದ ಸ್ವಾಗತ ಕೋರಿ ತಾಲೂಕು ಕೇಂದ್ರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮದ್ಯಾಹ್ನ 3 ಗಂಟೆಗೆ ಸುಗಮವಾಗಿ ಮುಂದಿನ ತಾಲೂಕಿಗೆ ಹೋಗಲು ನೇರವಾಗಿರಬೇಕು ಎಂದು ಭೈರೆ ತಿಳಿಸಿದರು.
ಶಾಲಾ ಮಕ್ಕಳು ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿನ ಕನ್ನಡ ಪರ ಸಂಘಟನೆಗಳಿಂದ ರಥಯಾತ್ರೆಗೆ ಸಾಂಸ್ಕೃತಿಕ ಮೆರುಗು ನೀಡುವ ಮೂಲಕ ಬರ ಮಾಡಿಕೊಳ್ಳಲು ಕಸಾಪ ತಾಲೂಕು ಅಧ್ಯಕ್ಷ ನಾಗರಾಜ ಹಾವಣ್ಣ ತಿಳಿಸಿದರು. ಅ.17ರಂದು ನಡೆಯಲಿರುವ ಮಹರ್ಷಿ ವಾಲ್ಮೀಕಿ ಜಯಂತಿ ಸರ್ಕಾರಿ ಕಚೇರಿಗಳಲ್ಲಿ ಆಚರಣೆ ಮಾಡಬೇಕು, ಇದರಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಭಾಗವಹಿಸಬೇಕು ಎಂದು ಸಮುದಾಯದ ತಾಲೂಕು ಅಧ್ಯಕ್ಷ ಪ್ರಶಾಂತ ಕಾಳೆ ತಿಳಿಸಿದರು.ತಾಪಂ ಇಒ ವೈಜಣ್ಣ ಫುಲೆ, ಕಸಾಪ ತಾಲೂಕಾಧ್ಯಕ್ಷ ನಾಗರಾಜ ಹಾವಣ್ಣ, ಉಪಾಧ್ಯಕ್ಷ ಬಸವಕುಮಾರ ಆರ್ ಕವಟೆ, ಶಿವರಾಜ ಖಫಲೆ, ಲತಾ ಶಾಂತಕುಮಾರ್ ಹರಕುಡೆ, ಸಮಾಜಕಲ್ಯಾಣ ಇಲಾಖೆ ನಿಂಗಣ್ಣ ಗೌಡ ಪಾಟೀಲ್, ಸಿಆರ್‌ಪಿ ಮಾರುತಿ ಬೇಂದ್ರೆ, ತಾಪಂ ಮಾಜಿ ಸದಸ್ಯ ಗೋವಿಂದರಾವ ಸೋಮವಂಶಿ, ಪಿಎಸ್ಐ ಪಂಡಿತರಾವ, ವಾಲ್ಮೀಕಿ ಸಮುದಾಯದ ಶಿವರಾಜ ಜಮಾದಾರ, ಕಂದಾಯ ಇಲಾಖೆ ಶರಣಪ್ಪ, ಶ್ರೀಧರ, ಶಿಕ್ಷಕ ಧರ್ಮೇಂದ್ರ ಭೋಸ್ಲೆ, ಬಿಆರ್‌ಪಿ ಅಲಿಕಾ ಬಾನು ಇತರರಿದ್ದರು.