ಕನ್ನಡಪ್ರಭ ವಾರ್ತೆ ಹೊಸಕೋಟೆ
ನಗರದ ಬಿಎಂಆರ್‌ಡಿ ಬಡಾವಣೆಯಲ್ಲಿ ತಾಲೂಕು ಹಿಂದೂ ಪರ ಸಂಘಟನೆಗಳ ವತಿಯಿಂದ ನಡೆದ ವಿರಾಟ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭರತ ಭೂಮಿಯ ಫಲವತ್ತತೆ, ಸಾವಿರಾರು ನದಿಗಳು, ಪ್ರಕೃತಿಯ ಸೊಬಗು ಬೇರಾವ ದೇಶದಲ್ಲೂ ಕಾಣಲು ಸಿಗದು, ನಮ್ಮ ಭೂಮಿಯಲ್ಲಿ ಶ್ರೀ ಕೃಷ್ಣ ಭೋದಿಸಿದ ಭಗವದ್ಗೀತೆ ಇಂದು ಪ್ರಪಂಚದ ನೂರಾರು ದೇಶಗಳಲ್ಲಿ ಕಲಿಕಾ ವಸ್ತುವಾಗಿದೆ, ಅದರಲ್ಲಿನ ಸಾರ, ಸತ್ವವನ್ನು ಅಳವಡಿಸಿಕೊಂಡು ಪಠಣ ಮಾಡುತ್ತಿದ್ದಾರೆ, ಸಂಪೂರ್ಣ ಮುಸ್ಲಿಂ ರಾಷ್ಟ್ರವಾದ ಇಂಡೋನೇಷಿಯಾದಲ್ಲಿ ಹಿಂದೂ ಆಚರಣೆಗಳು ಮುಂದುವರಿದಿವೆ, ಇತಿಹಾಸದಲ್ಲಿ ನಮ್ಮ ಭಾರತ ಎಂದಿಗೂ ಯಾರೊಂದಿಗೂ ಯುದ್ಧಕ್ಕೆ ಮುಂದಾಗಿಲ್ಲ, ಬದಲಾಗಿ ಪಾರ್ಸಿಗಳಿಗೆ ಹಾಗೂ ಯಹೂದಿಗಳಿಗೆ ಆಶ್ರಯ ನೀಡಿದೆ, ಆದರೆ ಪಾರ್ಸಿಗಳು ಆಶ್ರಯ ಪಡೆದು ಆಕ್ರಮಣ ಮಾಡಿದರು, ಯಹೂದಿಗಳು ಆಶ್ರಯ ಪಡೆದು ಉತ್ತಮ ಭಾಂದವ್ಯ ಹೊಂದಿದರು ಎಂದು ತಿಳಿಸಿದರು.ದಿವ್ಯ ಸಾನ್ನಿಧ್ಯ ವಹಿಸಿದ್ದ ಶಿವನಾಪುರ ಆದಿಶಕ್ತಿ ಮಹಾಸಂಸ್ಥಾನ ಮಠದ ಶ್ರೀ ಪ್ರಣಾವನಂದಪುರಿ ಮಹಾ ಸ್ವಾಮೀಜಿ ಮಾತನಾಡಿ, ಋಷಿ ಮುನಿಗಳ ಕಾಲದಿಂದಲೂ ನಮಗೆ ಸನ್ಮಾರ್ಗದಲ್ಲಿ ನಡೆಯುವಂತೆ ತಿಳಿಸಲಾಗಿದೆ, ನಮ್ಮಲ್ಲಿ ವಿಗ್ರಹಾರಾಧನೆ, ಭಾವಚಿತ್ರ ಆರಾಧನೆ ಮಾಡಲಾಗುತ್ತದೆ. ವಿಗ್ರಹ ಅಥವಾ ಭಾವಚಿತ್ರ ಮುಕ್ಕಾದಲ್ಲಿ ಅವುಗಳನ್ನು ನೀರಿನಲ್ಲಿ ಬಿಡುತ್ತೇವೆ, ಪಂಚಭೂತಗಳೇ ನಮ್ಮ ದೈವಗಳಾಗಿದ್ದು ಅವುಗಳ ಆರಾಧನೆ, ಪೂಜೆ ಮಾಡಿ ದೈವಗಳನ್ನು ಕಾಣುತ್ತಿದ್ದೇವೆ, ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎಂಬ ಮಾತು ಸತ್ಯ, ಒಗ್ಗಟ್ಟಾಗಿ ಬಾಳಿ ಬದುಕೋಣ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆಯ ೧೮೦ ಪೌರ ಕಾರ್ಮಿಕರಿಗೆ, ವಾಟರ್ ಮ್ಯಾನ್ಗಳಿಗೆ, ಸ್ಮಶಾನದಲ್ಲಿ ಗುಂಡಿ ತೋಡುವವರಿಗೆ ಕಂಬಳಿ, ಜರ್ಕೀನ್ ಹಾಗೂ ಸೀರೆಯನ್ನು ವಿತರಿಸಿ ಗೌರವ ಸಮರ್ಪಣೆ ಮಾಡಲಾಯಿತು.
ಸತೀಶ್ , ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್