ಸರ್ಫೇಸಿ ಕಾಯ್ದೆಯಡಿ ಸೇರದ ಕಾಫಿ ಕೃಷಿ: ಸಂಸತ್ತಿನಲ್ಲಿ ದೊರೆತ ಉತ್ತರಕ್ಕೆ ಒಕ್ಕೂಟ ಸಂತಸ

KannadaprabhaNewsNetwork |  
Published : Dec 06, 2024, 08:57 AM IST
32 | Kannada Prabha

ಸಾರಾಂಶ

ಕಾಫಿ ಕೖಷಿರಂಗದ ಮೇಲೆ ಪರಿಣಾಮ ಬೀರುವ ಸರ್ಫೇಸಿ ಕಾಯಿದೆ ಸಂಬಂಧಿತ ಲೋಕಸಭೆಯಲ್ಲಿ ಗಮನ ಸೆಳೆದು ಕಾಫಿ ಕೖಷಿಯು ಸರ್ಫೇಸಿ ಕಾಯಿದೆಯಡಿ ಬರುವುದಿಲ್ಲ ಎಂಬ ನಿರ್ಣಾಯಕ ಉತ್ತರಕ್ಕೆ ಕಾರಣರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕಾಫಿ ಕೖಷಿರಂಗದ ಮೇಲೆ ಪರಿಣಾಮ ಬೀರುವ ಸರ್ಫೇಸಿ ಕಾಯಿದೆ ಸಂಬಂಧಿತ ಲೋಕಸಭೆಯಲ್ಲಿ ಗಮನ ಸೆಳೆದು ಕಾಫಿ ಕೖಷಿಯು ಸರ್ಫೇಸಿ ಕಾಯಿದೆಯಡಿ ಬರುವುದಿಲ್ಲ ಎಂಬ ನಿರ್ಣಾಯಕ ಉತ್ತರಕ್ಕೆ ಕಾರಣರಾದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೂರ್ಗ್‌ ಪ್ಲಾಂಟರ್ಸ್‌ ಅಸೋಸಿಯೇಷನ್ ಮತ್ತು ಕರ್ನಾಟಕ ಬೆಳೆಗಾರರ ಒಕ್ಕೂಟ ಕೃತಜ್ಞತೆ ಸಲ್ಲಿಸಿದೆ.

ಈಗಾಗಲೇ ತೀವ್ರ ನೈಸರ್ಗಿಕ ವಿಕೋಪಗಳು, ನಿರಂತರ ಬೆಳೆ ವೈಫಲ್ಯಗಳು ಮತ್ತು ಕಡಿಮೆ ಸರಕು ಬೆಲೆ ಸಂಕಷ್ಟ ಎದುರಿಸುತ್ತಿರುವ ಕಾಫಿ ಕೖಷಿಕರ ಮೇಲೆ ಸರ್ಫೇಸಿ ಕಾಯಿದೆ ಮತ್ತೊಂದು ಮಾನಸಿಕ, ಆರ್ಥಿಕಕ ಹೊಡೆತದಂತಿತ್ತು. ಕಾಫಿ ಕೃಷಿಕರು ಬ್ಯಾಂಕ್ ನಲ್ಲಿ ಮಾಡಿರುವ ಸಾಲದ ವಸೂಲಾತಿಗೆ ಸರ್ಫೇಸಿ ಕಾಯಿದೆ ಬಳಸಿಕೊಂಡು ಸಾಲಗಾರ ಕೖಷಿಕನ ಕಾಫಿ ತೋಟವನ್ನು ಬ್ಯಾಂಕ್ ಗಳು ಜಪ್ತಿ ಮಾಡುವ ಮೂಲಕ ಕೖಷಿಕರ ಆತಂಕಕ್ಕೆ ಕಾರಣವಾಗಿತ್ತು, ಕಾಯಿದೆಯನ್ನು ಬ್ಯಾಂಕಿಂಗ್ ವಲಯವು ಜಾರಿಗೊಳಿಸುತ್ತಿದ್ದ ಹಿನ್ನೆಲೆಯಲ್ಲಿ ಅನೇಕ ಕಾಫಿ ಬೆಳೆಗಾರರು ತಮ್ಮ ಅಮೂಲ್ಯ ಕಾಫಿ ತೋಟಗಳನ್ನು ಕಳೆದುಕೊಳ್ಳುವಂಥ ಪರಿಸ್ಥಿತಿ ಎದುರಾಗಿತ್ತು ಎಂದು ಒಕ್ಕೂಟ ಹೇಳಿದೆ.

ಸಂಸತ್‌ ಅಧಿವೇಶನದಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರ ‘ಕಾಫಿ ಕೃಷಿಯು ಸರ್ಫೇಸಿ ಕಾಯಿದೆಯಡಿ ಬರುತ್ತದೆಯೇ?’ ಎಂಬ ಗಮನ ಸೆಳೆಯುವ ಪ್ರಶ್ನೆಗೆ ‘ಕಾಫಿ ಕೃಷಿ ಸರ್ಫೇಸಿ ಕಾಯಿದೆಯಡಿ ಬರುವುದಿಲ್ಲ’ ಎಂದು ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌ ಉತ್ತರ ನೀಡಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಕೂರ್ಗ್ ಪ್ಲಾಂಟರ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಎಂ.ನಂದಾ ಬೆಳ್ಯಪ್ಪ, ಕರ್ನಾಟಕ ಬೆಳೆಗಾರರ ಒಕ್ಕೂಟ ಉಪಾಧ್ಯಕ್ಷ ಕೆ.ಕೆ.ವಿಶ್ವನಾಥ್‌ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಈ ಉತ್ತರವು ಕಾಫಿ ಕೃಷಿಕರಿಗೆ ಕಾನೂನಿನ ರಕ್ಷಣೆ ನೀಡಿದಂತಾಗಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಫಿ ಕೃಷಿಕರಿಗೆ ಮುಂದಿನ ದಿನಗಳಲ್ಲಿ ಸರ್ಫೇಸಿ ಕಾಯಿದೆ ಬಳಸಿಕೊಂಡು ಅನಗತ್ಯವಾಗಿ ನೋಟೀಸ್ ಜಾರಿಗೊಳಿಸುವ ಪ್ರಕ್ರಿಯೆಯನ್ನು ಕೂಡಲೇ ನಿಲ್ಲಿಸುವಂತೆ ಬೆಳೆಗಾರ ಸಂಘಟನೆಗಳು ಎಚ್ಚರಿಸಿವೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ