ಚಿಕ್ಕಮಗಳೂರುಎಸ್‌ಐಆರ್‌ನ ಎನುಮರೇಶನ್ ಫಾರಂ ಡಿಜಿಟಲೀಕರಣವನ್ನು ಶೇ.62 ರಷ್ಟು ಪೂರ್ಣಗೊಳಿಸುವ ಮೂಲಕ ಕಾಫಿನಾಡು ಚಿಕ್ಕಮಗಳೂರು ರಾಜ್ಯದಲ್ಲೇ ಟಾಪ್ 8ನೇ ಸ್ಥಾನದಲ್ಲಿದೆ.
ಎನುಮರೇಶನ್ ಫಾರಂ ವಿತರಣೆ ಹಾಗೂ ಭರ್ತಿ ಮಾಡಿದ ಫಾರಂ ವಾಪಾಸ್ ಸಂಗ್ರಹಿಸಿ ಡಿಜಿಟಲೀಕರಣ
ವಿಶ್ವನಾಥ ಮಲೇಬೆನ್ನೂರು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಎಸ್‌ಐಆರ್‌ನ ಎನುಮರೇಶನ್ ಫಾರಂ ಡಿಜಿಟಲೀಕರಣವನ್ನು ಶೇ.62 ರಷ್ಟು ಪೂರ್ಣಗೊಳಿಸುವ ಮೂಲಕ ಕಾಫಿನಾಡು ಚಿಕ್ಕಮಗಳೂರು ರಾಜ್ಯದಲ್ಲೇ ಟಾಪ್ 8ನೇ ಸ್ಥಾನದಲ್ಲಿದೆ.
ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಭಾಗವಾಗಿ ಎನುಮರೇಶನ್ ಫಾರಂ ವಿತರಣೆ ಹಾಗೂ ಭರ್ತಿ ಮಾಡಿದ ಫಾರಂ ವಾಪಾಸ್ ಸಂಗ್ರಹಿಸಿ ಡಿಜಿಟಲೀಕರಣ ಮಾಡುವ ಪ್ರಕ್ರಿಯೆಯಲ್ಲಿ ಚಿಕ್ಕಮಗಳೂರು ಟಾಪ್ 8ನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.
ಕಳೆದ 17 ದಿನಗಳಲ್ಲಿಯೇ ಬರೋಬ್ಬರಿ 5.96,049 ಮತದಾರರಿಂದ ಭರ್ತಿ ಮಾಡಿದ ಫಾರಂ ವಾಪಾಸ್ ಪಡೆದು ಶೇ.62.07 ರಷ್ಟು ಡಿಜಿಟಲಿಕರಣ ಪೂರ್ಣಗೊಳಿಸಲಾಗಿದೆ.
ಮಲೆನಾಡು ಭಾಗದಲ್ಲಿಯೇ ಹೆಚ್ಚು ಪ್ರಗತಿ
ಎನುಮರೇಶನ್ ಫಾರಂ ವಿತರಣೆ ಹಾಗೂ ಭರ್ತಿ ಮಾಡಿ ಸಂಗ್ರಹಿಸಿದ ಫಾರಂ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಬಯಲು ಸೀಮೆಗಿಂತ ಜಿಲ್ಲೆಯ ಘಟ್ಟ ಪ್ರದೇಶದಲ್ಲಿಯೇ ಉತ್ತಮ ಪ್ರಗತಿ ಆಗಿದೆ. ಘಟ್ಟಪ್ರದೇಶದಲ್ಲಿ ಅಲ್ಲೊಂದು ಇಲ್ಲೊಂದು ಮನೆ ಗಳಿದ್ದರೂ ಸಹ ಫಾರಂ ವಿತರಣೆ, ಡಿಜಿಟಲೀಕರಣ ಪ್ರಗತಿ ಕಂಡಿದೆ. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.64 ರಷ್ಟು ಡಿಜಿಟಲಿಕರಣ ಆಗಿದೆ.
ಅಡ್ಡಿಯಾಗದ ನೆಟ್‌ವರ್ಕ್ ಸಮಸ್ಯೆ
ಇಂಟರ್ ನೆಟ್ ಸಮಸ್ಯೆ ಕಾಡುವ ಮಲೆನಾಡು ಭಾಗದಲ್ಲಿ ಎನುಮರೇಶನ್ ಫಾರಂ ವಿತರಣೆ ಮತ್ತು ಡಿಜಿಟಲೀಕರಣಕ್ಕೆ ಇಂಟರ್ ನೆಟ್‌ನ ಯಾವುದೇ ಸಮಸ್ಯೆಯಿಂದ ಅಡ್ಡಿಯಾಗದಂತೆ ಬೂತ್‌ಮಟ್ಟದ ಅಧಿಕಾರಿಗಳು ಎಸ್‌ಐಆರ್‌ನ ಎನುಮರೇಶನ್ ಫಾರಂ ವಿತರಣೆ ಮತ್ತು ಡಿಜಿಟಲೀಕರಣವನ್ನು ನಿರ್ವಹಿಸಿರುವುದಕ್ಕೆ ಬೂತ್ ಮಟ್ಟದ ಅಧಿಕಾರಿಗಳನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.----ಬಾಕ್ಸ್----
ಶೇ.1.39 ರಷ್ಟು ಫಾರಂ ವಿತರಣೆ ಬಾಕಿ
ಚಿಕ್ಕಮಗಳೂರು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 9,60,231 ಮತದಾರರಿದ್ದು ಜೂನ್ 30 ರಿಂದ ಬಿಎಲ್‌ಒಗಳು ಮನೆ ಮನೆ ಭೇಟಿ ನೀಡಿ ಎನುಮರೇಶನ್ ಫಾರಂ ವಿತರಣೆ ಮಾಡಲಾಗುತ್ತಿದೆ. ಈ ಪೈಕಿ ಗುರುವಾರ ಮಧ್ಯಾಹ್ನ 2ರ ವೇಳೆ 9,46,921 ಮತದಾರರಿಗೆ ಎನುಮರೇಶನ್ ಫಾರಂ ವಿತರಣೆ ಮೂಲಕ ಶೇ.98.61 ರಷ್ಟು ವಿತರಣೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಇನ್ನೂ ಕೇವಲ 1.39 ರಷ್ಟು ಅಂದರೆ, 13,310 ಮತದಾರರಿಗೆ ಮಾತ್ರ ಎನುಮರೇಶನ್ ಫಾರಂ ವಿತರಣೆ ಬಾಕಿ ಇದೆ.---ಬಾಕ್ಸ್---
ಜಿಲ್ಲಾಡಳಿತ, ಜಿಪಂನಿಂದ ಹಲವು ಕ್ರಮ
ಬಿಎಲ್‌ಒಗಳ ಮೇಲೆ ಮಾತ್ರ ಈ ಎಸ್‌ಐಆರ್ ಹೊರೆ ಹಾಕದೇ ಅವರ ಸಹಕಾರಕ್ಕೆ ಗ್ರಾಪಂ ಮಟ್ಟದ ಒಬ್ಬ ಸಿಬ್ಬಂದಿಯನ್ನು ನೆರವಿಗೆ ನೀಡಿದ ಪರಿಣಾಮ ತ್ವರಿತವಾಗಿ ಫಾರಂ ಹಂಚಿಕೆ ಮತ್ತು ಭರ್ತಿ ಫಾರಂ ಸಂಗ್ರಹಿಸಿ ಡಿಜಿಟಲೀಕರಣಕ್ಕೆ ಸಹಕಾರವಾಗಿದೆ. ಜತೆಗೆ, ಬಿಎಲ್‌ಒಗಳಿಗೆ ಎದುರಾಗುವ ಸಮಸ್ಯೆಗಳನ್ನು ಪರಿಹಡಿಸಲು ಗುಂಪು ಕಾರ್ಯ ನಡೆಸುವಂತೆ ಸೂಚನೆ ನೀಡಲಾಗಿದೆ. ನಗರ ಪ್ರದೇಶದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜವಾಬ್ದಾರಿ ನೀಡಿ, ಬಿಎಲ್‌ಒಗಳಿಗೆ ಮಾರ್ಗ ದರ್ಶನ ನೀಡಲಾಗುತ್ತಿದೆ. ಪ್ರತಿ ದಿನ ಸಂಜೆ 2 ತಾಸು ಕಡ್ಡಾಯವಾಗಿ ಫಾರಂ ಡಿಜಿಟಲೀಕರಣ ಮಾಡಲು ನಿರ್ದೇಶಿಸಲಾಗಿದೆ. ಕಾರ್ಯದಕ್ಷತೆ ಇರುವ ಬಿಎಲ್‌ಒಗಳಿಗೆ ಹಿರಿಯ ಅಧಿಕಾರಿಗಳು ನೆರವು ನೀಡುವ ಮೂಲಕ ಬಿಎಲ್‌ಒ ಗಳಿಗೆ ಇರುವ ಒತ್ತಡ ಕಡಿಮೆ ಮಾಡಿದ ಪರಿಣಾಮ ಉತ್ತಮ ರೀತಿಯಲ್ಲಿ ಡಿಜಿಟಲೀಕರಣ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.-- ಬಾಕ್ಸ್--
ಗುಣಮಟ್ಟಕ್ಕೆ ಒತ್ತು, ಹೋಬಳಿವಾರು ಅಧಿಕಾರಿ ನೇಮಕಉತ್ತಮವಾಗಿರುವ ಎನುಮರೇಶನ್ ಫಾರಂ ವಿತರಣೆ ಮತ್ತು ಡಿಜಿಟಲೀಕರಣದಲ್ಲಿ ಇದೀಗ ಗುಣಮಟ್ಟಕ್ಕೆ ಒತ್ತು ನೀಡಲಾಗಿದೆ. ಅಧಿಕಾರಿ ಸಿಬ್ಬಂದಿ ತಪ್ಪಿನಿಂದ ಮತದಾರರಿಗೆ ಮುಂದಿನ ದಿನಗಳಲ್ಲಿ ತೊಂದರೆ ಉಂಟಾಗಬಾರದು ಎಂಬ ಕಾರಣಕ್ಕೆ ಹೋಬಳಿವಾರು ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಈ ಅಧಿಕಾರಿ ಕನಿಷ್ಠ ದಿನಕ್ಕೆ 10 ಫಾರಂ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಫಾರಂ ಪರಿಶೀಲನೆ ವೇಳೆ, ಸಹಿ, ಬೂತ್ ಸಂಖ್ಯೆ, ಹೆಸರು, ತಂದೆ ಹೆಸರು ಮೊದಲಾದವು ಗಳನ್ನುಪರಿಶೀಲಿಸಲಾಗುತ್ತಿದೆ.
----ಕೋಟ್---
ಎಸ್‌ಐಆರ್‌ನಿಂದ ಬಿಎಲ್‌ಒಗಳಿಗೆ ಆಗುವ ಒತ್ತಡ ಕಡಿಮೆ ಮಾಡಲು ಸಾಕಷ್ಟು ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಎನುಮರೇಶನ್ ಫಾರಂ ಡಿಜಿಟಲೀಕರಣದಲ್ಲಿ ಅಧಿಕಾರಿಗಳ ಲೋಪದಿಂದ ಮುಂದಿನ ದಿನಗಳಲ್ಲಿ ಮತದಾ ರರಿಗೆ ನೋಟಿಸ್ ಹೋಗಬಾರದು. ಈ ನಿಟ್ಟಿನಲ್ಲಿ ಗುಣಮಟ್ಟದ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ.-ಭನ್ವಿರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.