ಆರ್ಥಿಕತೆಯಲ್ಲಿ ತೆಂಗಿನ ನಾರು ವಿಷಯ ಚರ್ಚೆ
ತೆಂಗಿನ ನಾರನ್ನು ಕಾಯಿರ್ ಎಂದೂ ಕರೆಯುತ್ತೇವೆ. ಇದು ತೆಂಗಿನಕಾಯಿಯ ಸಿಪ್ಪೆಯಿಂದ ಪಡೆದ ಬಹುಮುಖ ನೈಸರ್ಗಿಕ ನಾರು. ತೆಂಗಿನಕಾಯಿಯ ಗಟ್ಟಿಯಾದ ಚಿಪ್ಪಿನ ಸುತ್ತಲಿನ ನಾರಿನ ಪದರವನ್ನು ಕೊಯ್ದು, ಸ್ವಚ್ಛಗೊಳಿಸಿ ಮತ್ತು ಸಂಸ್ಕರಿಸಿ ತೆಂಗಿನ ನಾರನ್ನು ಉತ್ಪಾದಿಸಲಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ವ್ಯವಸ್ಥಾಪಕ ಬಸವರಾಜಪ್ಪ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆ, ಆಂತರಿಕ ಗುಣಮಟ್ಟದ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದೊಂದಿಗೆ ಅರ್ಥಶಾಸ್ತ್ರ ವಿಭಾಗದ ಅರ್ಥಶಾಸ್ತ್ರ ಯೋಜನಾ ವೇದಿಕೆ ವತಿಯಿಂದ ‘ಆರ್ಥಿಕ ಅಭಿವೃದ್ಧಿಯಲ್ಲಿ ತೆಂಗಿನ ನಾರು ಉದ್ಯಮ ಮತ್ತು ಖಾದ್ಯ ತೈಲ ಉದ್ಯಮದ ಪಾತ್ರ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.ತೆಂಗಿನಕಾಯಿ ಒಂದು ಸುಸ್ಥಿರ ಮತ್ತು ನವೀಕರಿಸಬಹುದಾದ ಸಂಪನ್ಮೂಲವಾಗಿದೆ, ತೆಂಗಿನ ಮರವು ವರ್ಷಕ್ಕೆ ಸರಾಸರಿ 50 ರಿಂದ 60 ತೆಂಗಿನಕಾಯಿಗಳನ್ನು ಉತ್ಪಾದಿಸುತ್ತದೆ. 60 ವರ್ಷದವರೆಗೆ ತೆಂಗಿನ ನಾರಿನ ಕೊಯ್ಲು ಮಾಡಬಹುದು. ಹೆಚ್ಚುವರಿಯಾಗಿ, ತೆಂಗಿನಕಾಯಿ ಉಪ್ಪುನೀರಿನ ಹಾನಿಗೆ ನಿರೋಧಕವಾಗಿದೆ, ಒಟ್ಟಾರೆಯಾಗಿ, ತೆಂಗಿನ ನಾರು ಬೆಲೆಬಾಳುವ ಮತ್ತು ಬಹುಮುಖ ವಸ್ತುವಾಗಿದೆ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಬಾಲಾಜಿ ಆಯಿಲ್ ಮಿಲ್ ಮಾಲೀಕ ಶ್ರೀನಿವಾಸ್ (ಬಾಬು), ಎಣ್ಣೆ ಗಿರಣಿ ಎಂದರೆ ಲಿನ್ಸೆಡ್ ಅಥವಾ ಕಡಲೆಕಾಯಿಗಳಂತಹ ಎಣ್ಣೆಯನ್ನು ಹೊಂದಿರುವ ಬೀಜಗಳನ್ನು ಪುಡಿಮಾಡಲು ವಿನ್ಯಾಸಗೊಳಿಸಿದ ಒಂದು ಗ್ರೈಂಡಿಂಗ್ ಗಿರಣಿ. ಆಹಾರವಾಗಿ ಅಥವಾ ಅಡುಗೆಗಾಗಿ, ಓಲಿಯೊ ಕೆಮಿಕಲ್ ಫೀಡ್‌ಸ್ಟಾಕ್‌ಗಳಾಗಿ, ಜೈವಿಕ ಇಂಧನಗಳಾಗಿ ಬಳಸಬಹುದು. ಪೊಮೆಸ್ ಅಥವಾ ಪ್ರೆಸ್ ಕೇಕ್ - ಎಣ್ಣೆಯನ್ನು ಹೊರತೆಗೆದಾಗ ಉಳಿದ ಘನ ವಸ್ತು. ಇದನ್ನು ಆಹಾರ ಅಥವಾ ಗೊಬ್ಬರವಾಗಿಯೂ ಬಳಸಬಹುದು. ಪ್ರಮುಖ ಫೀಡ್ ಸ್ಟಾಕ್‌ಗಳಲ್ಲಿ ಸೋಯಾಬೀನ್, ಸೂರ್ಯಕಾಂತಿ ಬೀಜಗಳು, ಹತ್ತಿಬೀಜ ಮತ್ತು ಮೆಕ್ಕೆಜೋಳ ಹಾಗೆಯೇ ಕಡಲೆಕಾಯಿಗಳು, ಆಲಿವ್ಗಳು, ವಿವಿಧ ಬೀಜಗಳು, ಎಳ್ಳು ಬೀಜಗಳು, ಕುಸುಬೆ, ದ್ರಾಕ್ಷಿ ಬೀಜಗಳು, ಅಗಸೆ ಬೀಜ ಮತ್ತು ಸಾಸಿವೆ ಎಣ್ಣೆ ಸೇರಿವೆ. ಸರಿನ್ ಉತ್ಪಾದನೆಯ ದ್ವಿತೀಯ ಉತ್ಪನ್ನ, ಎಣ್ಣೆ ಪಾಮ್ ಹಣ್ಣಿನ ತಿರುಳಿನಿಂದ ತಾಳೆ ಎಣ್ಣೆ , ಎಣ್ಣೆ ಪಾಮ್ನ ಕರ್ನಲ್ನಿಂದ ಪಾಮ್ ಕರ್ನಲ್ ಎಣ್ಣೆ ಮತ್ತು ತೆಂಗಿನಕಾಯಿಯ ಕರ್ನಲ್ನಿಂದ ತೆಂಗಿನ ಎಣ್ಣೆಯನ್ನು ಹೊರತೆಗೆಯುವ ವಿಧಾನ ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅರಸೀಕೆರೆ ಆಯೋಜಿಸಿದ್ದ ‘ಆರ್ಥಿಕ ಅಭಿವೃದ್ಧಿಯಲ್ಲಿ ತೆಂಗಿನ ನಾರು ಉದ್ಯಮ ಮತ್ತು ಖಾದ್ಯ ತೈಲ ಉದ್ಯಮದ ಪಾತ್ರ’ ಎಂಬ ವಿಷಯದ ಕುರಿತು ರಾಜ್ಯ ತೆಂಗಿನ ನಾರಿನ ಸಹಕಾರ ಮಹಾಮಂಡಳಿ ಮ್ಯಾನೇಜರ್ ಬಸವರಾಜಪ್ಪ ಉಪನ್ಯಾಸ ನೀಡಿದರು.