ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಹಲವು ಮತದಾರರಿಗೆ ಕೊಕ್‌

KannadaprabhaNewsNetwork |  
Published : Aug 26, 2026, 01:45 AM IST
25ಎಚ್ಎಸ್ಎನ್13 : ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿ ಮತಗಟ್ಟೆ ನೊಂದಣಾಧಿಕಾರಿ ರೇಖಾ ಮತ್ತು ತಹಸೀಲ್ದಾರ್ ಜಿ.ಎಸ್.ಶಂಕರಪ್ಪ, ಬಿಡುಗಡೆ ಮಾಡಿದರು ಎನ್.ಅನಿಲ್ ಕುಮಾರ್, ಸೇರಿದಂತೆ ವಿವಿಧ ಪಕ್ಷದ ಪ್ರತಿನಿಧಿಗಳು ಭಾಗವಹಿಸಿದ್ದರು. | Kannada Prabha

ಸಾರಾಂಶ

ಎಸ್‌ಐಆರ್‌ಗೂ ಮುನ್ನ ಕ್ಷೇತ್ರದಲ್ಲಿ ಒಟ್ಟು ೨,೧೪,೪೫೪ ಮತದಾರರು ಇದ್ದರು. ಪರಿಶೀಲನೆ ಬಳಿಕ ೧,೯೨,೦೭೯ ಮತದಾರರ ಮತದಾರರ ಚೀಟಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಮತದಾರರ ೮೯.೬೩ರಷ್ಟು ಆಗಿದೆ. ವಿವಿಧ ಕಾರಣಗಳಿಂದ ೨೨,೩೭೫ ಮತದಾರರ ಹೆಸರುಗಳನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ ಎಂದರು. ಎಸ್‌ಐಆರ್‌ ಸಂದರ್ಭದಲ್ಲಿ ಪಟ್ಟಿಯಿಂದ ಹೊರಗುಳಿದಿರುವ ೨೨,೩೭೫ ಮತದಾರರಲ್ಲಿ ೮೦೯೧ ಮಂದಿ ಮೃತಪಟ್ಟಿರುವುದು, ೧೨,೦೭೪ ಮಂದಿ ಶಾಶ್ವತವಾಗಿ ವಲಸೆ ಹೋಗಿರುವುದು ಪತ್ತೆಯಾಗಿದೆ. ೩೬೧ ಪುನರಾವರ್ತಿತ ಹೆಸರುಗಳು, ೧,೮೧೩ ಗೈರು ಮತದಾರರು ೩೬೧ ಹಾಗೂ ೩೬ ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ರಾಜ್ಯಾದ್ಯಂತ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯಡಿ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ೧,೯೨,೦೭೯ ಮತದಾರರು ಪಟ್ಟಿಯಲ್ಲಿ ಉಳಿದಿದ್ದು, ೨೨,೩೭೫ ಮತದಾರರನ್ನು ವಿವಿಧ ಕಾರಣಗಳಿಂದ ಪಟ್ಟಿಯಿಂದ ಕೈಬಿಡಲಾಗಿದೆ ಎಂದು ಮತಗಟ್ಟೆ ನೋಂದಣಾಧಿಕಾರಿ ರೇಖಾ ತಿಳಿಸಿದರು.ಪಟ್ಟಣದ ತಹಸೀಲ್ದಾರ್‌ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ- ೨೦೨೬ರ ಸಂಬಂಧ ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟಿಸುವ ಕುರಿತಂತೆ ಮಾನ್ಯತೆ ಪಡೆದ ನೋಂದಾಯಿತ ರಾಜಕೀತ ಪಕ್ಷಗಳ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಎಸ್‌ಐಆರ್‌ಗೂ ಮುನ್ನ ಕ್ಷೇತ್ರದಲ್ಲಿ ಒಟ್ಟು ೨,೧೪,೪೫೪ ಮತದಾರರು ಇದ್ದರು. ಪರಿಶೀಲನೆ ಬಳಿಕ ೧,೯೨,೦೭೯ ಮತದಾರರ ಮತದಾರರ ಚೀಟಿಗಳನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಇದು ಒಟ್ಟು ಮತದಾರರ ೮೯.೬೩ರಷ್ಟು ಆಗಿದೆ. ವಿವಿಧ ಕಾರಣಗಳಿಂದ ೨೨,೩೭೫ ಮತದಾರರ ಹೆಸರುಗಳನ್ನು ತಾತ್ಕಾಲಿಕವಾಗಿ ಹೊರಗಿಡಲಾಗಿದೆ ಎಂದರು. ಎಸ್‌ಐಆರ್‌ ಸಂದರ್ಭದಲ್ಲಿ ಪಟ್ಟಿಯಿಂದ ಹೊರಗುಳಿದಿರುವ ೨೨,೩೭೫ ಮತದಾರರಲ್ಲಿ ೮೦೯೧ ಮಂದಿ ಮೃತಪಟ್ಟಿರುವುದು, ೧೨,೦೭೪ ಮಂದಿ ಶಾಶ್ವತವಾಗಿ ವಲಸೆ ಹೋಗಿರುವುದು ಪತ್ತೆಯಾಗಿದೆ. ೩೬೧ ಪುನರಾವರ್ತಿತ ಹೆಸರುಗಳು, ೧,೮೧೩ ಗೈರು ಮತದಾರರು ೩೬೧ ಹಾಗೂ ೩೬ ಮಂದಿ ಇತರೆ ಕಾರಣಗಳಿಂದ ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದರು.ಪ್ರಕಟವಾಗಿರುವ ಕರಡು ಮತದಾರರ ಪಟ್ಟಿಯಲ್ಲಿ ಮ್ಯಾಪಿಂಗ್ ಆಗದಿರುವ ಮತ್ತು ಹೆಸರು ಬದಲಾವಣೆ, ಪೋಷಕರ ಹೆಸರು ಬದಲಾವಣೆ, ವಯಸ್ಸಿನ ಅಂತರ ಸೇರಿದಂತೆ ಕರಡು ಮತದಾರರ ಪಟ್ಟಿಯಲ್ಲಿ ೧೪,೩೫೯ ಮತದಾರರಿಗೆ ಬಿಎಲ್‌ಒಗಳ ಮೂಲಕ ನೋಟೀಸ್‌ ಹಂಚಿಕೆಯಾಗಲಿದೆ. ನೋಟಿಸ್ ಪಡೆದ ಮತದಾರರು ಸೆಪ್ಟೆಂಬರ್‌ ೨೩, ೨೦೨೬ರೊಳಗೆ ತಮ್ಮ ದಾಖಲೆಗಳನ್ನು ಒದಗಿಸಿಬೇಕು. ಆ. ೨೪ರಿಂದ ಆರಂಭಗೊಂಡು ಸೆಪ್ಟೆಂಬರ್‌ ೨೩ರ ಅವಧಿಯಲ್ಲಿ ಕರಡು ಮತದಾರರ ಪಟ್ಟಿಯಲ್ಲಿರುವ ೧೪,೩೫೯ ಮತದಾರರಿಗೆ ನೋಟೀಸು ಹಂಚಿಕೆಯಾಗಿ ಆ ಅವಧಿಯಲ್ಲಿ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.ವಿಚಾರಣೆಯ ದಿನಾಂಕ, ಸಮಯ ಮತ್ತು ಸ್ಥಳದ ವಿವರ ನೋಟೀಸಿನಲ್ಲಿ ಇರಲಿದ್ದು, ಬಿಎಲ್‌ಒಗಳು ನಿಗದಿತ ಅವಧಿಯೊಳಗೆ ನೋಟೀಸು ಮತದಾರರ ಮನೆಗಳಿಗೆ ತಲುಪಿಸಲಿದ್ದಾರೆ. ನೋಟೀಸಿನಲ್ಲಿ ತಿಳಿಸಲಾದ ನಿಗದಿತ ಅವಧಿಯೊಳಗೆ ಮತದಾರರು ಅಗತ್ಯ ದಾಖಲಾತಿಗಳೊಂದಿಗೆ ಮತದಾರರ ನೋಂದಣಾಧಿಕಾರಿ ಅಥವಾ ಸಹಾಯಕ ಮತದಾರರ ನೋಂದಣಾಧಿಕಾರಿಯನ್ನು ಭೇಟಿಯಾಗಿ ದಾಖಲೆಗಳನ್ನು ಹಾಜರುಪಡಿಸಬೇಕು ಎಂದರು.೨೦೨೬ರ ಜೂನ್‌ವರೆಗಿನ ಮತದಾರರ ಪಟ್ಟಿಯಲ್ಲಿ ಹೆಸರಿದ್ದರೂ, ೨೦೦೨ರ ಮತದಾರರ ಪಟ್ಟಿಗೆ ಮ್ಯಾಪಿಂಗ್ ಸಂದರ್ಭ ಹೆಸರು ಬಿಟ್ಟು ಹೋಗಿದ್ದಲ್ಲಿ ಅಥವಾ ಹೆಸರಿನಲ್ಲಿನ ಬದಲಾವಣೆ ಹಾಗೂ ಇತರ ಕಾರಣದಿಂದ ಕರಡು ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿರುವ ಮತದಾರರಿಗೆ ನೋಟೀಸ್ ಬಂದರೆ ಅವರನ್ನು ಮತದಾರರ ಪಟ್ಟಿಯಿಂದ ಕೈಬಿಡುವುದು ಎಂದರ್ಥವಲ್ಲ. ಈ ಬಗ್ಗೆ ಯಾವುದೇ ರೀತಿಯ ಅನಗತ್ಯ ಭಯ ಮತದಾರರಿಗೆ ಬೇಡ. ದಾಖಲೆಗಳನ್ನು ಪಡೆದು ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವ ಮೂಲಕ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗುವಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.ಸಭೆಯಲ್ಲಿ ತಹಸೀಲ್ದಾರ್‌ ಜಿ.ಎಸ್.ಶಂಕರಪ್ಪ ಮಾತನಾಡಿದರು, ಚುನಾವಣಾ ಶಿರಸ್ತೇದಾರ್‌ ಎನ್. ಅನಿಲ್ ಕುಮಾರ್‌, ಪ್ರಥಮ ದರ್ಜೆ ಸಹಾಯಕರಾದ ಜಯಲಕ್ಷ್ಮಿ, ರಮೇಶ್ ವಿವಿಧ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಕಲೇಶಪುರ ವಿಧಾನಸಭಾ ಕ್ಷೇತ್ರದಲ್ಲಿ 18 ಸಾವಿರ ಮತದಾರರು ಹೊರಕ್ಕೆ
ಪಡಿತರ ಕಾರ್ಡ್ ಹೊಂದಿರುವ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿ: ಮೂಡ್ಲೀಗೌಡ