ಕುಕನೂರು: ರೈತ ವರ್ಗಕ್ಕೆ ಕೋಲ್ಡ್ ಸ್ಟೋರೇಜಿನಿಂದ ಅನುಕೂಲ ಆಗುತ್ತದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ಮೌಖಿಲವಾಗಿ ಕೋರ್ಟ್ ಗ್ರೀನ್ ಸಿಗ್ನಲ್: ಪಟ್ಟಣದ ಗುದ್ನೇಪ್ಪನ ಮಠದಲ್ಲಿ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ತಾಲೂಕಾಡಳಿತ ಕಟ್ಟಡ, ಆಸ್ಪತ್ರೆ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣ, ಕೋರ್ಟ್ ನಿರ್ಮಾಣಕ್ಕೆ, ತಾಲೂಕು ಕ್ರೀಡಾಂಗಣ ನಿರ್ಮಾಣಕ್ಕೆ ನ್ಯಾಯಾಲಯ ಮೌಖಿಕವಾಗಿ ಆದೇಶ ನೀಡಿದೆ. ಲಿಖಿತ ರೂಪದ ಆದೇಶಕ್ಕೆ ಮಾತ್ರ ಕಾಯುತ್ತಿದ್ದೇವೆ. ಗುದ್ನೇಪ್ಪನಮಠದ ಸ್ಥಳೀಯರು ಕೋರ್ಟ್ ಮೊರೆ ಹೋದ ಕಾರಣ ಕೆಲಸಗಳು ವಿಳಂಬವಾಗಿವೆ ಎಂದರು.
ಪ್ರಮುಖರಾದ ಖಾಸಿಂಸಾಬ್ ತಳಕಲ್ಲ, ಯಂಕಣ್ಣ ಯರಾಶಿ, ಹನುಮಂತಗೌಡ ಚಂಡೂರು, ಅಶೋಕ ತೋಟದ, ಪಪಂ ಅಧ್ಯಕ್ಷೆ ಲೀಲಾವತಿ ಮೂಧೋಳ, ಉಪಾಧ್ಯಕ್ಷೆ ಮಂಜುಳಾ ಕಲ್ಮನಿ, ಕೆರಿಬಸಪ್ಪ ನಿಡಗುಂದಿ, ಮುತ್ತು ಮ್ಲ್ಮೀಕಿ, ರೆಹೆಮಾನಸಾಬ್ ಮಕ್ಕಪರ್ನವರ್, ಪಪಂ ಸದಸ್ಯ ರಾಮಣ್ಣ ಬಂಕದಮನಿ, ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸಿರಾಜ್ ಕರಮುಡಿ, ಸಂಗಮೇಶ ಗುತ್ತಿ, ಸಿದ್ದಯ್ಯ ಕಳ್ಳಿಮಠ, ವಿಠಲ ದೇಸಾಯಿ, ವೀರಯ್ಯ ತೋಂಟದಾರ್ಯಮಠ, ರಾಘವೇಂದ್ರ ಕಾತರಕಿ, ಶ್ರೀಧರ ಭಂಡಾರಿ, ಮಂಜುನಾಥ ಯಡಿಯಾಪೂರ ಇತರರಿದ್ದರು.