ಪತ್ರಿಕಾಧರ್ಮ, ಸ್ವಯಂಶಿಸ್ತು ಅಳವಡಿಸಿಕೊಂಡ ಪತ್ರಕರ್ತರು ಸದಾ ಗೌರವಕ್ಕೆ ಭಾಜನರಾಗುತ್ತಾರೆ. ಅಂಥವರಿಂದ ಸಮಾಜಕ್ಕೆ ಒಳಿತಾಗುತ್ತದೆ.
ಪತ್ರಿಕಾ ದಿನಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಕನ್ನಡಪ್ರಭ ವಾರ್ತೆ ಕುಮಟಾ
ಪತ್ರಿಕಾಧರ್ಮ, ಸ್ವಯಂಶಿಸ್ತು ಅಳವಡಿಸಿಕೊಂಡ ಪತ್ರಕರ್ತರು ಸದಾ ಗೌರವಕ್ಕೆ ಭಾಜನರಾಗುತ್ತಾರೆ. ಅಂಥವರಿಂದ ಸಮಾಜಕ್ಕೆ ಒಳಿತಾಗುತ್ತದೆ. ಪೊಲೀಸ್ ಇಲಾಖೆಗೂ ಸಮಾಜದಲ್ಲಿ ನೀತಿನಿಯಮ ಪಾಲನೆಗೆ, ಜಾಗೃತಿಗೆ ಪತ್ರಕರ್ತರ ಸಹಯೋಗ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಘಟಕದಿಂದ ಪಟ್ಟಣದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಕುಮಟಾ ಸಂಘವು ಇದೇ ರೀತಿ ಸಮಾಜಮುಖಿ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುವಂತೆ ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪತ್ರಕರ್ತರು ಸಮಾಜದ ಬೇಕುಬೇಡಗಳು, ಜನಪ್ರತಿನಿಧಿಗಳ ಲೋಪದೋಷಗಳನ್ನು ಬರೆದಂತೆಯೇ ಮಾಡಿದ ಒಳ್ಳೆಯ ಕೆಲಸಗಳನ್ನೂ ಸಮಾಜಕ್ಕೆ ವಸ್ತುನಿಷ್ಠವಾಗಿ ತಿಳಿಸಬೇಕು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಷ್ಮಾ ರಾಜಗೋಪಾಲ ರೆಡ್ಡಿ ಮಾತನಾಡಿ, ಪತ್ರಕರ್ತರು ಮತ್ತು ಜನಪ್ರತಿನಿಧಿಗಳು ಒಗ್ಗೂಡಿ ಕೆಲಸ ಮಾಡಬೇಕು. ಪತ್ರಕರ್ತರ ಕಾರ್ಯಗಳಿಗೆ ನಾನು ಬೆಂಬಲವಾಗಿರುತ್ತೇನೆ ಎಂದರು.
ಗೋಕರ್ಣ ಪಿಎಸ್‌ಐ ಶ್ರೀಧರ ಎಸ್.ಆರ್., ಸಮಾಜದಲ್ಲಿ ಪತ್ರಕರ್ತರಿಗೆ ಗುರುತರ ಜವಾಬ್ದಾರಿ ಇದೆ. ಈಗಿನ ತರಾತುರಿಯ ಸುದ್ದಿಸಂಚಾರದಲ್ಲಿ ಬಹಳ ಏಚ್ಚರಿಕೆ ಅಗತ್ಯ ಎಂದರು.
ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ್ ಮಾತನಾಡಿ, ಪತ್ರಿಕಾ ದಿನಾಚರಣೆ ನಮ್ಮ ಕಾಲೇಜಿನಲ್ಲಿ ನಡೆಸಿರುವುದು ಖುಷಿಯ ಸಂಗತಿ. ಪತ್ರಕರ್ತರ ಮೇಲೆ ಗುರುತರ ಹೊಣೆಗಾರಿಕೆ ಇದೆ ಎಂದರು.
ಜಿಲ್ಲಾ ಕಾನಿಪ ಸಂಘದ ಅಧ್ಯಕ್ಷ ನರಸಿಂಹ ಅಡಿ, ಪ್ರಸ್ತುತ ಮಾಧ್ಯಮಗಳು ಮತ್ತು ಪತ್ರಕರ್ತರು ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕಾಧ್ಯಕ್ಷ ಅನ್ಸಾರ್ ಶೇಖ್, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಪತ್ರಕರ್ತರು ಸಮಾಜದ ಕೊಂಡಿಯಂತೆ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಹಿರಿಯ ಉಪನ್ಯಾಸಕ ಉಮೇಶ ನಾಯ್ಕ ವೇದಿಕೆಯಲ್ಲಿದ್ದರು. ಶಿರಸಿ ಸಿಪಿಐ ಇ.ಸಿ. ಸಂಪತ್ ಮತ್ತು ಗೋಕರ್ಣ ಪಿಎಸ್‌ಐ ಶ್ರೀಧರ ಎಸ್.ಆರ್. ಅವರನ್ನು ಸನ್ಮಾನಿಸಲಾಯಿತು.
ಶಿಕ್ಷಕ ವಿದ್ಯಾರ್ಥಿನಿಯರಾದ ಮಹಿಮಾ ಸಂಗಡಿಗರು ಪ್ರಾರ್ಥಿಸಿದರು. ಕಾರ್ಯದರ್ಶಿ ಚರಣರಾಜ ನಾಯ್ಕ ಸ್ವಾಗತಿಸಿದರು. ಪತ್ರಕರ್ತ ಎಂ.ಜಿ. ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿದ್ಯಾರ್ಥಿ ಗಣೇಶ ನಾಯ್ಕ ನಿರೂಪಿಸಿದರು. ಖಜಾಂಚಿ ಗಣೇಶ ಜೋಶಿ ಮತ್ತು ಸದಸ್ಯ ಜೀವನ ನಾಯ್ಕ ಸನ್ಮಾನ ಪತ್ರ ವಾಚಿಸಿದರು. ಜಿಲ್ಲಾ ಸಮಿತಿ ಸದಸ್ಯ ಸುಧೀರ ಕಡ್ನೀರ್ ವಂದಿಸಿದರು. ಉಪಾಧ್ಯಕ್ಷ ರಾಘವೇಂದ್ರ ದಿವಾಕರ, ಹೊನ್ನಾವರ ಕಾನಿಪ ಸಂಘದ ಅಧ್ಯಕ್ಷ ವಿ.ಪಿ.ಮೇಸ್ತಾ, ಜಿಲ್ಲಾ ಉಪಾಧ್ಯಕ್ಷ ಮಾರುತಿ ನಾಯ್ಕ, ಸಂಘದ ಸದಸ್ಯರು ಇದ್ದರು.
ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ:
ಪತ್ರಿಕಾ ದಿನಾಚರಣೆ ಅಂಗವಾಗಿ ಪ್ರಸಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಶಿಕ್ಷಕ ವಿದ್ಯಾರ್ಥಿಗಳಾದ ಕುಮಾರ ವಿ. ಶಾನಭಾಗ, ಚೇತನಾ ವಿ. ನಾಯ್ಕ ಪ್ರಥಮ, ಹನೀಯಾ ಶೇಖ್, ಅಶ್ವಿನಿ ಬಿ. ದ್ವಿತೀಯ, ನಾಗಶ್ರೀ ರೋಹಿದಾಸ ನಾಯ್ಕ, ರಕ್ಷಿತಾ ಎಂ. ಬೆಂಡಿಗೇರಿ ತೃತೀಯ ಬಹುಮಾನ ಪಡೆದರು. ಸಮಾಧಾನಕರ ಬಹುಮಾನವನ್ನು ಗಣೇಶ ಗಣಪತಿ ನಾಯ್ಕ, ಸುಮಾ ಎಚ್. ನಾಯ್ಕ ಮತ್ತು ಪವಿತ್ರಾ ಶಿವಾ ಗೊಂಡ ಪಡೆದರು. ಕಾನಿಪ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಶರ್ಮಾ ಬಹುಮಾನ ವಿತರಣೆ ನಡೆಸಿಕೊಟ್ಟರು. ನಿರ್ಣಾಯಕರಾಗಿ ನಿವೃತ್ತ ಡಿಡಿಪಿಐ ಸಿ.ಎಸ್. ನಾಯ್ಕ, ಪ್ರಾಚಾರ್ಯೆ ಡಾ. ಪ್ರೀತಿ ಭಂಡಾರಕರ, ಹಿರಿಯ ಉಪನ್ಯಾಸಕ ಉಮೇಶ ನಾಯ್ಕ ಕಾರ್ಯನಿರ್ವಹಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.