ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘ ಏರ್ಪಡಿಸಿದ್ದ ಹಿರಿಯ ಸಂಶೋಧಕದ ಡಾ. ಬಿ.ವಿ. ಶಿರೂರ ದತ್ತಿಯಲ್ಲಿ ಮಾತನಾಡಿ, ಸಾಹಿತ್ಯ-ಇತಿಹಾಸದ ಸಂಬಂಧ ಅನೋನ್ಯ. ಇವೆರಡಕ್ಕೂ ಶಿಸ್ತು ಹಾಗೂ ಸಂಯಮ ಪರಿಶ್ರಮ ಮುಖ್ಯ. ಸಾಹಿತ್ಯ ಹಾಗೂ ಚರಿತ್ರೆ ಎರಡೂ ಸಾಂಸ್ಕೃತಿಕ ಅಧ್ಯಯನದ ಕೊಂಡಿಗಳಿದ್ದಂತೆ. ಡಾ. ಬಿ.ವಿ. ಶಿರೂರ ಅವರೊಬ್ಬ ಸಮರ್ಥ ಸಂಶೋಧಕರು ಮಾತ್ರವಲ್ಲದೆ ವಿದ್ವತ್‌ಪೂರ್ಣ ವ್ಯಕ್ತಿತ್ವದ ಪ್ರಾಮಾಣಿಕ ಗುಣ ಉಳ್ಳವರು ಎಂದರು.ಕವಿವಿ ಕನ್ನಡ ಅಧ್ಯಯನ ಪೀಠದಲ್ಲಿ ವಿದ್ವತ್‌ಪೂರ್ಣ ಪರಂಪರೆಯ ಒಂದು ಇತಿಹಾಸವೇ ಇದೆ. ಈ ಪರಂಪರೆಯಲ್ಲಿ ಬಿ.ವಿ. ಶಿರೂರ ಇದ್ದಾರೆ. ಅವರ ಮಹಾಪ್ರಬಂಧ ಶ್ರವಣ ಬೆಳಗೊಳದ ರಾಜಕೀಯ, ಸಾಹಿತ್ಯಿಕ, ಸಾಂಸ್ಕೃತಿಕ ಮಹತ್ವ ಸಂಶೋಧನಾ ಕ್ಷೇತ್ರಕ್ಕೊಂದು ಮೌಲಿಕ ಕೊಡುಗೆ ಆಗಿದೆ. ಶಿರೂರ ಸಂಶೋಧನಾ ಪ್ರಶಸ್ತಿಗೆ ಭಾಜನರಾದ ಡಾ. ಚನ್ನಬಸವಯ್ಯ ಹಿರೇಮಠ ಶಾಸನ ಕ್ಷೇತ್ರದಲ್ಲಿ ಮಾಡಿದ ಸಾಧನೆ ಅಪಾರ ಎಂದು ಹೇಳಿದರು.
ಇದೇ ವೇಳೆ ‘ಡಾ. ಬಿ.ವಿ. ಶಿರೂರ ಸಂಶೋಧನ ಪ್ರಶಸ್ತಿ’ಯನ್ನು ಡಾ. ಚನ್ನಬಸವಯ್ಯ ಹಿರೇಮಠ ಅವರಿಗೆ ಪ್ರದಾನ ಮಾಡಲಾಯಿತು. ಜತೆಗೆ ಪ್ರೊ. ಧನವಂತ ಹಾಜವಗೋಳ ಅವರ ‘ಶ್ರೇಷ್ಠ ಸಂಶೋಧಕ ಪ್ರೊ. ಬಿ.ವಿ. ಶಿರೂರ ‘ಗ್ರಂಥ ಬಿಡುಗಡೆ’ಯೂ ನಡೆಯಿತು.ಡಾ. ಬಿ.ಎಂ. ಶರಭೇಂಧ್ರಸ್ವಾಮಿ ಮಾತನಾಡಿ, ರಾಯಚೂರು ಕಥೆಗಾರರನ್ನು ಸೃಷ್ಟಿಸಿದ ಜಿಲ್ಲೆ. ಧಾರವಾಡವು ರಾಯಚೂರಿನವರ ಅಧ್ಯಯನಕ್ಕೆ ಆಕರ್ಷಣೀಯ ಕೇಂದ್ರವಾಗಿತ್ತು. ಸಾಮಾನ್ಯ ಕುಟುಂಬದಿಂದ ಬಂದ ಡಾ. ಚನ್ನಬಸವಯ್ಯ ಹಿರೇಮಠ ಅಸಾಮಾನ್ಯವಾಗಿ ಬೆಳೆದು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದರು. ಮಸ್ಕಿಯಲ್ಲಿ ಸಿಕ್ಕ ಅಶೋಕನ ಶಿಲಾಶಾಸನ ಹಿರೇಮಠರ ಸಂಶೋಧನೆಗೆ ಪ್ರೇರಣೆ ನೀಡಿತು ಎಂದು ಹೇಳಿದರು.