ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ, ಎಸ್ಪಿ ಚಾಲನೆ

KannadaprabhaNewsNetwork | Published : Jun 17, 2024 1:43 AM

ಸಾರಾಂಶ

ಯಾವುದೇ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ.

ಹೊಸಪೇಟೆ: ಪತ್ರಿಕಾ ದಿನಾಚರಣೆ ನಿಮಿತ್ತವಾಗಿ ವಿಜಯನಗರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಭಟ್ರಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಪತ್ರರ್ತರ ಕ್ರಿಕೆಟ್ ಪಂದ್ಯಾವಳಿಗೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಬೌಲಿಂಗ್ ಮಾಡುವ ಹಾಗೂ ಎಸ್ಪಿ ಬಿ.ಎಲ್.ಶ್ರೀಹರಿಬಾಬು ಬ್ಯಾಟ್ ಬೀಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ, ಯಾವುದೇ ಸಂಘಟನೆಗಳು ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಒತ್ತಡದ ಕೆಲಸ ನಡುವೆ ಬಿಡುವು ಮಾಡಿಕೊಂಡು ಸಂಭ್ರಮಿಸಲು ಕ್ರೀಡೆಗಳು ಸಹಕಾರಿ. ಕ್ರೀಡಾಕೂಟ ಎಲ್ಲರಲ್ಲಿ ಸಾಮರಸ್ಯ ಬೆಳೆಸುವಲ್ಲಿ ಸಹಕಾರಿಯಾಗಲಿದೆ. ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸುವ ಮಾಧ್ಯಮಗಳು ಇನ್ನಷ್ಟು ಪರಿಣಾಮಕಾರಿಯಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಾಗಲಿ ಎಂದರು.

ಎಸ್ಪಿ ಬಿ.ಎಲ್.ಶ್ರೀಹರಿಬಾಬು ಮಾತನಾಡಿ, ಕ್ರೀಡೆಗಳು ಮನುಷ್ಯನ ಮನಸ್ಸನ್ನು ಅರಳಿಸುತ್ತವೆ. ಅದರಲ್ಲೂ ಸೌಹಾರ್ದ ಪಂದ್ಯಾವಳಿಗಳು ತುಂಬ ಆನಂದ ನೀಡುತ್ತವೆ. ಪ್ರೀತಿ ವಿಶ್ವಾಸವನ್ನು ಮೂಡಿಸುತ್ತವೆ. ಕಷ್ಟಗಳನ್ನು ಮರೆಸುತ್ತವೆ. ಜತೆಗೆ ಕ್ರಿಯಾಶೀಲತೆ ಹೆಚ್ಚಿಸಲು ಕಾರಣವಾಗುತ್ತವೆ. ಪತ್ರಕರ್ತರ ಒತ್ತಡ ನಿವಾರಣೆಗೆ ಇಂತಹ ಕ್ರೀಡೆಗಳು ಅಗತ್ಯ ಎಂದರು.

ವಿಜಯನಗರ ಲವೆನ್ ಹಾಗೂ ಹಂಪಿ ಲವೆನ್ ಎಂದು ೧೧ ಜನರ ಎರಡು ತಂಡಗಳು ರಚನೆ ಮಾಡಲಾಯಿತು. ಇದರಲ್ಲಿ ಟಾಸ್ ಗೆದ್ದ ಹಂಪಿ ಲವೆನ್ ಫಿಲಿಂಡಿಂಗ್ ಆಯ್ಕೆ ಮಾಡಿಕೊಂಡರು. ಬ್ಯಾಟಿಂಗ್ ಮಾಡಿದ ವಿಜಯನಗರ ೧೫ ಒವರ್‌ನಲ್ಲಿ ೬ ವಿಕೆಟ್ ನಷ್ಟಕ್ಕೆ ೧೦೩ ರನ್ ಗಳಿಸಿದರು. ನಂತರ ಬ್ಯಾಟಿಂಗ್ ಮಾಡಿದ ಹಂಪಿ ಲವೆನ್ ೧೪ ಒವರ್‌ಗೆ ಒಂದು ವಿಕೆಟ್ ನಷ್ಟಕ್ಕೆ ೧೦೪ ರನ್ ಪಡೆದು ಜಯ ಗಳಿಸಿದರು. ವಿಜಯನಗರ ಲವೆನ್ ತಂಡದ ನಾಯಕ ಜಯಪ್ಪ ರಾಥೋಡ್ ೫೯ ರನ್ ಗಳಿಸಿದರು. ಅನೂಪ್ ಕುಮಾರ್ ೫೧ ರನ್ ಗಳಿಸಿದರು. ಎ.ಪಿ.ರಾವ್ ಹಾಗೂ ಆನಂದ್ ಉತ್ತಮ ನಿರ್ಣಾಯಕರಾಗಿ ಕೆಲಸ ಮಾಡಿದರು. ಗೆದ್ದ ವಿಜಯ್ ಕುಮಾರ್ ನೇತೃತ್ವದ ತಂಡ ಮತ್ತು ರನ್ನರ್ ಅಪ್ ಆದ ಜಯಪ್ಪ ರಾಥೋಡ್ ತಂಡಕ್ಕೆ ಟ್ರೋಫಿ ವಿತರಣೆ ಮಾಡಲಾಯಿತು.

ಡಿವೈಎಸ್ಪಿ ಮಂಜುನಾಥ ತಳವಾರ, ಕಾನಿಪ ಸಂಘದ ಜಿಲ್ಲಾಧ್ಯಕ್ಷ ಪಿ.ಸತ್ಯ ನಾರಾಯಣ, ಪ್ರಧಾನ ಕಾರ್ಯದರ್ಶಿ ಕೆ. ಲಕ್ಷ್ಮಣ, ರಾಜ್ಯ ಸಮಿತಿ ಸದಸ್ಯ ವೆಂಕೊಬ ನಾಯಕ್ ಪೂಜಾರ್, ಖಜಾಂಚಿ ಎಚ್.ವೆಂಕಟೇಶ್, ಪತ್ರಕರ್ತರಾದ ಬಿ.ಕುಮಾರಸ್ವಾಮಿ, ಎಸ್.ಎಂ ಮನೋಹರ್, ವಿರೇಂದ್ರ ನಾಗಲದಿನ್ನಿ, ಪ್ರಕಾಶ್, ರೇಖಾ ಪ್ರಕಾಶ್, ಕೆ. ಸುರೇಶ್ ಚೌವ್ಹಾಣ್, ಮಂಜುನಾಥ್ ಅಯ್ಯಸ್ವಾಮಿ, ಬಾಬುಕುಮಾರ್, ವಿರೇಶ್, ಅಂಬರೀಶ್ ವಾಲ್ಮೀಕಿ, ರಾಮಚಂದ್ರ, ಸಂಜಯ್ ಕುಮಾರ್ ಮರೋಳ್, ಬಸವರಾಜ ಹಡಗಲಿ, ಪೂರ್ಣಿಮಾ, ಇಂದಿರಾ ಕಲಾಲ್, ಭೀಮಾನಾಯ್ಕ, ಶ್ರೀನಿವಾಸ್, ಕೆ.ಬಿ.ಖಾವಾಸ್, ಪಾಂಡುರಂಗ ಜಂತ್ಲಿ, ಮೃತ್ಯುಂಜಯ ಹಿರೇಮಠ್, ಕೊಟ್ರೇಶ್, ಮೈನು, ಲವ, ದಯಾನಂದ ಸಜ್ಜನ್, ಅಜಯ್ ಕುಮಾರ್, ಶೆಕ್ಷಾವಲಿ ಹಾಗೂ ಶಂಕರ್ ಇತರರಿದ್ದರು.

Share this article