ಕನ್ನಡಪ್ರಭ ವಾರ್ತೆ ಹಾಸನ
ಈಗಾಗಲೇ ಕಾಲೇಜುಗಳ ಪರೀಕ್ಷೆ ಮುಗಿದು ಪ್ರವೇಶಾತಿ ಆರಂಭವಾದರೂ ಇನ್ನೂ ಕಾಲೇಜಿಗೆ ಮೂಲಭೂತ ಸೌಕರ್ಯವೇ ಇಲ್ಲ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಆರೋಪಿಸಿದರು.ನಗರದಲ್ಲಿ ಮಾಧ್ಯಮದೊಂದಿಗೆ ಮಂಗಳವಾರ ಮಾತನಾಡುತ್ತಾ, ಡೆಸ್ಕ್ ಇಲ್ಲ, ಕಂಪ್ಯೂಟರ್ ಇಲ್ಲ. ಹೀಗಾದರೇ ವಿದ್ಯಾರ್ಥಿಗಳ ಪಾಡೇನು? ಹಿಂದೆ ಕುಮಾರಣ್ಣ ಇದ್ದಾಗ ಫೀಸ್ ಹೆಣ್ಣು ಮಕ್ಕಳಿಗೆ ಇರಲಿಲ್ಲ, ಈಗ ಇದೆ. ಕೆಲ ಕಾಲೇಜಿನಲ್ಲಿ ಕಸವನ್ನು ಪ್ರಿನ್ಸಿಪಾಲರೇ ಗುಡಿಸುತ್ತಿದ್ದಾರೆ. ಅದಕ್ಕೂ ಜನರು ಇಲ್ಲ. ಪಾರ್ಟ್ ಟೈಂ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಬಹುದಿತ್ತು. ಯಾವುದೂ ಇಲ್ಲ. ಹಾಗಾದರೇ ಇವರು ಖಾಸಗಿ ಕಾಲೇಜು ಜೊತೆ ಶಾಮೀಲಾಗಿದ್ದಾರಾ ಎನುವ ಅನುಮಾನ ನನಗಿದೆ ಎಂದು ಮಾರ್ಮಿಕವಾಗಿ ಹೇಳಿದರು. ಯಾವ ಹೊಸ ಕೋರ್ಸ್ ಬೇಕು ಕೊಡಬೇಕು. ಅಧಿಕಾರಿಗಳು, ಮಂತ್ರಿಗಳು ಈ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಮೂಲಭೂತ ಸೌಕರ್ಯ ಕೂಡ ಇಲ್ಲ ಇಂತಹ ಪರಿಸ್ಥಿತಿ ಬಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಸರ್ಕಾರಿ ಕಾಲೇಜುನಲ್ಲಿರುವ ಕೋರ್ಸ್‌ಗಳ ಬಗ್ಗೆ ಮೈಕ್ ಮೂಲಕ ಜಾಹಿರಾತು ಕೊಡಬೇಕು ಎಂದು ಮನವಿ ಮಾಡಿದರು. ಸರ್ಕಾರ ಒಟ್ಟುಗೂಡಿ ಕೆಲಸ ಮಾಡಿದರೇ ಮಾತ್ರ ಸರ್ಕಾರಿ ಕಾಲೇಜು ಉಳಿಸಬಹುದು ಎಂದು ಸಲಹೆ ನೀಡಿದರು. ಇದೆ ರೀತಿ ಹೋದರೇ ಕಾಲೇಜು ಮುಚ್ಚುವ ಗತಿ ಒದಗುತ್ತದೆ ಎಂದು ಎಚ್ಚರಿಸಿದರು. ಓಂ ಸೈನ್ಸ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ಇತರೆ ಕಾಲೇಜು ಬಗ್ಗೆ ಸಚಿವರಿಗೆ ಪತ್ರ ಬರೆಯಲಾಗುವುದು ಎಂದು ಹೇಳಿದರು.ಇದೇ ವೇಳೆ ನಮ್ಮ ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಿಂದ ರಾಜಕಾರಣ ನೋಡುತ್ತಿದ್ದೇವೆ. ಜಿಲ್ಲಾ ಪಂಚಾಯತ್ ಇರಬಹುದು, ಯಾವ ಯಾವ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಈ ಬಗ್ಗೆ ತಿಳಿದಿದೆ. ಜಿಲ್ಲಾ ಪಂಚಾಯತ್‌ಗೆ ಅನುದಾನ ಬಂದು ಆರು ತಿಂಗಳಾದರೂ ತಿಳಿಯುತ್ತಿಲ್ಲ. ಏನು ಕಲ್ಲು ಗಣಿಗಾರಿಕೆ ಗುತ್ತಿಗೆದಾರರು ಇದ್ದಾರೆ ಅದರ ಹಣ ಕೂಡ ಕೊಡುತ್ತಿಲ್ಲ. ಸರಿಯಾಗಿ ಹಣ ಕೊಡುವುದಾದರೇ ಕೊಡಿ ಕೊಡದಿದ್ದರೇ ಮುಂದೆ ಕಾನೂನು ರೀತಿ ಏನು ಮಾಡಬೇಕು ಮಾಡಲಾಗುವುದು.