ಕನ್ನಡಪ್ರಭ ವಾರ್ತೆ ಮಂಡ್ಯ
ನಗರದ ಸ್ವರ್ಣಸಂದ್ರದ ಎಇಟಿ ಶಿಕ್ಷಣ ಮಹಾವಿದ್ಯಾಲಯ ಆಯೋಜಿಸಿದ್ದ ಪ್ರಶಿಕ್ಷಣೋತ್ಸವ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿ ತಮ್ಮ ಶೈಕ್ಷಣಿಕ ಸಾಧನೆಯ ಜೊತೆಗೆ ಕ್ರೀಡೆ, ಕಲೆ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅದಕ್ಕೆ ಪೂರಕವಾದ ತರಬೇತಿ ಮಾರ್ಗದರ್ಶನ ಪಡೆಯಲು ಉತ್ತಮ ಅವಕಾಶವಿದ್ದು ಅದನ್ನು ಸೂಕ್ತ ರೀತಿಯಲ್ಲಿ ಪಡೆದು ಸಮಾಜದ ಮುಂಚೂಣಿಗೆ ಬರಬೇಕೆಂದು ಕಿವಿಮಾತು ಹೇಳಿದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಬೆಲೆ ಮತ್ತು ನೆಲೆ ಸಿಗುವುದು ನಮ್ಮ ಕೌಶಲ್ಯದಿಂದಲೇ ಹೊರತು ಅಡ್ಡದಾರಿಯಿಂದ ಪಡೆದ ಅಡ್ಡ ದಾರಿಯಿಂದ ಪಡೆದ ಯಶಸ್ಸು ಶಾಶ್ವತವಲ್ಲ ಎಂದರು.
ಎಇಟಿ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷೆ ಶಾರದಾ ರಮೇಶ ರಾಜು ಮಾತನಾಡಿ. ಗ್ರಾಮೀಣ ಪ್ರದೇಶದಲ್ಲಿ ಹಲವಾರು ಪ್ರತಿಭೆಗಳು ಅವಕಾಶ ವಂಚಿತರಾಗಿದ್ದು ಅಂತ ಪ್ರತಿಭಾನ್ವಿತರನ್ನ ಉಪನ್ಯಾಸಕರು ಗುರುತಿಸಿ ಸೂಕ್ತ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಮೂಲಕ ಅವರ ಭವಿಷ್ಯವನ್ನು ಪ್ರಜ್ವಲ ಗೊಳಿಸ ಬೇಕು ಎಂದರು.
ಈ ವೇಳೆ ಕಾಲೇಜು ಪ್ರಾಂಶುಪಾಲ ಡಾ.ಎಸ್.ಶಿವಕುಮಾರ್, ಗ್ಲೋಬಲ್ ಕಾಂಪಿಟೇಟಿವ್ ಅಕಾಡೆಮಿಯ ಶೈಕ್ಷಣಿಕ ತರಬೇತುದಾರ ಪೃಥ್ವಿರಾಜ್ , ಪ್ರಾಧ್ಯಾಪಕರಾದ ಎಚ್.ಪಿ.ಧರ್ಮೇಶ್, ಮೋಹನ್ ದಾಸ್ ,ಸುಕೇಶ್, ಶಿವ ನಾಗೇಂದ್ರ ಪ್ರಸಾದ್, ರಕ್ಷಿತಾ, ಸಿಬ್ಬಂದಿ ಉಷಾ, ಸೌಮ್ಯ, ಶಿವಮೂರ್ತಿ ಇತರರಿದ್ದರು.