ತರೀಕೆರೆ: ರಾಜ್ಯ ಮಟ್ಟದ ದಸರಾ ಬಯಲು ಜಂಗೀ ಕುಸ್ತಿ ಸ್ಪರ್ಧೆ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆಯಿತು. ತರೀಕೆರೆಯಲ್ಲಿ ಶ್ರೀ ಗುರು ರೇವಣಸಿದ್ದೇಶ್ವರ ಕುರುಬ ಸಮಾಜ ತರೀಕೆರೆ, ಶ್ರೀ ಗುರು ರೇವಣಸಿದ್ದೇಶ್ವರ ಗರಡಿ ಕುಸ್ತಿ ಸಂಘ ತರೀಕೆರೆ, ಪುರಸಭೆ ತರೀಕೆರ, ಚಿಕ್ಕಮಗಳೂರು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಲ್ಲಾ ಸಮುದಾಯಗಳ ಆಶ್ರಯದಲ್ಲಿ ನಡೆದ ಬೆಳ್ಳಿ ಗದೆ ಕುಸ್ತಿ ಸ್ಪರ್ಧೆಯಲ್ಲಿ ಮಹೇಶ್ ಬೆಳಗಾವಿ ಅವರು ಭಾಗವಹಿಸಿ ಬೆಳ್ಳಿ ಗದೆ ವಿಜೇತರಾದರು.