ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಈ ಮುಖಾಮುಖಿ ಚರ್ಚೆ ನಡೆಯಲಿದೆ. ಪಕ್ಷಪಾತವಿಲ್ಲದೆ ನಡೆಸುವ ಚರ್ಚೆಯನ್ನು ಆನ್‌ಲೈನ್ ಮುಖಾಂತರ ಲೈವ್ ಮಾಡಲೂ ಉದ್ದೇಶಿಸಲಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿಯ ರಾಜ್ಯಾಧ್ಯಕ್ಷರು ಅಥವಾ ವಿರೋಧ ಪಕ್ಷದ ನಾಯಕರು ಈ ಬಹಿರಂಗ ಚರ್ಚೆಗೆ ಮುಕ್ತವಾಗಿ ಬಂದು ಭಾಗವಹಿಸಬೇಕು. ಕರ್ನಾಟಕದ ಜನತೆಗೆ ಮತದಾನದ ಹಕ್ಕಿನ ರಕ್ಷಣೆಯ ಅಭಯ ನೀಡುವಂತೆ ಆಗ್ರಹಪಡಿಸಿದರು.ಮತದಾರರ ಪಟ್ಟಿ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಪಟ್ಟಿ ಪರಿಷ್ಕರಣೆಯ ಸ್ವರೂಪ ಅವೈಜ್ಞಾನಿಕವಾಗಿರುವುದಕ್ಕಷ್ಟೇ ನಮ್ಮ ವಿರೋಧವಿದೆ. ಒಂದೊಂದು ರಾಜ್ಯಗಳಲ್ಲಿ ಒಂದೊಂದು ದಾಖಲೆಗಳನ್ನು ಕೇಳಲಾಗುತ್ತಿದೆ. ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್‌ಕಾರ್ಡ್, ಪಾಸ್‌ಪೋರ್ಟ್ ಇವುಗಳನ್ನು ದಾಖಲೆಯಾಗಿ ಪರಿಗಣಿಸುತ್ತಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಎಲ್ಲರೂ ಇಟ್ಟುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಒಮ್ಮೆ ದಾಖಲೆಗಳು ಬೇಕೆಂದರೆ ಸಮಯಾವಕಾಶ ಕೊಡಿ ಎಂದು ಒತ್ತಾಯಿಸಿದರು.
ಮತದಾರರ ಪಟ್ಟಿಯಿಂದ ಕೈಬಿಡುವುದಕ್ಕೆ ದಾಖಲೆಗಳನ್ನು ಕೇಳುತ್ತಿರುವರೇ ವಿನಃ ನೋಟೀಸ್ ನೀಡುತ್ತಿಲ್ಲ. ಇದರಿಂದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದಕ್ಕೂ ಸಾಧ್ಯವಿಲ್ಲದಂತಾಗಿದೆ. ಈಗಾಗಲೇ ಬಿಹಾರ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಕೋಟ್ಯಂತರ ಜನರನ್ನು ಮತಪಟ್ಟಿಯಿಂದ ಕೈಬಿಟ್ಟು ಮತಹಕ್ಕಿನಿಂದ ವಂಚಿಸಲಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ಎನ್.ನಾಗೇಶ್, ಬಿ.ಕೃಷ್ಣಪ್ರಕಾಶ್, ಎನ್.ಸುಬ್ರಹ್ಮಣ್ಯ, ಜಿ.ಸಂತೋಷ್, ಬಿ.ಎಲ್.ಪೃಥ್ವಿರಾಜ್ ಇದ್ದರು.