ಯೋಗೇಶ್ವರ್ ಫೀಲ್ಡ್ ಗೆ ಬರಲಿ ರಾಜಕೀಯ ತೋರಿಸ್ತೇನೆ

KannadaprabhaNewsNetwork |  
Published : Oct 10, 2023, 01:01 AM IST
9ಕೆಆರ್ ಎಂಎನ್ 7.ಜೆಪಿಜಿಶಾಸಕ ಬಾಲಕೃಷ್ಣ | Kannada Prabha

ಸಾರಾಂಶ

ಮಾಗಡಿ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ. ಅವರ ರಾಜಕೀಯ ಜೀವನವೇ ಬುರುಡೆ ಬಿಟ್ಕೊಂಡು ತಿರುಗಾಡಿದವರು. ಅವರು ಎಲ್ಲಿ ಸಕ್ಸ್‌ಸ್ ಆಗಿದ್ದಾರೆ. ಕ್ಯಾಸೆಟ್ ಇಟ್ಟುಕೊಂಡು ಹೈಕಮಾಂಡ್ ಬಳಿ ಸುಳಿದಾಡಿದಂತೆ ಅಲ್ಲ ರಾಜಕೀಯ ಮಾಡುವುದು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಫೀಲ್ಡ್‌ಗೆ ಬರಲಿ. ರಾಜಕೀಯ ಏನೆಂಬುದನ್ನು ತೋರಿಸುತ್ತೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಯೋಗೇಶ್ವರ್ ಗೆ ಸವಾಲು ಹಾಕಿದರು

ಮಾಗಡಿ: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬುರುಡೆ ರಾಜ. ಅವರ ರಾಜಕೀಯ ಜೀವನವೇ ಬುರುಡೆ ಬಿಟ್ಕೊಂಡು ತಿರುಗಾಡಿದವರು. ಅವರು ಎಲ್ಲಿ ಸಕ್ಸ್‌ಸ್ ಆಗಿದ್ದಾರೆ. ಕ್ಯಾಸೆಟ್ ಇಟ್ಟುಕೊಂಡು ಹೈಕಮಾಂಡ್ ಬಳಿ ಸುಳಿದಾಡಿದಂತೆ ಅಲ್ಲ ರಾಜಕೀಯ ಮಾಡುವುದು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಫೀಲ್ಡ್‌ಗೆ ಬರಲಿ. ರಾಜಕೀಯ ಏನೆಂಬುದನ್ನು ತೋರಿಸುತ್ತೇವೆ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಯೋಗೇಶ್ವರ್ ಗೆ ಸವಾಲು ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರನ್ನಾಗಿ ಮಾಡಿದ ಬಿ.ಎಸ್.ಯಡಿಯೂರಪ್ಪ ಅವರನ್ನೇ ಸಿ.ಪಿ.ಯೋಗೇಶ್ವರ್ ಕುತಂತ್ರ ಮಾಡಿ ಕೆಳಗಿಳಿಸಿದರು. ತಮ್ಮನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಯೋಗೇಶ್ವರ್ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲು ಹೊರಟಿರುವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನಾಚಿಕೆಯಾಗಬೇಕು ಎಂದರು. ನಮ್ಮಂತಹ ರಾಜಕಾರಣಿಯಾಗಿದ್ದರೆ ಜೀವನ ಪೂರ್ಣ ಅವರ ನೆರಳ ಬಳಿಯೂ ಸುಳಿಯುತ್ತಿರಲಿಲ್ಲ. ಇವರು ರಾಜಕೀಯಕ್ಕಾಗಿ ಏನು ಬೇಕಾದರು ಮಾಡುತ್ತಾರೆ. ಇದರಿಂದಲೇ ಕಾಂಗ್ರೆಸ್‌ನ ಭಯ ಎಷ್ಟಿದೆ ಎಂದು ಗೊತ್ತಾಗಿದೆ. ಇವರು ಒಂದಾಗುತ್ತಿರುವುದು ನಮ್ಮನ್ನು ಮುಗಿಸಲೇ ಹೊರತು, ರಾಜ್ಯಕ್ಕೆ, ಜಿಲ್ಲೆಗೆ ಒಳ್ಳೆಯದು ಮಾಡಲು ಅಲ್ಲ. ಇವರ ಆಟ ಹೆಚ್ಚುದಿನ ನಡೆಯುವುದಿಲ್ಲ ಎಂದು ಟೀಕಿಸಿದರು. ಜಿಲ್ಲೆಯ ಅಭಿವೃದ್ಧಿಗೆ ಸಿ.ಪಿ.ಯೋಗೇಶ್ವರ್ ಕಾಣಿಕೆ ಏನಿದೆ. ಸಂಸದರ ಕಾಣಿಕೆ ಏನಿದೆ ಎನ್ನುವುದು ಈ ಬಾ ರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಬಯಲಿಗೆ ಬರಲಿದೆ. ಅದನ್ನು ನಾನೂ ತೋರಿಸುತ್ತೇನೆ. ಜನರೂ ತೋರಿಸುತ್ತಾರೆ ಎಂದು ಏಕವಚನದಲ್ಲೆ ವಾಗ್ದಾಳಿ ನಡೆಸಿದರು. ಈ ಬಾರಿಯ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 3ನೇ ಸ್ಥಾನದಲ್ಲಿದೆ. ಜೆಡಿಎಸ್- ಬಿಜೆಪಿ ಮೈತ್ರಿಯಿಂದಾಗಿ ಕಾಂಗ್ರೆಸ್ ಮೊದಲನೇ ಸ್ಥಾನಕ್ಕೆ ಬರುತ್ತೇವೆ. ನಮ್ಮ ಸರ್ಕಾರ ಇದ್ದು ಯಾವ ಬೂತ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಮತ ಹಾಕುತ್ತಾರೆ. ಅಂತಹ ಗ್ರಾಮವನ್ನು ಹೆಚ್ಚು ಅಭಿವೃದ್ಧಿ ಮಾಡುತ್ತೇವೆ- ದು ಬಾಲಕೃಷ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 9ಕೆಆರ್ ಎಂಎನ್ 7.ಜೆಪಿಜಿಶಾಸಕ ಬಾಲಕೃಷ್ಣ

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ