ದೇಶದ ಜನರಿಗೆ ನೆಮ್ಮದಿ ಜೀವನ ಮಾರ್ಗ ಕಲ್ಪಿಸಿದ ಡಾ.ಅಂಬೇಡ್ಕರ್‌: ಪಂಚಾಕ್ಷರಿ

KannadaprabhaNewsNetwork |  
Published : Apr 15, 2024, 01:19 AM IST
ಚಿತ್ರದುರ್ಗ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ  ಪ್ರಾಂಶುಪಾಲ ಡಾ. ಎಸ್.ಹೆಚ್. ಪಂಚಾಕ್ಷರಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಉತ್ತಮ ಸಂವಿಧಾನ ರಚಿಸುವ ಮೂಲಕ ದೇಶದಲ್ಲಿ ಸಮಾನತೆ, ಪ್ರಜಾತಂತ್ರ ಮತ್ತು ಒಕ್ಕೂಟ ವ್ಯವಸ್ಥೆ ಜಾರಿಗೊಳಿಸಿ ಜನತೆಗೆ ನೆಮ್ಮದಿ ಜೀವನ ಮಾರ್ಗವನ್ನು ಕಲ್ಪಿಸಿಕೊಟ್ಟವರು ಡಾ. ಬಿ.ಆರ್. ಆಂಬೇಡ್ಕರ್‌ ಎಂದು ಪ್ರಾಂಶುಪಾಲ ಡಾ. ಎಸ್. ಎಚ್. ಪಂಚಾಕ್ಷರಿ ಹೇಳಿದರು.

ಚಿತ್ರದುರ್ಗ: ಉತ್ತಮ ಸಂವಿಧಾನ ರಚಿಸುವ ಮೂಲಕ ದೇಶದಲ್ಲಿ ಸಮಾನತೆ, ಪ್ರಜಾತಂತ್ರ ಮತ್ತು ಒಕ್ಕೂಟ ವ್ಯವಸ್ಥೆ ಜಾರಿಗೊಳಿಸಿ ಜನತೆಗೆ ನೆಮ್ಮದಿ ಜೀವನ ಮಾರ್ಗವನ್ನು ಕಲ್ಪಿಸಿಕೊಟ್ಟವರು ಡಾ. ಬಿ.ಆರ್. ಆಂಬೇಡ್ಕರ್‌ ಎಂದು ಪ್ರಾಂಶುಪಾಲ ಡಾ. ಎಸ್. ಎಚ್. ಪಂಚಾಕ್ಷರಿ ಹೇಳಿದರು.

ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಪದವಿ ಕಾಲೇಜಿನಲ್ಲಿ ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ

ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಸಮಾಜಕ್ಕೆ ಜಾಢ್ಯವಾಗಿದ್ದ ಜಾತಿ ವ್ಯವಸ್ಥೆ ವಿರುದ್ಧ ಅಂಬೇಡ್ಕರ್‌ ಹೋರಾಡಿದರು. ಬಸವಾದಿ ಪ್ರಮಥರು ಸಾರಿದ ಸಮ ಸಮಾಜ ಮತ್ತು

ಸಾಮಾಜಿಕ ನ್ಯಾಯದ ಪರಿಕಲ್ಪನೆಯುಳ್ಳ ಸಂವಿಧಾನವು ಪ್ರಸ್ತುತ ಸಮಾಜದಲ್ಲಿ ಶಾಂತಿ - ಸೌಹಾರ್ದತೆ, ಭ್ರಾತೃತ್ವ ಮತ್ತು ಸಮಾನತೆ ಎತ್ತಿಹಿಡಿದು ದೇಶವು ಒಗ್ಗಟ್ಟಾಗಿ ಮುನ್ನಡೆಯಲು ಉತ್ತಮ ಮಾರ್ಗ ಮಾಡುತ್ತಿದೆ. ಸಂವಿಧಾನದಲ್ಲಿ ಸರ್ವರಿಗೂ ಸಮಾನ ಹಕ್ಕುಗಳನ್ನು ಪ್ರತಿಪಾದಿಸಿರುವ ಅಂಬೇಡ್ಕರ್‌ ವಿಚಾರಧಾರೆಗಳನ್ನು ನಾವೆಲ್ಲರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ಆರ್.ಕೆ. ಕೇದಾರನಾಥ್, ಪ್ರೊ.ಎಲ್.ಶ್ರೀನೀವಾಸ್, ಪ್ರೊ.ಎನ್.ಚಂದಮ್ಮ, ಡಾ.ಬಿ.ರೇವಣ್ಣ, ಡಾ. ಹರ್ಷವರ್ಧನ್.ಎ, ಪ್ರೊ. ಎಚ್.ಎಂ.ಮಂಜುನಾಥ್, ಡಾ.ನಾಜೀರುನ್ನೀಸ, ಎನ್‌ಎಸ್‌ಎಸ್ ಅಧಿಕಾರಿ ಪ್ರೊ.ಬಿ.ನಾಗರಾಜ್, ಅಧೀಕ್ಷಕರು, ಬೋಧಕೇತರ ಸಿಬ್ಬಂದಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಿರತೆ ದಾಳಿಗೆ ಮೇಕೆ ಬಲಿ: ಅರಣ್ಯ ಇಲಾಖೆ ಎದುರು ಪ್ರತಿಭಟನೆ
ಸತ್ಯಾಗ್ರಹ ಸೌಧ ಅಭಿವೃದ್ಧಿ: ನೀಲನಕ್ಷೆ ತಯಾರಿಗೆ ಪರಿಶೀಲನೆ