ಮದ್ದೂರು ಪಟ್ಟಣದ ಶಿವಪುರ ಸತ್ಯಾಗ್ರಹ ಸೌಧದ ಅನೆಕ್ಸ್ ಕಟ್ಟಡದಲ್ಲಿರುವ ಶೌಚಾಲಯಗಳ ದುರಸ್ತಿ ಹಾಗೂ ಒಂದು ಬೋರ್‌ವೆಲ್ ನಿರ್ಮಾಣ ಮಾಡುವುದು. ಸತ್ಯಾಗ್ರಹ ಸೌಧಕ್ಕೆ ನಾಮಫಲಕ ಹಾಗೂ ಶಿಲಾಫಲಕ ಅಳವಡಿಕೆ, ಪ್ರವೇಶ ದ್ವಾರ ನಿರ್ಮಾಣ.

ಕನ್ನಡಪ್ರಭ ವಾರ್ತೆ ಮದ್ದೂರು

ಮದ್ದೂರು ತಾಲೂಕಿನ ಶಿವಪುರದಲ್ಲಿರುವ ಐತಿಹಾಸಿಕ ಪಾರಂಪರಿಕ ಸ್ಥಳವಾದ ಧ್ವಜ ಸತ್ಯಾಗ್ರಹ ಸೌಧದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಶುಕ್ರವಾರ ಸತ್ಯಾಗ್ರಹ ಸೌಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಶಿವಪುರ ಸತ್ಯಾಗ್ರಹ ಸೌಧವು ದೇಶದ ಸ್ವಾತಂತ್ರ್ಯ ಹೋರಾಟದ ಪ್ರಮುಖ ಐತಿಹಾಸಿಕ ಸ್ಮಾರಕವಾಗಿದ್ದು, ಇದರ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ಸರ್ಕಾರದಿಂದ ೨ ಕೋಟಿ ರು.ಅನುದಾನ ಮಂಜೂರು ಮಾಡಲಾಗಿದೆ. ಈ ಅನುದಾನದಡಿ ಶಿವಪುರ ಸತ್ಯಾಗ್ರಹ ಸೌಧದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದ್ದು, ಅಗತ್ಯ ಮಾರ್ಗಸೂಚಿಗಳನ್ವಯ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮದ್ದೂರು ಪಟ್ಟಣದ ಶಿವಪುರ ಸತ್ಯಾಗ್ರಹ ಸೌಧದ ಅನೆಕ್ಸ್ ಕಟ್ಟಡದಲ್ಲಿರುವ ಶೌಚಾಲಯಗಳ ದುರಸ್ತಿ ಹಾಗೂ ಒಂದು ಬೋರ್‌ವೆಲ್ ನಿರ್ಮಾಣ ಮಾಡುವುದು. ಸತ್ಯಾಗ್ರಹ ಸೌಧಕ್ಕೆ ನಾಮಫಲಕ ಹಾಗೂ ಶಿಲಾಫಲಕ ಅಳವಡಿಕೆ, ಪ್ರವೇಶ ದ್ವಾರ ನಿರ್ಮಾಣ. ಸತ್ಯಾಗ್ರಹ ಸೌಧಕ್ಕೆ ಬಣ್ಣ ಬಳಿಯುವುದು, ಆವರಣದ ತಗ್ಗು ಪ್ರದೇಶಗಳನ್ನು ಎತ್ತರಿಸುವುದು ಹಾಗೂ ಇಂಟರ್‌ಲಾಕ್ ಪೇವರ್ಸ್ ಅಳವಡಿಕೆ. ಸೌಧದ ಒಳಭಾಗದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಕಾಂಪೌಂಡ್ ನಿರ್ಮಾಣ. ಕಬ್ಬಿಣದ ಬಾಗಿಲುಗಳನ್ನು ಅಳವಡಿಸುವುದು ಹಾಗೂ ಅಗತ್ಯ ಸ್ಟ್ಯಾಂಡ್‌ಗಳನ್ನು ನಿರ್ಮಿಸುವಂತೆ ತಿಳಿಸಿದರು.

ಸೌಧದ ಒಳಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸತ್ಯಾಗ್ರಹಕ್ಕೆ ಸಂಬಂಧಿಸಿದ ಏಳು ಭಾವಚಿತ್ರಗಳನ್ನು ಅಳವಡಿಸುವುದು. ಸತ್ಯಾಗ್ರಹ ಸೌಧಕ್ಕೆ ಕಾವಲುಗಾರರನ್ನು ನೇಮಿಸುವುದು. ಬಲಭಾಗದಲ್ಲಿ ಅನೆಕ್ಸ್ ಕಟ್ಟಡ ನಿರ್ಮಿಸಿ, ಶಿವಪುರದ ಸ್ವಾತಂತ್ರ್ಯ ಹೋರಾಟ ಸೇರಿದಂತೆ ರಾಜ್ಯ ಹಾಗೂ ದೇಶದಾದ್ಯಂತ ನಡೆದ ಸ್ವಾತಂತ್ರ್ಯ ಹೋರಾಟಗಳ ಮಾಹಿತಿ ಮತ್ತು ಮಹಾತ್ಮ ಗಾಂಧೀಜಿಯವರ ಕುರಿತು ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸುವ ವ್ಯವಸ್ಥೆ. ಸತ್ಯಾಗ್ರಹ ಸೌಧದ ಆವರಣದ ಸಂಗೀತ ಕಾರಂಜಿ ಪುನರುಜ್ಜೀವನಗೊಳಿಸುವಂತೆ ಹೇಳಿದರು.

ಈ ಎಲ್ಲಾ ಕಾಮಗಾರಿಗಳನ್ನು ಅತಿ ತುರ್ತಾಗಿ ಪ್ರಾರಂಭಿಸಿ, ಉತ್ಕೃಷ್ಟ ದರ್ಜೆಯಲ್ಲಿ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.

ನಗರಾಭಿವೃರ್ದಧಿ ಕೋಶದ ಯೋಜನಾ ನಿರ್ದೇಶಕ ಟಿ.ನರಸಿಂಹಮೂರ್ತಿ, ಕಾರ್ಯನಿರ್ವಾಹಕ ಅಭಿಯಂತರ ಪ್ರತಾಪ್, ಮದ್ದೂರು ನಗರಸಭೆ ಪೌರಾಯುಕ್ತರು, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಇತರೆ ಅಧಿಕಾರಿಗಳು ಹಾಜರಿದ್ದರು.