ಜಿಲ್ಲೆಗೆ ಬಂದರೆ ಪ್ರಮೋಷನ್ ಸಿಗುತ್ತೆ, ಹಿಂಬಡ್ತಿ ಅಲ್ಲ: ಶಾಸಕ ಕೃಷ್ನಮೂರ್ತಿ

KannadaprabhaNewsNetwork |  
Published : Sep 30, 2026, 02:00 AM IST
ಜಿಲ್ಲೆಗೆ ಬಂದರೆ ಪ್ರಮೋಷನ್ ಸಿಗುತ್ತೆ,  ಹಿಂಬಡ್ತಿ ಸಿಗಲ್ಲ  ಶಾಸಕ ಎಆರ್‌ಕ | Kannada Prabha

ಸಾರಾಂಶ

ನಮ್ಮ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದು ಹೋದವರಿಗೆಲ್ಲಾ ಪ್ರಮೋಷನ್ ಆಗಿದೆ. ಆದರೆ ನನಗೆ ಮಾತ್ರ ಪ್ರಮೋಷನ್ ಸಿಕ್ಕಿಲ್ಲ, ಈ ಜಿಲ್ಲೆಗೆ ಬಂದವರಾರಿಗೂ ಇಲ್ಲಿ ತನಕ ಹಿಂಬಡ್ತಿ ಸಿಕ್ಕಿಲ್ಲ, ನಿಜಕ್ಕೂ ಮುಂಬಡ್ತಿ ಸಿಗಲಿದೆ, ಇಲ್ಲಿಗೆ ಯಾರು ಬಂದರೂ ಅಧಿಕಾರ ಕಳೆದುಕೊಳ್ಳಲ್ಲ, ಇದೆಲ್ಲಾ ಕೇವಲ ವದಂತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಮ್ಮ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಕ್ಷೇತ್ರಕ್ಕೆ ಬಂದು ಹೋದವರಿಗೆಲ್ಲಾ ಪ್ರಮೋಷನ್ ಆಗಿದೆ. ಆದರೆ ನನಗೆ ಮಾತ್ರ ಪ್ರಮೋಷನ್ ಸಿಕ್ಕಿಲ್ಲ, ಈ ಜಿಲ್ಲೆಗೆ ಬಂದವರಾರಿಗೂ ಇಲ್ಲಿ ತನಕ ಹಿಂಬಡ್ತಿ ಸಿಕ್ಕಿಲ್ಲ, ನಿಜಕ್ಕೂ ಮುಂಬಡ್ತಿ ಸಿಗಲಿದೆ, ಇಲ್ಲಿಗೆ ಯಾರು ಬಂದರೂ ಅಧಿಕಾರ ಕಳೆದುಕೊಳ್ಳಲ್ಲ, ಇದೆಲ್ಲಾ ಕೇವಲ ವದಂತಿ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಸಭೆ ಹಾಗೂ ಸಿಎಂ ಭೇಟಿ ಹಿನ್ನೆಲೆ ಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು 16ಕ್ಕೂ ಹಲವು ಬಾರಿ ಬಂದಿದ್ದಾರೆ. 2 ಬಾರಿ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಅವರು ವೆಂಕಟಯ್ಯನ ಛತ್ರದಲ್ಲಿನ ತೋಟದ ಸಭೆಗೆ ಅಂದು ಬಂದಿದ್ದರು. ಅದು ಗುಪ್ತ ಸಭೆ ಎಂಬ ವಿಚಾರ ಚರ್ಚೆಗೆ ಬಂತು. ಆಗ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬಂತು. ಜೆ ಎಚ್ ಪಟೇಲರು ಸಮಾಜವಾದಿಗಳು, ಚಾ.ನಗರ ಜಿಲ್ಲೆ ಉದಯವಾಗಲು ಅವರೇ ಕಾರಣ ಎಂದು ಸ್ಮರಿಸಿದರು.

ಇದು ಕಾಂಗ್ರೆಸ್ ಸರ್ಕಾರದ ಅಭಿವೃದ್ದಿ ಉತ್ಸವ:

ಕೊಳ್ಳೇಗಾಲ ಕ್ಷೇತ್ರದಲ್ಲಿ ನೂರಾರು ಕೋಟಿ ಅಭಿವೃದ್ದಿ ಕಾಮಗಾರಿಗಳಿಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದು,ಇದು ನಿಜಕ್ಕೂ ನನ್ನ ಉತ್ಸವ ಅಲ್ಲ, ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಉತ್ಸವ ಮಾತ್ರವಲ್ಲ, ಕೊಳ್ಳೇಗಾಲ ಕ್ಷೇತ್ರದ ಸಮಗ್ರ ಅಭಿವೃದ್ಧಿ ಉತ್ಸವವಾಗಲಿದೆ ಎಂದು ಹೇಳಿದರು.

ದೇವೆಗೌಡರು ಮುಖ್ಯಮಂತ್ರಿಗಳಾಗಿದ್ದ ವೇಳೆ ಅಂದು ನವೋದಯದ ಹೊಂಡರಬಾಳು ಕಟ್ಟಡ ಉದ್ಘಾಟನೆಗೆ ಬಂದಿದ್ದರು. ಬಳಿಕ ಅವರು ಪ್ರಧಾನ ಮಂತ್ರಿಗಳಾದರು. ಅದೇ ರೀತಿ ಕ್ಷೇತ್ರಕ್ಕೆ ಅಂದು ಬಂದು ಹೋದರೆಲ್ಲರಿಗೂ ಉನ್ನತ ಅಧಿಕಾರ ಸಿಕ್ಕಿದೆ, ಈ ಜಿಲ್ಲೆಗೆ ಬಂದವರಿಗೆ ಪ್ರಮೋಷನ್ ಇದೆ. ಯಾರೋ ಸೃಷ್ಟಿ ಮಾಡಿದ್ದಾರೆ. ಅಧಿಕಾರ ಹೋಗುತ್ತೆ ಎಂದು. ಅದೆಲ್ಲಾ ವದಂತಿ ಯಾರು ಬಂದರೂ ಅಧಿಕಾರ ಕಳೆದುಕೊಳ್ಳಲ್ಲ, ನಾನು ಕ್ಷೇತ್ರದಲ್ಲಿನ ಅನೇಕ ಜನಪರ ಕೆಲಸ ಕಾರ್ಯಗಳ ಕುರಿತು ಇದೇ ವೇಳೆ ಮುಖ್ಯಮಂತ್ರಿಗಳಿಗೆ ವೇದಿಕೆಯಲ್ಲೆ ಮನವಿ ಸಲ್ಲಿಸುತ್ತೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಪಾಲಿಗೆ ಪ್ರೊ:ಸುಜನಾ ಆದರ್ಶ ಗುರುವಾಗಿದ್ದರು: ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯ
ಎಸ್‌ಐಆರ್‌ ಖಂಡಿಸಿ ಕಾಂಗ್ರೆಸ್‌ ವತಿಯಿಂದ ಪ್ರತಿಭಟನೆ