ವೃದ್ಧೆಯನ್ನು ವಂಚಿಸಿ ಪರಿಹಾರದ ಹಣ ಲಪಟಾಯಿಸಿದ ವಕೀಲನ ಮೇಲೆ ದೂರು

KannadaprabhaNewsNetwork |  
Published : Sep 30, 2026, 02:00 AM IST
28ಎಚ್ಎಸ್ಎನ್15 : ಹೊಳೆನರಸೀಪುರದ ಪತ್ರಕಥರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಸ್ಟಿಯಲ್ಲಿ ಅಣ್ಣೆಚಾಕನಹಳ್ಳಿ ಧರ್ಮ ಮಾತನಾಡಿದರು. ಸಣ್ಣಮ್ಮ, ಸಣ್ಣಮ್ಮ ಪತಿ ರಂಗೇಗೌಡ, ಚಂದ್ರಶೇಖರ್ ಇದ್ದರು. | Kannada Prabha

ಸಾರಾಂಶ

ಅವಿದ್ಯಾವಂತರು ಹಾಗೂ ಮುಗ್ಧರಾದ ನನ್ನ ತಾಯಿ ಸಣ್ಣಮ್ಮನವರ ಖಾತೆಗೆ ಜಮಾ ಆಗಿದ್ದ ೧೧ ಲಕ್ಷ ರು. ಪರಿಹಾರದ ಹಣವನ್ನು ಲಪಟಾಯಿಸುವ ಸಲುವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಸಣ್ಣಮ್ಮನವರ ಖಾತೆ ಇದ್ದರೂ ಅದೇ ಬ್ಯಾಂಕಿನಲ್ಲಿ ಹೊದಾಗಿ ಅಕೌಂಟ್ ತೆರೆದಿರುವ ವಕೀಲ ಹೇಮಂತ ಕುಮಾರ್‌ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ನನ್ನ ತಾಯಿಯಿಂದ ಸಹಿ ಪಡೆದು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ನೀಡದೇ ವಂಚಿಸಿದ್ದಾರೆ " ಎಂದು ಅಣ್ಣೆಚಾಕನಹಳ್ಳಿ ಧರ್ಮ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

"ಅವಿದ್ಯಾವಂತರು ಹಾಗೂ ಮುಗ್ಧರಾದ ನನ್ನ ತಾಯಿ ಸಣ್ಣಮ್ಮನವರ ಖಾತೆಗೆ ಜಮಾ ಆಗಿದ್ದ ೧೧ ಲಕ್ಷ ರು. ಪರಿಹಾರದ ಹಣವನ್ನು ಲಪಟಾಯಿಸುವ ಸಲುವಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಸಣ್ಣಮ್ಮನವರ ಖಾತೆ ಇದ್ದರೂ ಅದೇ ಬ್ಯಾಂಕಿನಲ್ಲಿ ಹೊದಾಗಿ ಅಕೌಂಟ್ ತೆರೆದಿರುವ ವಕೀಲ ಹೇಮಂತ ಕುಮಾರ್‌ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಂಡು ನನ್ನ ತಾಯಿಯಿಂದ ಸಹಿ ಪಡೆದು ಬ್ಯಾಂಕಿನಿಂದ ಹಣ ಡ್ರಾ ಮಾಡಿಕೊಂಡು ಹಣವನ್ನು ನೀಡದೇ ವಂಚಿಸಿದ್ದಾರೆ " ಎಂದು ಅಣ್ಣೆಚಾಕನಹಳ್ಳಿ ಧರ್ಮ ಆರೋಪಿಸಿದರು.

ಪಟ್ಟಣದ ಪತ್ರಕರ್ತರ ಸಂಘದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನನ್ನ ಅಣ್ಣ ಮಲ್ಲೇಶ ಅವರು ಅಪಘಾತದಲ್ಲಿ ಮೃತಪಟ್ಟಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಗೊಂಡು ಮೃತ ಮಲ್ಲೇಶ್ ಪತ್ನಿಗೆ ೧೬ ಲಕ್ಷ ರು. ಹಾಗೂ ಅವರ ತಾಯಿಗೆ ೧೧ ಲಕ್ಷ ರು. ಪರಿಹಾರದ ಮೊತ್ತ ನ್ಯಾಯಾಲಯದ ಆದೇಶದಂತೆ ಖಜಾನೆ ಮೂಲಕ ಹಣ ಪಾವತಿಯಾಗಿದೆ. ಆದರೆ ವಕೀಲ ಹೇಮಂತ ಕುಮಾರ್ ಮೋಸ ಮಾಡುವ ಉದ್ದೇಶದಿಂದಲೇ ಹೊಸದಾಗಿ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಹೊಸ ಅಕೌಂಟ್ ತೆರೆದಿದ್ದಾರೆ. ಜುಲೈ ೨೯ರಂದು ನನ್ನ ತಾಯಿಯನ್ನು ಕೋರ್ಟ್ ಹತ್ತಿರಕ್ಕೆ ಪ್ರದೀಪ್ ಎಂಬುವರ ಜತೆಗೆ ಕರೆಸಿಕೊಂಡು, ನಂತರ ಪ್ರದೀಪ್ ಅವರಿಗೆ ಬೈಕಿನಲ್ಲಿ ಬ್ಯಾಂಕ್ ಹತ್ತಿರಕ್ಕೆ ಕರೆದುಕೊಂಡು ಬಾ ಎಂದು ತಿಳಿಸಿ ಬ್ಯಾಂಕ್ ಹತ್ತಿರ ಹೋಗಿದ್ದಾರೆ. ಆಗ ಅವಿದ್ಯಾವಂತರಾದ ಸಣ್ಣಮ್ಮ ಅವರಿಂದ ಕೆಲವು ದಾಖಲೆಗಳಿಗೆ ಸಹಿ ಪಡೆದು, ನಂತರದಲ್ಲಿ ೧೧ ಲಕ್ಷ ರು. ಹಣ ಡ್ರಾ ಮಾಡಿಕೊಂಡು ವಕೀಲರು ಹೊರಟು ಹೋಗಿದ್ದಾರೆ. ಈ ಬಗ್ಗೆ ವಿಚಾರಿಸಲಾಗಿ ವಕೀಲ ಹೇಮಂತ ಅವರು ೫೦ ಸಾವಿರ ರು. ಮಾತ್ರ ನೀಡಲು ಬಂದಿದ್ದರು. ೧೧ ಲಕ್ಷ ರು. ಪೂರ್ತಿ ಕೇಳಿದಾಗ ನಾ ಕೊಡುವುದಿಲ್ಲವೆಂದು ನಿಂದಿಸಿದ್ದಾರೆ. ಘಟನೆ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಪಟ್ಟಣದ ಆರಕ್ಷಕ ಉಪ ನಿರೀಕ್ಷಕರಿಗೆ ಬರೆದ ದೂರಿನ ಪ್ರತಿಯನ್ನು ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ತಹಸೀಲ್ದಾರ್‌ ರಿಜಿಸ್ಟರ್‌ ಪೋಸ್ಟಿನ ಮೂಲಕ ಎಲ್ಲರಿಗೂ ಕಳುಹಿಸಿ ಕೊಡಲಾಗಿದೆ ಮತ್ತು ಕೃತ್ಯ ಸಂಬಂಧ ವಕೀಲರ ಸಂಘಕ್ಕೂ ಮನವಿ ಮಾಡಿದ್ದೇವೆ. ಕೃತ್ಯ ನಡೆದು ೨ ತಿಂಗಳಾದರೂ ಯಾವುದೇ ಬೆಳವಣಿಗೆ ಆಗದ ಹಿನ್ನೆಲೆಯಲ್ಲಿ ಮಾಧ್ಯಮದ ಮೂಲಕ ನ್ಯಾಯ ದೊರಕಿಸಿಕೊಡಿ ಎಂದು ಅಧಿಕಾರಿಗಳಲ್ಲಿ ವಿನಂತಿಸುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಣ್ಣಮ್ಮ, ಸಣ್ಣಮ್ಮ ಪತಿ ರಂಗೇಗೌಡ, ಚಂದ್ರಶೇಖರ್‌ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳ ಪಾಲಿಗೆ ಪ್ರೊ:ಸುಜನಾ ಆದರ್ಶ ಗುರುವಾಗಿದ್ದರು: ಪ್ರೊ.ಮೈಸೂರು ಕೃಷ್ಣಮೂರ್ತಿ ಅಭಿಪ್ರಾಯ
ಜಿಲ್ಲೆಗೆ ಬಂದರೆ ಪ್ರಮೋಷನ್ ಸಿಗುತ್ತೆ, ಹಿಂಬಡ್ತಿ ಅಲ್ಲ: ಶಾಸಕ ಕೃಷ್ನಮೂರ್ತಿ