ಮಾಗಡಿ: ಯುವ ವಕೀಲರು ವೃತ್ತಿ ನೈಪುಣ್ಯತೆ ಗಳಿಸಲು ಕೋರ್ಟು ಕಲಾಪಗಳಲ್ಲಿ ಹೆಚ್ಚು ಭಾಗವಹಿಸಬೇಕು. ಕಾನೂನು ಗ್ರಂಥಗಳ ಅಧ್ಯಯನ, ಹಿರಿಯ ವಕೀಲರ ವಾದವಿವಾದಗಳ ಆಲಿಕೆ, ವೃತ್ತಿ ಬೆಳವಣಿಗೆಗೆ ಪೂರಕ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಹೇಳಿದರು.
ಅಭಿನಂದನೆ ಸ್ವೀಕರಿಸಿದ ಹಿರಿಯ ವಕೀಲ ಜಿ.ಪಾಪಣ್ಣ ಮಾತನಾಡಿ, ವಕೀಲರು ಮನಸ್ಸಾಕ್ಷಿಯಂತೆ ಕ್ಷಕಿದಾರರಿಗೆ ನ್ಯಾಯದಾನ ಮಾಡಿಸಿಕೊಡಬೇಕು. ನ್ಯಾಯಾಲಯಕ್ಕೆ ಮರ್ಯಾದೆ ಕೊಡಬೇಕು. ಎದುರು ವಕೀಲರ ಬಲಹೀನತೆಯನ್ನು ಟೀಕಿಸಬಾರದು. ವೃತ್ತಿ ಸಿದ್ಧಾಂತಗಳಿಟ್ಟುಕೊಂಡು, ನಿತ್ಯ ಅಧ್ಯಯನ ಮಾಡಿಕೊಂಡು ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಿ ವೃತ್ತಿ ಪಾವಿತ್ರ್ಯ ಕಾಪಾಡಬೇಕು. ವಕೀಲರಿಗೆ ಕರ್ತವ್ಯ ನಿಷ್ಠೆ ಮತ್ತು ಕಕ್ಷಿದಾರರಿಗೆ ನ್ಯಾಯ ಒದಗಿಸಿ ಕೊಡುವುದು ಅತಿಮುಖ್ಯ ಎಂದರು.
ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ ಮಾತನಾಡಿ, ಗುರುವಿಲ್ಲದೆ ವಿದ್ಯೆ ಹತ್ತಲಾರದು, ಸಿವಿಲ್‌ನಲ್ಲಿ ಎಚ್.ಎಸ್.ರಾಜಶೇಖರಯ್ಯ ಅವರ ಶಿಷ್ಯ ಪಾಪಣ್ಣ. ವಕೀಲ ವೃತ್ತಿ ಸುಲಭವಲ್ಲ. ಅದು ಹೂವು ಮುಳ್ಳುಗಳಿಂದ ಕೂಡಿರುವ ಹಾದಿ. ನುಡಿದರೆ ಮತ್ತಿನ ಹಾರದಂತೆ ಇರಬೇಕು. ನಡೆದರೆ ಇತರರಿಗೆ ಮಾದರಿಯಂತಿರಬೇಕು. ಮಡಿದರೆ ಇತರರು ನೆನಪು ಮಾಡಿಕೊಳ್ಳುವಂತೆ ಇರಬೇಕು. ಆಕಾಶದಿಂದ ಬಿದ್ದ ನೀರು, ಹೇಗೆ ಸಮುದ್ರ ಸೇರುತ್ತದೆಯೋ, ಸಮುದ್ರ ಸೇರುವ ಮುನ್ನ ನದಿ ಎಲ್ಲೆಡೆ ನೀರುಣಿಸಿ ಮತ್ತೆ ಸಾಗರ ಸೇರುವಂತೆ, ಮನುಷ್ಯ ಹುಟ್ಟಿದ ಮೇಲೆ ಕಾನೂನು ಮೂಲಕ ಬಂದಂತಹ ಕರ್ತವ್ಯಗಳನ್ನು ಪರಿಪೂರ್ಣ ಮಾಡಿದರೆ ಸದ್ಗತಿ ದೊರೆಯಲಿದೆ ಎಂದರು.ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಎಚ್.ಅಣ್ಣಯ್ಯ, ಮಾಗಡಿ ಜೆಎಂಎಫ್ ನ್ಯಾಯಾಲಯದ ಮೊದಲ ನ್ಯಾಯಾಧೀಶರಾಗಿದ್ದ ಆರ್.ಬಿ,ಸದಾಶಿವಪ್ಪ, ರಿಜಿಸ್ಟ್ರಾರ್ ಅರವಿಂದ್ ಎನ್.ವಿ., ವಕೀಲರ ಪರಿಷತ್ ಸದಸ್ಯ ಮಧುಸೂದನ್, ನಿವೃತ್ತ ನ್ಯಾಯಮೂರ್ತಿ ನಾರಾಯಣ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಕೆಂಪಣ್ಣ, ಮಾಗಡಿ ನ್ಯಾಯಾಲಯದ ಪ್ರಧಾನ ಹಿರಿಯ ಸಿವಿಲ್‌ನ್ಯಾಯಾಧೀಶರಾದ ಸಂದೀಪ್ ಎಸ್.ರೆಡ್ಡಿ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವಕುಮಾರ್, ಪ್ರಧಾನ ಹಿರಿಯ ನ್ಯಾಯಾಧೀಶೆ ನಾಗರತ್ನಮ್ಮ, ಒಂದನೇ ಅಪರ ಸಿವಿಲ್ ನ್ಯಾಯಾಧೀಶ ಶಿಶಿರಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಆರ್.ಸುರೇಶ್, ಉಪಾಧ್ಯಕ್ಷ ರಾಜಯ್ಯ.ಎಸ್, ಕಾರ್ಯದರ್ಶಿ ಅನಿಲ್‌ಕುಮಾರ್,ಜಂಟಿ ಕಾರ್ಯದರ್ಶಿ ಸಹನಾಪಂಡಿತ್, ಖಜಾಂಚಿ ವಿಜಯಕುಮಾರ್, ಹಿರಿಯ ವಕೀಲರಾದ ಡಿ.ಎಚ್.ಮಲ್ಲಿಕಾರ್ಜುನಯ್ಯ, ಎಂ.ಎಸ್.ಸಿದ್ದಲಿಂಗಪ್ಪ, ದೇವರಾಜೇಗೌಡ, ಸಿದ್ದರಾಜು, ನರಸಿಂಹಮೂರ್ತಿ, ಸಿದ್ದರಾಜು, ಬಿ.ಇ.ರಘು ಹಾಗೂ ಕುಣಿಗಲ್, ರಾಮನಗರ, ನೆಲಮಂಗಲ, ಕನಕಪುರ, ಚನ್ನಪಟ್ಟಣ ವಕೀಲರ ಸಂಘದ ಪದಾಧಿಕಾರಿಗಳು, ಗಾಣಿಗರ ಸಂಘದ ರೇವಣ್ಣ ಸಿದ್ದಯ್ಯ, ಶಿವಕುಮಾರ್, ಕನಕಪುರದ ಗಂಗಾಧರ್ ಇತರರಿದ್ದರು.
ಮಾಗಡಿ ಜೆಎಂಎಫ್ ನ್ಯಾಯಾಲಯದ ಆವರಣದಲ್ಲಿ ಹಿರಿಯ ನ್ಯಾಯವಾದಿ ಜಿ.ಪಾಪಣ್ಣ ಅವರನ್ನು ಹೈಕೋರ್ಟ್ ನ್ಯಾಯಮೂರ್ತಿ ಎಸ್.ವಿಶ್ವಜಿತ್ ಶೆಟ್ಟಿ ಅಭಿನಂದಿಸಿದರು. ಉಪಲೋಕಾಯುಕ್ತ ಕೆ.ಎನ್.ಫಣೀಂದ್ರ, ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಂ.ಎಚ್.ಅಣ್ಣಯ್ಯ ಇತರರಿದ್ದರು.