ರಾಜೇಂದ್ರ ರಾವ್
ಪಟ್ಟಣದಲ್ಲಿ ಮನೆ ನಿರ್ಮಾಣ ಮಾಡಲು, ಮನೆಗೆ ವಿದ್ಯುತ್‌ಸಂಪರ್ಕ ಪಡೆಯಲು ಯಾವುದೆ ಅಧಿಕಾರಿ ಅನುಮತಿ ಬೇಕಿಲ್ಲ, ಇದ್ದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾತ್ರ ಇದ್ಯಾವುದು ತಿಳಿಯದೆ ಎಲ್ಲವೂ ಆಗಿರುತ್ತದೆ ಎಂಬುದಕ್ಕೆ ಪಟ್ಟಣದ ಟೆಲಿಕಾಂ ಬಡಾವಣೆಯಲ್ಲಿ ಮನೆಯ ಮೇಲೆ ವಿದ್ಯುತ್ ತಂತಿ ಹಾದು ಹೋಗಿ ಸಂಪರ್ಕ ಪಡೆದಿರುವುದೆ ಸಾಕ್ಷಿಯಾಗಿದೆ.
ಪಟ್ಟಣದ ನೂತನ ಬಡಾವಣೆಯಾದ ಟೆಲಿಕಾಂ ಬಡಾವಣೆಯಲ್ಲಿ ವಿದ್ಯುತ್‌ತಂತಿ ಸಮನೆಯ ಆರ್‌ಸಿಸಿ ಮಧ್ಯಭಾಗದಲ್ಲಿ ಹಾದುಹೋಗಿದ್ದು ಇಲ್ಲಿ ಸಾವುನೋವು ಸಂಭವಿಸಿದರೆ ಯಾರು ಹೊಣೆ ಎಂಬುದು ತಿಳಿಯದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಸೆಸ್ಕಾಂ ಮತ್ತು ಪುರಸಭೆ ಅಧಿಕಾರಿಗಳಿಗೆ ಪ್ರಶ್ನಿಸಿದರೆ ಯಾರಿಂದಲೂ ಸಮಪರ್ಕವಾದ ಉತ್ತರವಿಲ್ಲ.ಅದೃಷ್ಟವಶಾತ್ ಕೇವಲ ಮೂರು ಅಡಿ ಎತ್ತರದಲ್ಲಿ ಆರ್‌ಸಿಸಿ ಮೇಲೆ ವಿದ್ಯುತ್‌ತಂತಿ ಹಾದುಹೋಗಿದ್ದು ಈ ಮಟ್ಟದಲ್ಲಿ ಮನೆ ನಿರ್ಮಾಣ ಮಾಡಿ ಅದೇ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರೂ ಸಹ ಸೆಸ್ಕಾಂ ಅಧಿಕಾರಿಗಳ ಗಮನಕ್ಕೆ ಹೋಗಿಲ್ಲ ಎಂದರೆ ಇದೆಂತಹ ವಿಪರ್ಯಾಸ ಎಂಬುದು ಸಾರ್ವಜನಿಕರ ಆಶ್ಚರ್ಯಕರ ಪ್ರಶ್ನೆಯಾಗಿದೆ.
ಇಂತಹ ಹತ್ತಾರು ಪ್ರಕರಣಗಳು ಪಟ್ಟಣದ ಹಲವಾರು ಬಡಾವಣೆಗಳಲ್ಲಿ ಇದ್ದರೂ ಎಲ್ಲಿ ಸಾರ್ವಜನಿಕರಿಂದ ಆಕ್ಷೇಪ ಬರುತ್ತದೋ ಅಲ್ಲಿಮಾತ್ರ ಸರಿಪಡಿಸಿ ಬೇರೆಡೆ ಹಾಗೆಬಿಡುವುದು ಮಾಮೂಲಾಗಿದ್ದು ಇದರಿಂದ ಮುಂದಿನ ದಿನಗಳಲ್ಲಿ ಪ್ರಾಣಹಾನಿಯಾದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಖಾರಿಗಳೇ ಜವಾಬ್ದಾರರಾಗುತ್ತಾರೆ ಎಂದು ಪಟ್ಟಣದ ಪ್ರಜ್ಞಾವಂತ ನಾಗರೀಕರು ಎಚ್ಚರಿಸಿದ್ಧಾರೆ.
- ರಮೇಶ್ ಪುರಸಭೆ ಮುಖ್ಯಾಧಿಕಾರಿ.
- ಪ್ರಸನ್ನ ಜೆಇ ಸೆಸ್ಕ್
- ಅರ್ಕೇಶ್ವರಮೂರ್ತಿ ಎಇಇ ಸೆಸ್ಕ್.
-ಹೆಸರು ಹೇಳಲಿಚ್ಚಿಸದ ಅಧಿಕಾರಿ ದೊಡ್ಡೇಕೊಪ್ಪಲು ಗ್ರಾಪಂ