ಹಳಿಯಾಳ: ಮನೆ ಕುಟುಂಬ ಸದಸ್ಯರಿಂದ ದೂರವಾಗಿಟ್ಟುಕೊಂಡು ದೇಶ ರಕ್ಷಣೆಗಾಗಿ ಲಕ್ಷಾಂತರ ಯೋಧರು ಜೀವದ ಹಂಗು ತೊರೆದು ಗಡಿಯಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದು, ಅವರ ಸೇವೆಯನ್ನು ವ್ಯರ್ಥಗೊಳಿಸುವ ಯಾವ ಕಾರ್ಯವನ್ನು ಮಾಡದೇ ದೇಶವನ್ನು ಬಲಿಷ್ಠ, ಸಮೃದ್ಧವನ್ನಾಗಿಸಲು ನಿತ್ಯ, ನಿರಂತರ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ಮಾಜಿ ಸೈನಿಕ ಓಂಕೇಶ್ ಬಾವಿಕಟ್ಟಿ ತಿಳಿಸಿದರು.ಶುಕ್ರವಾರ ಪಟ್ಟಣದ ದೇಶಪಾಂಡೆ ಖಾಸಗಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಕಾರ್ಗಿಲ್ ವಿಜಯ ದಿವಸದ ರಜತ ಮಹೋತ್ಸವ ಸಮಾರಂಭದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ತರಬೇತಿ ಅಧಿಕಾರಿ ದಿನೇಶ್ ಡಿ. ನಾಯಕ್, ಸಚಿನ ಮಿರಾಶಿ, ಎನ್.ಎಂ. ತೋರಸ್ಕರ ಇದ್ದರು.
ಎಂಜಿನಿಯರಿಂಗ್ ಕಾಲೇಜು: ಪಟ್ಟಣದ ಕೆಎಲ್ಎಸ್ ಸಂಸ್ಥೆಯ ವಿಡಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕಾರ್ಗಿಲ್ ವಿಜಯ್ ದಿವಸವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಯೋಧ ವಿಠ್ಠಲ ಜುಂಜವಾಡಕರ ಅವರನ್ನು ಸನ್ಮಾನಿಸಲಾಯಿತು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ವಹಿಸಿದ್ದರು. ಎನ್ಎಸ್ಎಸ್ ವಿಭಾಗದ ಸಂಚಾಲಕ ಪ್ರೊ. ಸಂತೋಷ ಸವಣೂರ, ಪ್ರೊ. ಗದಿಗೆಪ್ಪ ಯಳ್ಳೂರ, ಪೊ. ಸುಬ್ರಹ್ಮಣ್ಯ ಹೆಗಡೆ ಹಾಗೂ ಎಲ್ಲ ತರಬೇತಿ ವಿಭಾಗದ ಪ್ರಮುಖರು ಇದ್ದರು.