ತಂಬಾಕು ಸೇವನೆ ಆರೋಗ್ಯಕ್ಕೆ ಮಾರಕ: ಡಾ.ಶ್ರೀನಿವಾಸ್

KannadaprabhaNewsNetwork | Updated : Jul 27 2024, 12:57 AM IST

ಸಾರಾಂಶ

ನರಸಿಂಹರಾಜಪುರ, ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ ರೋಗ ಬರಲಿದೆ ಎಂದು ತಾಲೂಕು ಮುಖ್ಯ ದಂತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದರು.

ಆರೋಗ್ಯ ಇಲಾಖೆಯಿಂದ ತಂಬಾಕು ಸೇವನೆ ದುಷ್ಪರಿಣಾಮದ ಬಗ್ಗೆ ಅರಿವು

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್‌ ರೋಗ ಬರಲಿದೆ ಎಂದು ತಾಲೂಕು ಮುಖ್ಯ ದಂತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್‌ ತಿಳಿಸಿದರು.

ಶುಕ್ರವಾರ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಜಿಲ್ಲಾ ಎನ್‌.ಸಿ.ಡಿ.ಘಟಕ, ತಾಲೂಕು ಸಾರ್ವಜನಿಕ ಆಸ್ಪತ್ರೆ ದಂತ ವಿಭಾಗ, ಪಪಂ ಸಂಯುಕ್ತಾಶ್ರಯದಲ್ಲಿ ನಡೆದ ಪೌರ ಕಾರ್ಮಿಕರಿಗೆ ತಂಬಾಕು ಸೇವನೆ ದುಷ್ಪರಿಣಾಮಗಳ ಕುರಿತ ಮಾಹಿತಿ, ಉಚಿತ ದಂತ ಆರೋಗ್ಯ, ಬಾಯಿ ಕ್ಯಾನ್ಸರ್, ಕ್ಷಯ ರೋಗ ತಪಾಸಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದಂತ ಮನುಷ್ಯನಿಗೆ ಮುಖ್ಯವಾದದು. ದಂತ ಮನುಷ್ಯನ ಸೌಂದರ್ಯ ಹೆಚ್ಚಿಸುತ್ತದೆ. ದಂತ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ 5 ರಿಂದ 10 ನಿಮಿಷ ದಂತ ಮಜನ ಮಾಡಬೇಕು. ರಕ್ತದೊತ್ತಡ, ಮಧು ಮೇಹ ಇರುವುವರು ದಂತದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಹಲ್ಲಿನಲ್ಲಿ ಸೇರಿಕೊಳ್ಳುವ ಸಣ್ಣ, ಸಣ್ಣ ವಸ್ತುಗಳು ಹಲ್ಲಿನ ಆರೋಗ್ಯ ಹಾಳು ಮಾಡುತ್ತದೆ ಎಂದು ಪಿಪಿಟಿ ಮೂಲಕ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.

ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ ಶೆಟ್ಟಿ ಮಾತನಾಡಿ, ಪೌರ ಕಾರ್ಮಿಕರು ಮಳೆ, ಗಾಳಿ ಲೆಕ್ಕಿಸದೆ ಪಟ್ಟಣದ ಸ್ವಚ್ಛತೆಗೆ ಶ್ರಮವಹಿಸಿ ದುಡಿಯುತ್ತಾರೆ. ಪೌರ ಕಾರ್ಮಿಕರಿಗೆ ಕಾಲ, ಕಾಲಕ್ಕೆ ಆರೋಗ್ಯ ತಪಾಸಣೆ ನಡೆಸುವುದು ಸೂಕ್ತ. ಅವರ ಆರೋಗ್ಯಕ್ಕೆ ಪೂರಕವಾಗುವಂ ಇಂತಹ ಶಿಬಿರಗಳು ಹೆಚ್ಚು ನಡೆಯಬೇಕು ಎಂದರು.

ಪಟ್ಟಣ ಪಂಚಾಯಿತಿ ಸದಸ್ಯೆ ಜುಬೇದ ಮಾತನಾಡಿ, ಆರೋಗ್ಯವೇ ಭಾಗ್ಯ. ಕಾಯಿಲೆ ಬಂದು ಚಿಕಿತ್ಸೆ ಪಡೆಯುವುದಕ್ಕಿಂತ ಖಾಯಿಲೆ ಬರುವುದಕ್ಕೆ ಮುಂಚೆ ಜಾಗ್ರತೆ ವಹಿಸುವುದು ಸೂಕ್ತ ಎಂದರು.

ಸಭೆಯಲ್ಲಿ ಎನ್‌ಸಿಡಿ ವೈದ್ಯಾಧಿಕಾರಿ ಡಾ.ನಿಶಾಲ್‌, ಪಟ್ಟಣ ಪಂಚಾಯಿತಿ ಸದಸ್ಯರಾದ ಸುರೈಯಾಭಾನು, ಮುನಾವರ್ ಪಾಷಾ, ವಸೀಂ, ಮುಕಂದ, ಪಪಂ ಮುಖ್ಯಾಧಿಕಾರಿ ಆರ್‌.ವಿ.ಮಂಜುನಾಥ್‌, ಶುಶ್ರೂಷಕ ಅಧಿಕಾರಿ ಸೀಮಾ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಡೈಸಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಬೇಬಿ, ಪ್ರಯೋಗ ಶಾಲೆ ತಂತ್ರಜ್ಞೆ ಸುಜಾತ, ಹಿರಿಯ ಕ್ಷಯ ರೋಗ ಚಿಕಿತ್ಸಾ ಮೇಲ್ವಿಚಾರಕ ಪವನಕರ್, ಹಿರಿಯ ಆರೋಗ್ಯ ನಿರೀಕ್ಷಣಾದಿಕಾರಿ ಪಿ.ಪಿ.ಬೇಬಿ, ಆರೋಗ್ಯ ಇಲಾಖೆ ಸುರಕ್ಷಣಾಧಿಕಾರಿ ನಮಿತ , ಪಂಚಾಯಿತಿ ಸಮುದಾಯ ಸಂಘಟಕ ಲಕ್ಷ್ಮಣಗೌಡ, ಎನ್‌.ಸಿ.ಡಿ. ಸಮಾಲೋಚಕಿ ನಾಗಲತ ಇದ್ದರು.

40 ಜನರಿಗೆ ರಕ್ತದೊತ್ತಡ, ಮಧುಮೇಹ, ಕ್ಷಯ ರೋಗ ಮತ್ತು ಬಾಯಿ ಕ್ಯಾನ್ಸರ್‌ ಆರೋಗ್ಯ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ಇಂಡಿಯನ್‌ ಡೆಂಟಲ್‌ ಅಸೋಷಿಯೇಷನ್‌ ನಿಂದ ಎಲ್ಲಾ ಪೌರ ಕಾರ್ಮಿಕರಿಗೂ ಉಚಿತವಾಗಿ ಪೇಸ್ಟ್‌ ಹಾಗೂ ನಿಕೋಟೆಕ್ಸ್‌ ಚಿಂಗಂ ವಿತರಿಸಲಾಯಿತು.

Share this article