ವೃಕ್ಷಮಾತೆ ಡಾ ಸಾಲುಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮ

KannadaprabhaNewsNetwork |  
Published : Nov 17, 2026, 02:30 AM IST
ವೃಕ್ಷಮಾತೆ ಡಾ ಸಾಲುಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮ | Kannada Prabha

ಸಾರಾಂಶ

ಪರಿಸರ ಪ್ರಕೃತಿ ಸಂರಕ್ಷಣೆ ವಿಷಯದಲ್ಲಿ ಪ್ರತಿಯೊಬ್ಬರು ಅರಿವು ಮಾಹಿತಿ ಹೊಂದುವಂತಾಗಬೇಕು ಎಂದು ಕುಶಾಲನಗರ ಅರಣ್ಯ ಉಪವಲಯ ಅರಣ್ಯ ಅಧಿಕಾರಿ ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಕುಶಾಲನಗರ : ಪರಿಸರ ಪ್ರಕೃತಿ ಸಂರಕ್ಷಣೆ ವಿಷಯದಲ್ಲಿ ಪ್ರತಿಯೊಬ್ಬರು ಅರಿವು ಮಾಹಿತಿ ಹೊಂದುವಂತಾಗಬೇಕು ಎಂದು ಕುಶಾಲನಗರ ಅರಣ್ಯ ಉಪವಲಯ ಅರಣ್ಯ ಅಧಿಕಾರಿ ಉಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ಆವರಣದ ಬೃಹತ್ ಆಲದ ಮರದ ಕೆಳಗಡೆ ಅರಣ್ಯ ಇಲಾಖೆ ಮತ್ತು ಕಾವೇರಿ ಪರಿಸರ ರಕ್ಷಣಾ ಬಳಗದ ಆಶ್ರಯದಲ್ಲಿ ಶಾಲೆಯ ಇಕೋ ಕ್ಲಬ್ ಸಹಯೋಗದೊಂದಿಗೆ ನಡೆದ ವೃಕ್ಷಮಾತೆ ಡಾ ಸಾಲುಮರದ ತಿಮ್ಮಕ್ಕ ಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾವೇರಿ ಪರಿಸರ ರಕ್ಷಣಾ ಬಳಗದ ಸಂಚಾಲಕರಾದ ಎಂ ಎನ್ ಚಂದ್ರಮೋಹನ್ ಮಾತನಾಡಿ ಪ್ರಕೃತಿಯನ್ನು ಉಳಿಸಿದರೆ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ ಎಂದರು.

ನಿವೃತ್ತ ಯೋಧರು ಹಾಗೂ ಪರಿಸರ ರಕ್ಷಣಾ ಬಳಗದ ಪ್ರಮುಖರು ಕರುಂಬಯ್ಯ ಎನ್ ಎಸ್ ಅವರು ಮಾತನಾಡಿ ಪ್ರಕೃತಿ ಜೀವನದ ಒಂದು ಅವಿಭಾಜ್ಯ ಅಂಗವಾಗಿದ್ದು ಆ ಮೂಲಕ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲ ನಾಗರತ್ನ ಅವರು ಮಾತನಾಡಿ ನಗರೀಕರಣದ ದಾಳಿಗೆ ತುತ್ತಾದ ಸ್ವಾಭಾವಿಕ ಸಸ್ಯ ಸಂಕುಲ ಪ್ರತಿಕ್ಷಣವೂ ನಾಶವಾಗುತ್ತಿದೆ ಈ ಮೂಲಕ ಮನುಕುಲದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ.

ಸಾಲುಮರ ತಿಮ್ಮಕ್ಕ ಅವರಂತೆ ಪರಿಸರದ ಕಾಳಜಿ ಪ್ರತಿಯೊಬ್ಬರದ್ದಾಗಬೇಕಾಗಿದೆ. ಪ್ರಕೃತಿಯಲ್ಲಿ ಕೊಡು-ಕೊಳ್ಳುವ ನೀತಿಯನ್ನು ಪಾಲಿಸಬೇಕಾಗಿದೆ ಎಂದರು.

ಕಾರ್ಯಕ್ರಮಕ್ಕೆ ಮುನ್ನ ಶಾಲಾ ಆವರಣದಲ್ಲಿ ತಿಮ್ಮಕ್ಕ ಅವರ ಸ್ಮರಣೆ ಸಲುವಾಗಿ ಗಿಡವೊಂದನ್ನು ನೀಡಲಾಯಿತು.

ಶಾಲಾ ವಿದ್ಯಾರ್ಥಿನಿಯರಾದ ಪೂರ್ವಿ ಮತ್ತು ದುರ್ಗಾಪರಮೇಶ್ವರಿ ಅವರು ಪರಿಸರ ಸಂರಕ್ಷಣೆ ಬಗ್ಗೆ ತಮ್ಮ ಅಭಿಪ್ರಾಯ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಾಲು ಮರದ ತಿಮ್ಮಕ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಶಿಕ್ಷಕರಾದ ಸದಾಶಿವ ಎಸ್ ಪಲ್ಯದ್, ಎ ಸಿ ಮಂಜುನಾಥ್, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮ ನಿರ್ವಹಣೆಯನ್ನು ನಿವೃತ್ತ ಶಿಕ್ಷಕ ಊ.ರ ನಾಗೇಶ್, ಕಾವೇರಿ ಪರಿಸರ ಸಂರಕ್ಷಣಾ ಬಳಗದ ವನಿತಾ ಚಂದ್ರಮೋಹನ್ ಸ್ವಾಗತ ಹಿರಿಯ ಪತ್ರಕರ್ತ ಸಬಲಂ ಭೋಜಣ್ಣ ರೆಡ್ಡಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾರ್ವಜನಿಕರ ಮನವಿಗೆ ಸಕಾಲದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸಬೇಕು: ಡಾ.ಮಂತರ್ ಗೌಡ
ಗಾಳಿಬೀಡು ರಸ್ತೆ ಕಾಮಗಾರಿ ವಿಳಂಬ: ಗ್ರಾಮಸ್ಥರ ಪ್ರತಿಭಟನೆ