ಕನ್ನಡಪ್ರಭ ವಾರ್ತೆ ನಾಪೋಕ್ಲು ಇಲ್ಲಿಗೆ ಸಮೀಪದ ಚೆರಿಯ ಪರಂಬುವಿನಲ್ಲಿ ಅಂತಿಮ ವಿಶ್ರಾಂತಿ ಪಡೆಯುತ್ತಿರುವ ಪವಾಡ ಪುರುಷರ ಹೆಸರಿನಲ್ಲಿ
ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ಚೆರಿಯಪರ೦ಬು ಉರೂಸ್ ಆಚರಣೆಗೆ ಶುಕ್ರವಾರ ಚಾಲನೆ ನೀಡಲಾಯಿತು. ಶುಕ್ರವಾರ ಜುಮ ನಮಾಜ್ ಬಳಿಕ ಬಳಿಕ ದರ್ಗಾ ತೆರಳಿದ ಕೊಡಗಿನ ಖಾಝಿ ಅಬ್ದುಲ್ಲಾ ಫೈಝಿ ನೂತನವಾಗಿ ದರ್ಗಾ ಆವರಣದಲ್ಲಿ ಅಳವಡಿಸಲಾದ ಇಂಟರ್‌ಲಾಕ್ ಲೋಕಾರ್ಪಣೆಗೊಳಿಸಿದರು.ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸಿ ರಿಫಾಹಿಯ ದಫ್ ಸಮಿತಿಯ ದಫ್ ಪ್ರದರ್ಶನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಜುಬೇರ್ ಧ್ವಜಾರೋಹಣ ನೆರವೇರಿಸಿದರು. ಜಮಾಯತ್ ಕಾರ್ಯದರ್ಶಿ ಪರವಂಡ ಸಿರಾಜ್ ಮಾತನಾಡಿ, ಪ್ರತಿ ವರ್ಷದಂತೆ ಚೆರಿಯಪರಂಬು ಐದು ದಿನಗಳ ಕಾಲ ವಿಜೃಂಭಣೆಯಿಂದ ವಿವಿಧ ಧಾರ್ಮಿಕ ಹಾಗೂ ಸರ್ವ ಧರ್ಮ ಸಮ್ಮೇಳನದೊಂದಿಗೆ ಕಾರ್ಯಕ್ರಮ ಜರುಗಲಿದ್ದು ಎಲ್ಲ ಭಕ್ತಾದಿಗಳು ಅಧಿಕ ಸಂಖ್ಯಾತ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ಸಿಗೊಳಿಸಬೇಕಾಗಿ ಕೋರಿಕೊಂಡರು.
ರಿಫ್ಯಾಯಿಯ ದಫ್ ಖಲೀಪಾ ಹುಸೈನಾರ್, ಜಮಯತ್ ಖತೀಬ್ ರಹ್ಮನಿಯ, ನಾಪೋಕ್ಲು ಜಮಾಯತ್ ಅಧ್ಯಕ್ಷ ಎಂ.ಎಚ್. ಅಬ್ದುಲ್ ರೆಹಮಾನ್, ಬಶೀರ್ ಮತ್ತಿತರರು ಹಾಜರಿದ್ದರು.ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್: ಸರ್ವಧರ್ಮ ಸಂಕೇತದ ಇತಿಹಾಸ ಪ್ರಸಿದ್ಧ ಆರ್ಕಾಡ್ ಪಟ್ಟಾಣ್ ಬಾಬಾ ಶಾವಲಿ ಉರೂಸ್ ನೇರ್ಚೆ ಫೆ.9ರಿಂದ 12ರ ವರೆಗೆ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಪಾಲಿಬೆಟ್ಟ ಮುಸ್ಲಿಂ ಜಮಾಅತ್ ಅಧ್ಯಕ್ಷ ಪಿ.ಕೆ ಇಸ್ಮಾಯಿಲ್ ಹಾಜಿ ತಿಳಿಸಿದ್ದಾರೆ.
ಫೆ.10ರಂದು ರಾತ್ರಿ ಧಾರ್ಮಿಕ ಪಂಡಿತ ಶಾಕಿರ್ ದಾರಿಮಿ ಕೇರಳ ಮತ ಪ್ರಭಾಷಣ ಮಾಡಲಿದ್ದಾರೆ. ಫೆ.11ರಂದು ರಾತ್ರಿ ಲುಖುಮಾನುಲ್ ಹಕೀಮ್ ಸಖಾಫಿ ಅವರಿಂದ ಮತ ಪ್ರವಚನ ಹಾಗೂ ಫೆ.12ರಂದು ಸಂಜೆ 7 ಗಂಟೆಗೆ ಸರ್ವಧರ್ಮ ಸಮ್ಮೇಳನ ನಡೆಯಲಿದೆ.ಕನ್ನಡ ಮಠದ ಶ್ರೀ ಚನ್ನಬಸವ ದೇಸೀ ಕೇಂದ್ರ ಸ್ವಾಮಿ, ಪಾಲಿಬೆಟ್ಟ ಲೂರ್ಡ್ಸ್ ಚರ್ಚ್ ಫಾ.ಶಶಿ ಕುಮಾರ್, ಶೈಖುನ ಎಂ.ಎಂ. ಅಬ್ದುಲ್ಲ ಫೈಜಿ ಸಮಸ್ತ ಕೇಂದ್ರ ಮುಶಾವರ ಸದಸ್ಯರು, ಸಮೀರ್ ಎ.ಎಚ್. ಜಂಟಿ ಕಾರ್ಯದರ್ಶಿ ಜುಮಾ ಮಸ್ಜಿದ್ ಪಾಲಿಬೆಟ್ಟ, ಅಶ್ರಫ್ ಅಪ್‌ಸನಿ ಪ್ರಧಾನ ಕಾರ್ಯದರ್ಶಿ, ಅನ್ವಾರಲ್ ಹುದಾ ವಿರಾಜಪೇಟೆ, ಶಾಫಿ ಸಹದಿ ಮಾಜಿ ವಕ್ಫ್ ಬೋರ್ಡ್ ಅಧ್ಯಕ್ಷರು, ಶಾಸಕ ಎ.ಎಸ್. ಪೊನ್ನಣ್ಣ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಟಾಟಾ ಕಾಫಿ ಸಂಸ್ಥೆ ಉಪಾಧ್ಯಕ್ಷ ಎಂ.ಬಿ. ಗಣಪತಿ, ಪಾಲಿಬೆಟ್ಟ ಕಾಯಂಬೆಟ್ಟ ಎಸ್ಟೇಟ್ ಮಾಲೀಕ ಕಾರ್ತಿ ಪಿ. ಚಿದಂಬರಂ ಸೇರಿದಂತೆ ಧಾರ್ಮಿಕ ಪಂಡಿತರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.ಫೆ.12ರಂದು ಸಂಜೆ 6.30ಗಂಟೆಯಿಂದ ಎಲ್ಲ ಭಕ್ತರಿಗೆ ಅನ್ನ ಸಂತರ್ಪಣಾ ಕಾರ್ಯ ನಡೆಯಲಿದೆ.