ರಾಂಪುರ ಗ್ರಾಮದಲ್ಲಿ ಘಟನೆ । ಜಮೀನಿಗೆ ಅತಿಕ್ರಮಿಸಿದ ಕಿಡಿಗೇಡಿಗಳಿಂದ ಕೃತ್ಯ
ಕ್ಷುಲ್ಲಕ ಕಾರಣಕ್ಕೆ ಕಿಡಿಗೇಡಿಗಳ ಗುಂಪು ಕಟಾವಿಗೆ ಬಂದಿದ್ದ ಕಬ್ಬನ್ನು ರೋಟರಿ ಟ್ರ್ಯಾಕ್ಟರ್ ಗಳ ಮೂಲಕ ನಾಶ ಮಾಡಿರುವ ಘಟನೆ ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಎಚ್. ರಮೇಶ್ ರ ಪತ್ನಿ ಎಂ.ಎನ್. ಕವಿತಾರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಕಬ್ಬನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ.ಗ್ರಾಮದ ಸರ್ವೇ ನಂ. 85/13, 85/5ರಲ್ಲಿನ 13 ಕುಂಟೆ ಪ್ರದೇಶದಲ್ಲಿ ಬೆಳೆದಿದ್ದ ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯನ್ನು ತಾಲೂಕಿನ ಕೋಣಸಾಲೆ ಗ್ರಾಮದ ಕೆ. ಬೋರಯ್ಯರ ಪುತ್ರ ಕೆ.ಬಿ. ಸಿದ್ದು ಮತ್ತು ಕಿಡಿಗೇಡಿಗಳ ಗುಂಪು ಏಕಾಏಕಿ ಎರಡು ರೋಟರಿ ಟ್ರಾಕ್ಟರ್ ಗಳ ಮೂಲಕ ಜಮೀನಿಗೆ ಅತಿಕ್ರಮಣ ಪ್ರವೇಶ ಮಾಡಿ ನಾಶ ಮಾಡಿದ್ದಾರೆ. ಕಬ್ಬು ಕಟಾವು ಮಾಡಿದ್ದರೆ 40 ಟನ್ ಇಳುವರಿ ಸಿಗುತಿತ್ತು. 80 ಸಾವಿರ ಆದಾಯ ಬರುತ್ತಿತ್ತು. ಅದು ಈಗ ನಷ್ಟವಾಗಿದೆ ಎನ್ನಲಾಗಿದೆ.
ಈಗ ಕ್ಯಾತೆ ತೆಗೆದು ಕಟಾವಿಗೆ ಬಂದಿದ್ದ ಕಬ್ಬಿನ ಬೆಳೆಯನ್ನು ನಾಶ ಮಾಡಿದ್ದಾರೆ. ಕಂದಾಯ ದಾಖಲೆಗಳ ಪ್ರಕಾರ ನಾವು ಭೂಮಿ ಖರೀದಿ ಮಾಡಿದ್ದು, ನಮಗೆ ಸರ್ಕಾರ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ನ್ಯಾಯ ದೊರಕಿಸಿ ಕೊಡಬೇಕು. ಜೊತೆಗೆ ನಮ್ಮ ಬೆಳೆ ಹಾಳುಮಾಡಿ ನಷ್ಟ ಉಂಟು ಮಾಡಿರುವುದರಿಂದ ಕೊಣಸಾಲೆ ಗ್ರಾಮದ ಬೋರಯ್ಯ ಅವರ ಪುತ್ರ ಕೆ.ಬಿ. ಸಿದ್ದು ಹಾಗೂ 20 ಜನ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಬೆಸಗರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದರು.
------------
ಕಿಡಿಗೇಡಿಗಳಿಂದ ನಾಶವಾಗಿರುವ ಕಬ್ಬಿನ ಬೆಳೆಯನ್ನು ತೋರಿಸುತ್ತಿರುವ ರೈತ ಮಹಿಳೆ ಎಂ.ಎನ್.ಕವಿತಾ .