ಸರ್ಕಾರಿ ಮಹಿಳಾ ಪದವಿ ಕಾಲೇಜಿನಲ್ಲಿದೆ ಹೈಟೆಕ್‌ ಗ್ರಂಥಾಲಯ.

KannadaprabhaNewsNetwork |  
Published : Jul 07, 2025, 12:17 AM IST
50 | Kannada Prabha

ಸಾರಾಂಶ

2025-26 ನೇ ಶೈಕ್ಷಣಿಕ ಸಾಲಿನಲ್ಲಿ ಸುಮಾರು 1200 ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರುಗಳು ಇಲ್ಲಿ ಅಧ್ಯಯನ

ಕನ್ನಡಪ್ರಭ ವಾರ್ತೆ ಹುಣಸೂರು

ಶ್ರೀಗಂಧದಬೀಡು, ತೇಗದನಾಡು, ಎಂದೇ ಪ್ರಸಿದ್ಧವಾಗಿರುವ ಹುಣಸೂರು ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಸರುವಾಸಿಯಾದ ಪಟ್ಟಣವಾಗಿದೆ. ಸಾಹಿತ್ಯದ ಹಸಿವನ್ನು ನೀಗಿಸುವ ನೆಲೆದ ಸೊಗಡಿನ ಜೊತೆಗೆ ಜ್ಞಾನದ ಹಸಿವನ್ನು ನೀಗಿಸುವ ಉದ್ದೇಶದಿಂದ ಇಲ್ಲಿರುವ ಸರ್ಕಾರಿ ಮಹಿಳಾ ಕಾಲೇಜು ವಿಶಿಷ್ಟ ಬಗೆಯ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಸೌಲಭ್ಯವನ್ನು ಹೊಂದಿದೆ. ಅನೇಕ ಹಿರಿಯರ ಶ್ರಮದ ಫಲವಾಗಿ ಸ್ಥಾಪನೆಯಾಗಿರುವ ಗ್ರಂಥಾಲಯ ವಿಭಾಗವು ವಿದ್ಯಾರ್ಥಿಗಳ ಏಳಿಗೆಗಾಗಿ ನಿತ್ಯ ಕ್ರಿಯಾಶೀಲವಾಗಿದ್ದು ಉಪಯುಕ್ತ ಹಾಗೂ ಮಾದರಿಯಾದ ಕೆಲಸ ಕಾರ್ಯಗಳನ್ನು ಮಾಡುತ್ತಿದೆ.

ಕರ್ತವ್ಯದಲ್ಲಿ ಬದ್ದತೆ ಜೊತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂಬ ತುಡಿತ ಇರುವ ಪ್ರಾಂಶುಪಾಲರು, ಉಪನ್ಯಾಸಕರು, ಗ್ರಂಥಪಾಲಕರು ಇದ್ದರೆ ಏನೆಲ್ಲ ಮಾಡಬಹುದು ಎಂಬುದಕ್ಕೆ ಈ ಗ್ರಂಥಾಲಯ ಅತ್ಯುತ್ತಮ ನಿದರ್ಶನ.

ರಾಜ್ಯದ ಕೆಲವು ತಾಲೂಕು ಕೇಂದ್ರಗಳಲ್ಲಿ, ಸ್ಥಾಪನೆಗೊಂಡಿರುವ ಮಹಿಳಾ ಕಾಲೇಜುಗಳ ಪೈಕಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ, ರಾಜ್ಯ ಮಟ್ಟದಲ್ಲಿಯೇ ಈ ಕಾಲೇಜ ಉತ್ತಮ ಸ್ಥಾನದಲ್ಲಿದೆ.. ಇದಕ್ಕೆ ಪೂರಕವೆಂಬಂತೆ 2025-26 ನೇ ಶೈಕ್ಷಣಿಕ ಸಾಲಿನಲ್ಲಿ ಸುಮಾರು 1200 ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರುಗಳು ಇಲ್ಲಿ ಅಧ್ಯಯನ ಮಾಡುತ್ತಿದ್ದಾರೆ.

ಗ್ರಂಥಾಲಯದಲ್ಲಿ 18.900 ಪುಸ್ತಕಗಳಿವೆ.

ಅತ್ಯುತ್ತಮ ಪುಸ್ತಕಗಳು ಉತ್ತಮ ಸಂಗಾತಿಗಳು ಎಂಬ ಪಾರ್ಕರ್ ಹೇಳಿಕೆಯಂತೆ ಕಾಲೇಜಿನ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಶೇಖರಿಸಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವಂತೆ ವಿಭಾಗವಾರು ನಾಮಫಲಕವನ್ನು ಅಂಟಿಸಿ, ಪುಸ್ತಕಗಳನ್ನು ಹುಡುಕಲ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಇ-ಗ್ರಂಥಾಲಯದ ಮೂಲಕ ಎರವಲು ವ್ಯವಸ್ಥೆ ಕಲ್ಪಿಸಿದ್ದು, ಅದರ ಮಾಹಿತಿ ಆಪ್‌ ಮೂಲಕ ಪಡೆದುಕೊಳ್ಳಬಹುದು. ಎಸ್‌ಎಂಎಸ್‌ ‌ಮೂಲಕ ಪಡೆದಿರುವ ಪುಸ್ತಕದ ಮಾಹಿತಿ ದೊರಕಲಿದ್ದು, ಇ-ಮೇಲ್‌ ಕೂಡ ರವಾನೆಯಾಗುತ್ತದೆ.

ಪ್ರತಿಯೊಂದು ಪುಸ್ತಕ್ಕಕ್ಕು ತನ್ನದೇಆದ ಓದುಗನಿರುತ್ತಾನೆ, ಹಾಗೂ ಪ್ರತಿಯೊಬ್ಬ ಓದುಗನಿಗೂ ತನ್ನದೇ ಆದ ಪುಸ್ತಕವಿರುತ್ತದೆ, ಎಂಬ ಗ್ರಂಥಾಲಯ ಪಿತಾಮಹಾ ಎಚ್‌.ಆರ್‌. ರಂಗನಾಥನ್‌ ಅವರ ಸೂತ್ರವಾಣಿಯಂತೆ ಪುಸ್ತಕಗಳು, ನಿಯತಕಾಲಿಕೆಗಳು, ಮಾಸಪತ್ರಿಕೆಗಳು ಹಾಗೂ ದಿನಪತ್ರಿಕೆಗಳನ್ನು ಓದಲು ಉತ್ತಮವಾದ ವಾಚನಾಲಯದ ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ಅವರ ಅವಶ್ಯಕತೆಗನುಗುಣವಾಗಿ ಪುಸ್ತಕಗಳನ್ನು ಖರೀದಿಸಲಾಗಿದ್ದು, ಬುಕ್ ಬ್ಯಾಂಕ್ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ವಿದ್ಯಾರ್ಥಿನಿಯರಿಗೆ ಸೌಲಭ್ಯ ಕಲ್ಪಿಸಲಾಗಿದೆ.ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಲು ಗ್ರಂಥಾಲಯದಲ್ಲಿ ಪ್ರೊಜೆಕ್ಟರ್‌ ಅಳವಡಿಸಿದ್ದು ಲೈವ್‌ ಬಜೆಟ್‌ಸೆಷನ್ಸ್‌, ಬಯೋಗ್ರಫಿ ಸಿನಿಮಾಗಳು ಬಿತ್ತರಿಲಾಗುತ್ತಿದ್ದು,ಶೈಕ್ಷಣಿಕ ಚಟುವಟಿಕೆಗೆ ಸಂಬಂಧಿಸಿದ ಕಥೆ, ಕವನ ವಾಚನ, ಗೋಡೆಬರಹ ಬರೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಕಾಲೇಜು ಅಭಿವೃದ್ಧಿಯ ಅದ್ಯಕ್ಷರಾದ ಶಾಸಕ ಜಿ.ಡಿ. ಹರೀಶ್‌ಗೌಡ ಹಾಗೂ ಸದಸ್ಯರು ಕ್ರಿಯಾಶೀಲವಾಗಿದ್ದಾರೆ, ಗ್ರಂಥಾಲಯವು ಸ್ವಂತ ಕಟ್ಟಡ ಹೊಂದಿದ್ದು ಓದುಗರಿಗೆ ಯಶಸ್ಸಿನ ದಾರಿದೀ ವಾಗಿದೆ. ವಿದ್ಯಾರ್ಥಿನಿಯರುಗಳಿಗೆ ಆಧುನಿಕ ತಂತ್ರಜ್ಙಾನವನ್ನು ಬಳಸಿ ಸಿ.ಸಿ. ಟಿವಿ, ಬಾರ್‌ ಕೋಡಿಂಗ್‌ನೊಂದಿಗೆ ಸರಳೀಕರಿಸಿ ಜ್ಙಾನದೇಗುಲವೆಂಬ ಗ್ರಂಥಾಲಯಕ್ಕೆ ,ಮುಕ್ತವಾದ ಅವಕಾಶವನ್ನು ಕಲ್ಪ್ಪಿಸಿ ಅವರ ವ್ಯಾಸಂಗಕ್ಕೆ ಸಹಕಾರಿಯಾಗಿದೆ.

ವಿದ್ಯಾರ್ಥಿಗಳು ಏಕಕಾಲಕ್ಕೆ ಸಂಪರ್ಕಿಸಲು ಟೆಲಿಗ್ರಾಂ,ವಾಟ್ಸ್‌ಅಪ್‌ ಖಾತೆ ತೆರೆದು ಮಾಹಿತಿ ನೀಡಲಾಗುತ್ತಿದೆ. ಎಲ್.ಇ.ಡಿ ಪರದೆ ಅಳವಡಿಸಲಾಗಿದ್ದು. ದಿನದ ಮಾಹಿತಿ ಹಾಗೂ ವಿಶೇಷಸೂಚನೆಗಳನ್ನು ಬಿತ್ತರಿಸಲಾಗುತ್ತದೆ. ಗ್ರಂಥಾಲಯದಲ್ಲಿ ವೈಪೈ ವ್ಯವಸ್ಥೆ ಹಾಗೂ ಕಂಪೂಟರ್‌ಗಳನ್ನು ಅಳವಡಿಸಲಾಗಿದೆ.ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವ ಸಲುವಾಗಿ ಗ್ರಂಥಪಾಲಕ ಡಾ.ಎನ್‌. ಕರುಣಾಕರ್.ಅವರು ಒಂದುಶೈಕ್ಷಣಿಕ ಅವಧಿಯಲ್ಲಿ ಅತಿ ಹೆಚ್ಚು ಪುಸ್ತಕಗಳನ್ನು ಪಡೆದು ಅಧ್ಯಯನ ಮಾಡುವ ಹಾಗೂ ಗ್ರಂಥಾಲಯದಲ್ಲಿ ಹೆಚ್ಚುಸಮಯ ಕಳೆಯುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತಾರೆ. ಗ್ರಂಥಾಲಯದ ಕಂಪ್ಯೂಟರ್‌ನಲ್ಲಿ ಯಾವ ವಿದ್ಯಾರ್ಥಿ ಎಷ್ಟು ಸಮಯ ಕಳೆದರು ಎಂಬ ದತ್ತಾಂಶ ಲಭ್ಯವಾಗಲಿದ್ದು, ಅದನ್ನು ಆಧರಿಸಿ ಬಹುಮಾನ ನೀಡುತ್ತಾರೆ, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರಿಂದ ಪುಸ್ತಕಗಳನ್ನು ದೇಣಿಗೆಯಾಗಿ ಪಡೆದು,ಗ್ರಂಥಾಲಯದ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಗ್ರಂಥಾಲಯದ ವತಿಯಿಂದ ಪುಸ್ತಕ ಪ್ರದರ್ಶನ ,ಪ್ರಬಂದ ಸ್ಪರ್ಧೆ, ಬುಕ್‌ ಟಾಕ್‌, ಸೆಮಿನಾರ್, ವೆಬಿನಾರ್‌ ಹಾಗೂ ಹಲವಾರು ಕಾರ್ಯಕ್ರಮಗಳನ್ನು ಸಂಪನ್ಮೂಲವ್ಯಕ್ತಿಗಳಿಂದ ನೀಡುವುದರ ಮೂಲಕ ವಿದ್ಯಾರ್ಥಿನಿಯರಿಗೆ ಗ್ರಂಥಾಲಯ ನೆಚ್ಚಿನ ತಾಣವಾಗುವಂತೆ ಮಾಡಿದ್ದಾರೆ.-- ಬಾಕ್ಸ್1-- --ಜ್ಞಾನದಾಸೋಹದ ಅಭಿಲಾಷೆ--ಈ ಕಾಲೇಜಿಗೆ ಸುತ್ತಲಿನ ತಾಲೂಕುಗಳ ಬಡವಿದ್ಯಾರ್ಥಿಗಳು ಬರುತ್ತಾರೆ ಅವರಿಗೆ ಜ್ಞಾನದಾಸೋಹ ನೀಡಬೇಕು ಎಂಬ ಕಾಲೇಜು ಆಡಳಿತ ಮಂಡಳಿಯ ಉತ್ಕಟ ಅಭಿಲಾಷೆಯು ಇಲ್ಲಿನ ಗ್ರಂಥಾಲಯವನ್ನು ಸರ್ಕಾರಿ ಕಾಲೇಜುಗಳಲ್ಲಿನ ಅತ್ಯುತ್ತಮ ಗ್ರಂಥಾಲಯವಾಗಿ ಮಾರ್ಪಡಿಸಲು ಕಾರಣವಾಗಿದೆ. ಕಾಲೇಜಿನಲ್ಲಿ ಈ ಹಿಂದೆ ಕಾರ್ಯನಿರ್ವಹಿಸಿದ ಪ್ರಾಂಶುಪಾಲರ ಮಾರ್ಗದರ್ಶನ ಹಾಗೂ ಹಾಲಿ ಪ್ರಾಂಶುಪಾಲ ಡಾ.ಎಸ್‌. ಮಂಜು. ಹಾಗೂ ಗ್ರಂಥಪಾಲಕ ಡಾ.ಎನ್‌. ಕರುಣಾಕರ್ ಅವರ ಸಮನ್ವಯದ ಕೆಲಸದಿಂದಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ಪಡೆಯುವ ಸಂದರ್ಭದಲ್ಲಿ ನೀಡುವ ಗುರುತಿನಚೀಟಿಯಲ್ಲಿ ಕ್ಯೂಆರ್‌ ಕೋಡ್‌ ಅಳವಡಿಸಲಾಗಿದೆ.ಆ ಕೋಡ್‌ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಗ್ರಂಥಾಲಯದ ಕೀಲಿಕೈ ಇದ್ದಂತೆ. ಅದನ್ನು ಸ್ಕ್ಯಾನ್‌ ಮಾಡಿದರೆ ಕಾಲೇಜಿನ ವಾರ್ಷಿಕ ಪರೀಕ್ಷೆಯ ಹಳೆಯ ಪ್ರಶ್ನೆಪತ್ರಿಕೆಗಳು ಹಾಗೂ ಇ-ಬುಕ್, ಇ-ನ್ಯೂಸ್‌ ಪೇಪರ್‌,ಡಿಜಿಟಲ್‌ ಗ್ರಂಥಾಲಯಕ್ಕೆ ಲಾಗಿನ್‌ ಮಾಡಬಹುದು. ಯುಜಿಸಿಯ ಒಂದು ದೇಶ, ಒಂದು ಚಂದದಾರಿಕೆ ಮೂಲಕ ಡೇಟಾ ಬೇಸ್‌ ಸೌಲಭ್ಯ ಕಲ್ಪಿಸಲಾಗಿದೆ.

PREV