ಕನ್ನಡಪ್ರಭ ವಾರ್ತೆ ಮಂಡ್ಯ
ವಿವಿಧ ಹಿಂದುಳಿದ ಸಮಾಜಗಳು ಮಂಡ್ಯದ ಕನಕ ಭವನದಲ್ಲಿ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಅಧಿವೇಶನವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ಜಾತಿ-ವರ್ಗದವರಿಗೂ ಕಾಂಗ್ರೆಸ್ ಸಾಮಾಜಿಕ ನ್ಯಾಯವನ್ನು ಕಲ್ಪಿಸಿದ್ದು, ಅತಿ ಹಿಂದುಳಿದವರ ಕಲ್ಯಾಣಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದರು.
ಸಂವಿಧಾನಬದ್ಧವಾಗಿ ಹಿಂದುಳಿದವರಿಗೆ ಸಿಗುತ್ತಿರುವ ಮೀಸಲಾತಿ ಮತ್ತಿತರೆ ಸವಲತ್ತುಗಳನ್ನು ಕಸಿದುಕೊಳ್ಳಲು ಬಿಜೆಪಿ ಸಂಚು ರೂಪಿಸುತ್ತಿದೆ. ಇದಕ್ಕೆ ಜೆಡಿಎಸ್ ಕೂಡಾ ಬೆಂಬಲ ನೀಡುತ್ತಿವೆ. ಈ ಎರಡೂ ಪಕ್ಷಗಳು ಹಿಂದುಳಿದವರ ವಿರೋಧಿಗಳಾಗಿವೆ ಎಂದು ದೂರಿದರು.ಮಂಡ್ಯ ಜಿಲ್ಲೆಯ ರಾಜಕೀಯ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ಸಜ್ಜುಗೊಳಿಸಿರುವುದು ವಿಶೇಷವಾಗಿದೆ. ಎಲ್ಲ ಸಮಾಜಗಳು ಒಗ್ಗೂಡಿ ಬೃಹತ್ ಶಕ್ತಿಯಾಗಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವುದು ನಮಗೆ ಬಲ ಬಂದಂತಾಗಿದೆ. ಅತೀ ಹಿಂದುಳಿದ ಸಮಾಜಗಳು ಹಲವು ಸಮಸ್ಯೆ-ಸವಾಲುಗಳನ್ನು ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಅಧಿಕಾರಿಗಳೊಡನೆ ಮಾಸಿಕ ಸಭೆ ನಡೆಸಿ ಪರಿಹಾರ ಸೂಚಿಸಲಾಗುವುದು. ಅಲ್ಲದೆ ಸಮಾಜಗಳ ಅಭಿವೃದ್ಧಿಗೆ ಅಗತ್ಯ ನಿವೇಶನ ಕಲ್ಪಿಸುವ ಪ್ರಯತ್ನ ಮಾಡಲಾಗುವುದು ಎಂದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ್, ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ಕೆ.ಎಚ್.ನಾಗರಾಜ್, ಜಿ.ಪಂ. ಮಾಜಿ ಸದಸ್ಯ ಯೋಗೇಶ್, ಜಿ.ಪಂ. ಮಾಜಿ ಅಧ್ಯಕ್ಷ ಬಿ.ಲಿಂಗಯ್ಯ, ವಿವಿಧ ಹಿಂದುಳಿದ ಸಮಾಜದ ಅಧ್ಯಕ್ಷರಾದ ಹೆಚ್.ಪಿ.ಸತೀಶ್ , ಎಂ.ಕೃಷ್ಣ, ಡಿ.ರಮೇಶ್, ಪುಟ್ಟಸ್ವಾಮಿ ಸುರೇಶ್, ಪ್ರತಾಪ್, ಕನ್ನಲಿ ದೇವರಾಜ್, ಸಂತೆಕಸಲಗೆರೆ ಬಸವರಾಜ್, ಗೋವಿಂದಸ್ವಾಮಿ, ನಾಗರತ್ನ, ಗಾಯತ್ರಿ, ರಾಜಣ್ಣ, ಶಶಿಕುಮಾರ್ ಮತ್ತಿತರರು ಹಾಜರಿದ್ದರು.