ರಾಮನಗರ: ನಾನು ಸಿಎಂ ಅಲ್ಲ, ನಿಮ್ಮ ಸೇವಕ. ಇನ್ನೂ ಒಂದೂವರೆ ವರ್ಷದಲ್ಲಿ ನೀವು ಮೆಚ್ಚುವಂತಹ ಕೆಲಸ ಮಾಡುತ್ತೇನೆ.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ಫುಡ್ ಸ್ಟ್ರೀಟ್ , ಕ್ಲಾಕ್ ಟವರ್ ಮತ್ತು ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಜಿಲ್ಲೆಗೆ ಶಿವಕುಮಾರ್ ಏನು ಮಾಡಿದ್ದಾನೆ ಏನ್ನುವ ಪ್ರಶ್ನೆ ಕೆಲವರಿಗಿದೆ. ಜೀವನದಲ್ಲಿ ನಾವು ಒಳ್ಳೆಯದು ಮತ್ತು ಕೆಟ್ಟದನ್ನು ಮಾಡಿದ್ದು ಇಬ್ಬರಿಗೆ ಮಾತ್ರ ಗೊತ್ತಿರುತ್ತದೆ. ಒಂದು ಪರಮಾತ್ಮನಿಗೆ, ಮತ್ತೊಂದು ಅಂತರಾತ್ಮಕ್ಕೆ. ಕಪಟ ಇರುವವರಿಗೆ ಅದು ಗೊತ್ತಾಗಲ್ಲ. ನಾನು ಈ ಜಿಲ್ಲೆಯ ಮಗನಾಗಿ, ಸೇವಕನಾಗಿ ಇದ್ದೇನೆ. ಜಿಲ್ಲೆಯ ನಾಲ್ವರನ್ನು ಆಯ್ಕೆ ಮಾಡಿ ಕಳಿಸಿದ್ದೀರಿ.ಈ ಜಿಲ್ಲೆಯಲ್ಲಿ ಐದು ಜನ ಸಿಎಂ ಆಗಿ ಹೋಗಿದ್ದಾರೆ. ಆದರೆ ಏನು ಮಾಡಿದ್ದಾರೆ ಅನ್ನೋದು ಮುಖ್ಯ.
ನಾವೆಲ್ಲ ಬೆಂಗಳೂರು ಜಿಲ್ಲೆಯವರು. ಬೆಂಗಳೂರು ದಕ್ಷಿಣ ಎಂಬ ಹೆಸರು ಬದಲಾವಣೆ ಮಾಡಿದ್ದೇನೆ.
ಕನಕಪುರ, ಚನ್ನಪಟ್ಟಣದಲ್ಲಿ ಕೆಎಂಎಫ್ ಘಟಕ ಇದೆ. ನೀರಾವರಿ ಯೋಜನೆಗಳು ಸಾಕಾರಗೊಂಡಿವೆ. ನಾವು ಜಿಲ್ಲಾಸ್ಪತ್ರೆಗೆ ಹೊಸ ಕಟ್ಟಡ ಕಟ್ಟಿಸಿದೇವೊ. ಈಗ ರಾಮನಗರ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ಆಗುತ್ತಿದೆ. ಚನ್ನಪಟ್ಟಣ, ಹಾರೋಹಳ್ಳಿಯಲ್ಲಿ ಮೆಡಿಕಲ್ ಕಾಲೇಜು ಇದೆ. ದೇಶದಲ್ಲೇ ಒಂದು ಜಿಲ್ಲೆಗೆ ನಾಲ್ಕು ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇದೆ ಅಂದರೆ ಅದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಮಾತ್ರ. ನಮ್ಮ ಜಿಲ್ಲೆಯಲ್ಲಿ 20 ಕೆಪಿಎಸ್ ಶಾಲೆ ನಿರ್ಮಾಣ ಆಗಿದೆ ಎಂದು ತಿಳಿಸಿದರು.
ಮೇಕೆದಾಟಿಗಾಗಿ ನಾವೆಲ್ಲರು ಪಾದಯಾತ್ರೆ ಮಾಡಿದೇವು. ಆ ಯೋಜನೆಗೆ ಸುಪ್ರೀಂ ಕೋರ್ಟ್ ಅನುಮತಿ ನೀಡಿರುವುದು ಬಹಳ ಸಂತೋಷ ಆಗುತ್ತಿದೆ. ರಾಮನಗರದಲ್ಲಿ ಈ ಬಗ್ಗೆ ಕಚೇರಿ ತೆಗೆದು ಕೆಲಸ ಆರಂಭಿಸುತ್ತೇವೆ ಎಂದು ತಿಳಿಸಿದರು.
ರೈತರಿಗೆ ಹಾಲಿನ ದರ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜು ನೇತೃತ್ವದಲ್ಲಿ ಹಾಲು ಉತ್ಪಾದಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅರಿಗೆ ಕೃಷ್ಣನ ವಿಗ್ರಹ ನೀಡಿ ಹಾರ ಹಾಕಿ ಸನ್ಮಾನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ, ಶಾಸಕ ಸಿ.ಪಿ.ಯೋಗೇಶ್ವರ್, ಎಂಎ್ಲಸಿ ಎಸ್. ರವಿ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡದ ಭಾಷೆ ಉಳಿಸಲು ನಾವೆಲ್ಲರು ಹೋರಾಟ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ರಾಷ್ಟ್ರ ಧ್ವಜದ ಪಕ್ಕ ನಾಡ ಧ್ವಜ ಹಾರಿಸಲು ತೀರ್ಮಾನ ಮಾಡಿದ್ದೇನೆ. ಬೆಳಗಾವಿ ಅಧಿವವೇಶನದಲ್ಲಿ ಈ ಬಗ್ಗೆ ಘೋಷಣೆ ಮಾಡುತ್ತೇನೆ. ಭಾಷೆ ಉಳಿದರೆ ನಮ್ಮ ಸಂಸ್ಕೃತಿ ಉಳಿಯುತ್ತದೆ. ಕೆಂಪು, ಹಳದಿ ಬಣ್ಣ ನಮ್ಮ ನಾಡಿನ ಅಸ್ಮಿತೆ.
ಕನ್ನಡ ಉಳಿದರೆ ನಮ್ಮ ನಾಡು ಉಳಿಯುತ್ತದೆ ಎಂದು ನಾವೆಲ್ಲರೂ ಪ್ರತಿಪಾದಿಸುತ್ತೇವೆ.- ಡಿ.ಕೆ.ಶಿವಕುಮಾರ್ , ಮುಖ್ಯಮಂತ್ರಿ
5ಕೆಆರ್ ಎಂಎನ್ 9,10.ಜೆಪಿಜಿ9.ರಾಮನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ, ಫುಡ್ ಸ್ಟ್ರೀಟ್ , ಕ್ಲಾಕ್ ಟವರ್ ಮತ್ತು ನಗರಸಭೆ ನೂತನ ಸಭಾಂಗಣ ಲೋಕಾರ್ಪಣೆ ಹಾಗೂ 71ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು.
10.ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು.----------------------