ರಾಣಿಬೆನ್ನೂರು: ನಗರದ ಸರ್ವತೋಮುಖ ಅಭಿವೃದ್ಧಿಗೆ ಬದ್ಧನಾಗಿರುವೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿಸಿದರು.ಇಲ್ಲಿಯ ಮಾರುತಿ ನಗರದ ನೀಲಕಂಠೇಶ್ವರ ದೇವಸ್ಥಾನ ಆವರಣದ ರಸ್ತೆ ಹಾಗೂ ಪೇವರ್ಸ್ ಕಾಮಗಾರಿಗೆ ಸೋಮವಾರ ಪೂಜೆ ನೆರವೇರಿಸಿ ಮಾತನಾಡಿದರು.
ಶಿಗ್ಗಾಂವಿ: ಮಹಿಳೆಯರು ಅರ್ಥಿಕ ಸಬಲೀಕರಣ ದೃಷ್ಟಿಯಿಂದ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭಾಗವಹಿಸುವಿಕೆ ಮಹತ್ವದ್ದು, ಕುಟುಂಬದ ನಿರ್ವಹಣೆಯಲ್ಲಿ ಯಜಮಾನಿಯ ಪಾತ್ರ ಮಾತ್ರ ಬಹುದೊಡ್ಡದು ಎಂದು ಜಿಪಂ ಸಿಇಒ ರುಚಿ ಬಿಂದಲ್ ತಿಳಿಸಿದರು.ತಾಲೂಕಿನ ಬನ್ನೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಾಣ ಹಂತದಲ್ಲಿರುವ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಮಹಿಳಾ ಕೂಲಿ ಕಾರ್ಮಿಕರ ಉದ್ದೇಶಿಸಿ ಮಾತನಾಡಿದರು.
ಮಹಿಳೆಯರು ಹಾಗೂ ಪುರುಷರಿಗೆ ಸಮಾನ ಕೆಲಸಕ್ಕೆ ವೇತನ ₹೩೭೦ಕ್ಕೆ ಹೆಚ್ಚಿಸಿ ಮಹಿಳಾ ಸ್ನೇಹಿ ಕಾರ್ಯಕ್ರಮ ರೂಪಿಸಿ ಅಧಿಸೂಚನೆ ನೀಡಲಾಗಿದೆ. ಅಕುಶಲ ಕಾರ್ಮಿಕರ ಕೂಲಿ ವೇತನ ಹೆಚ್ಚಳದಿಂದ ಕಾರ್ಮಿಕರ ಉದ್ಯೋಗಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗಿರಿಜವ್ವ ದೊಡ್ಮನಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಮಣ್ಣವಡ್ಡರ. ಸದಸ್ಯ ವೀರಭದ್ರಪ್ಪ ಅಗಡಿ, ಮುನೀರಹ್ಮದ್ ಶೇಖಸನದಿ, ಶಂಕ್ರಪ್ಪ ಬಟ್ಟಿ, ಗ್ರಾಮದ ಹಿರಿಯರಾದ ಠಾಕನಗೌಡ ಪಾಟೀಲ, ತಾಲೂಕು ಉದ್ಯೋಗ ಖಾತ್ರಿ ಯೋಜನಾ ನಿರ್ವಾಹಕ ನೃಪತಿ ಭೂಸರೆಡ್ಡಿ, ಸಹಾಯಕ ನಿರ್ದೇಶಕ ಪ್ರಕಾಶ ಔಂಧಕರ, ಪಿಡಿಒ ಬಸವರಾಜ ಪೂಜಾರ, ತಾಲೂಕು ಉದ್ಯೋಗ ಖಾತ್ರಿ ಯೋಜನೆಯ ಇ.ಸಿ. ರಾಜೇಶ್ವರಿ ಬಿ.ಎನ್. ಅಲ್ಲದೇ ಪಂಚಾಯಿತಿ ಮಹಿಳಾ ಸಿಬ್ಬಂದಿ ಇದ್ದರು.